ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

HUN-NOV-23-6(MARADURU PROGRAMME)
ಹುಣಸೂರು ತಾಲೂಕು ಮರದೂರು ಗ್ರಾಮದಲ್ಲಿ ಆಯೋಜಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುಶ್ಮಿತಾ, ತೋಟಗಾರಿಕಾ ಇಲಾಖೆಯ ಡಿಡಿ ಡಾ.ಮಂಜುನಾಥ್ ಅಂಗಡಿ, ಎಡಿ ನೇತ್ರಾವತಿ, ಮುದ್ದನಾಯಕ ಇತರರಿದ್ದರು.
Published on

ಹುಣಸೂರು: ತೋಟಗಾರಿಕಾ ಬೆಳೆಗಳಿಗೆ ಸರ್ಕಾರ ಹೆಚ್ಚಿನ ಪ್ರಮಾಣದ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಮರದೂರು ಗ್ರಾಮದ ರೈತ ಮುದ್ದನಾಯಕರ ತೆಂಗಿನ ತೋಟದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಸುಧಾರಿತ ಬೇಸಾಯ ಕ್ರಮಗಳ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತೋಟಗಾರಿಕಾ ಬೆಳೆಗಳ ಅವಶ್ಯಕತೆ ಹೆಚ್ಚಿದೆ. ತೋಟಗಾರಿಕಾ ಬೆಳೆಗಳ ಪ್ರೋತ್ಸಾಹಕ್ಕಾಗಿ ನೀರು, ಕಳೆ ನಿರ್ವಹಣೆ, ಹನಿ ನೀರಾವರಿ ಯೋಜನೆ, ಅವಶ್ಯಕ ಯಂತ್ರೋಪಕರಣ ಸೇರಿದಂತೆ ರೈತರಿಗೆ ಆರ್ಥಿಕ ನೆರವು ಅಗತ್ಯವಿದೆ. ಈ ಕುರಿತಾಗಿ ಈಗಿನ ಸರ್ಕಾರದ ನಿಲುವು ಅಸ್ಪಷ್ಟವಿದೆ. ಅಲ್ಲದೆ ಶಾಲಾ-ಕಾಲೇಜುಗಳ ಹಂತದಲ್ಲೇ ತೋಟಗಾರಿಕಾ ಬೆಳೆಗಳ ಕುರಿತು ವಿದ್ಯಾರ್ಥಿಗಳಿಗೆ ಕೃಷಿ ಪಾಠದ ಮೂಲಕ ಅರಿವು ಮೂಡಿಸುವ ಪಠ್ಯಗಳನ್ನು ಅಳವಡಿಸುವುದು ಸೂಕ್ತ ಎಂದರು.

ಹವಾಮಾನಕ್ಕೆ ಅನುಗುಣವಾಗಿ ಬೆಳೆ: ರೈತರು ತಮ್ಮ ಭಾಗದಲ್ಲಿರುವ ಹವಾಮಾನಕ್ಕನುಗುಣವಾಗಿ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು. ತಾಲೂಕಿನಲ್ಲಿ ಮಾವು ಬೆಳೆಯಲ್ಲಿ ಇಳುವರಿ ಕುಂಠಿತಗೊಂಡಿದೆ. ಮಾವು, ಅಡಕೆ, ತೆಂಗು, ಬಾಳೆ, ನುಗ್ಗೆ ಮುಂತಾದ ಬೆಳೆಗಳ ಕುರಿತು ಇಲಾಖೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಿ ಸೂಕ್ತ ಬೆಳೆಗಳನ್ನು ಆಯ್ದುಕೊಡುವತ್ತ ಗಮನಹರಿಸಬೇಕೆಂದು ಸೂಚಿಸಿದರು.

ಮೂಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ಸುಶ್ಮಿತಾ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ ಮಂಜುನಾಥ್ ಅಂಗಡಿ, ಸಹಾಯಕ ನಿರ್ದೇಶಕಿ ನೇತ್ರಾವತಿ, ಎಒಗಳಾದ ಚೈತ್ರಾ, ನವೀನ್, ಹೊಂಬೇಗೌಡ, ಪಾಷ, ಮೂಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ವಾಮಿ, ಮುಖಂಡರಾದ ಸತ್ಯಪ್ಪ ಹರವೆ, ಶ್ರೀಧರ್, ಗೋವಿಂದೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net