ಕುದುರೆ ಚನ್ನಾಗಿದ್ದರೆ ಖರೀದಿ ಮಾಡುವವ ಮನೆ ಬಾಗಿಲಿಗೇ ಬರುತ್ತಾನೆಬಿಜೆಪಿ ಜತೆ ಮೈತ್ರಿ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ವ್ಯಂಗ್ಯ

c m ibrahim
Published on

ಬೆಂಗಳೂರು: ಕುದುರೆ ಚನ್ನಾಗಿದ್ದರೆ ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ. ಖರೀದಿ ಮಾಡುವವನು ಮನೆಗೆ ಬರುತ್ತಾನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಬಿಜೆಪಿ ಮೈತ್ರಿಗೆ ಆಹ್ವಾನ ನೀಡಿರುವ ಕುರಿತು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಿಷ್ಠಾವಂತ ಕಾರ್ಯಕರ್ತರ ದೊಡ್ಡ ಪಡೆ ನಮ್ಮದು. ಹಾಗಾಗಿ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರು.

ಮೈತ್ರಿ ಆತುರ, ಅನಿವಾರ್ಯತೆ ನಮಗಿಲ್ಲ. ಆದರೆ, ಗೌರವ ಕೊಟ್ಟು ಮುಂದೆ ಬರುವವರನ್ನು ಸ್ವಾಗತಿಸುತ್ತೇವೆ. ನಮಗೆ ರಾಜ್ಯದ ಹಿತ ಮುಖ್ಯ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ವಿಧಾನಸಭೆಯಲ್ಲಿ ದರಿದ್ರಲಕ್ಷ್ಮಿ ಕುಳಿತುಕೊಳ್ಳುವ ಕೆಲಸ ಮಾಡಿದ್ದಾರೆ. ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಆಟೋ, ಖಾಸಗಿ ಬಸ್ ಮಾಲೀಕರು ಬೀದಿಗೆ ಬಂದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಯಿತು. ಕುಮಾರಸ್ವಾಮಿ ಸಿಎಂ ಆಗಿದ್ದರೆ ಒಂದು ಹನಿ ನೀರು ಬಿಡುತ್ತಿರಲಿಲ್ಲ ಎಂದು ಟೀಕಿಸಿದರು.

ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್, ಸಿ ಟೀಮ್ ಎನ್ನುತ್ತಾರೆ. ನಿತೀಶ್ ಕುಮಾರ್ ಎಲ್ಲಿದ್ದರು? ಕುಮಾರಸ್ವಾಮಿ ಬಸ್ಸ್ ನಲ್ಲಿ ಕೂರಿಸಿಕೊಂಡು ಹೋದವರು ಯಾರು? ಎಂದು ಪ್ರಶ್ನಿಸಿದರು.

ರೈತರ ಚಿಂತೆ ನಿಮಗಿಲ್ಲ. ಮುಸ್ಲಿಂರಿಗೆ ಏನು ಮಾಡಿದ್ದೀರಿ? ನಾನು ಆರೂವರೆ ಕೋಟಿ ಜನರ ಸೇವಕರಾಗಿ ಕೆಲಸ ಮಾಡುತ್ತೇವೆ. ಕರ್ನಾಟಕ ಜನತಾದಳ ಅಡ ಇಟ್ಟು ನಾವು ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದು ಇಬ್ರಾಹಿಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net