VIDOE| ಕಾರಿಗೆ ರೈಲು ಡಿಕ್ಕಿಯಾದರೂ ಬದುಕುಳಿದ ಚಾಲಕ: ಭಯಾನಕ ವಿಡಿಯೋ ವೈರಲ್​!

Train
Published on

ಕ್ಯಾಲಿಪೋರ್ನಿಯ: ರೈಲ್ವೆ ಕ್ರಾಸಿಂಗ್​ ದಾಟುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಈ ಭಯಾನಕ ವಿಡಿಯೋ ಸಾಕ್ಷಿಯಾಗಿದೆ.

ರೈಲ್ವೆ ಕ್ರಾಸಿಂಗ್​ ಗೇಟ್​ ಅಳವಡಿಸಿದ್ದರು ಅದನ್ನು ಲೆಕ್ಕಿಸದ ಬಿಎಂಡಬ್ಲ್ಯು ಕಾರು ಚಾಲಕ ಟ್ರೈನ್​ ಟ್ರ್ಯಾಕ್ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿದ ವಿಡಿಯೋವನ್ನು ಕ್ಯಾಲಿಪೋರ್ನಿಯಾದ ಲಾಸ್​ ಎಂಜಲಿಸ್​ ನಗರದ ಪೊಲೀಸರು​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಕಳೆದ ಮಂಗಳವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ದಕ್ಷಿಣ ಲಾಸ್​ ಎಂಜಲಿಸ್​ನಲ್ಲಿ ಈ ಘಟನೆ ನಡೆದಿದೆ. ಅವಘಡದಲ್ಲಿ ಕಾರು ನುಜ್ಜುಗುಜ್ಜಾಗಿದ್ದರೂ ಚಾಲಕ ಮಾತ್ರ ಸಣ್ಣ ಪುಟ್ಟ ಗಾಯಗಳಿಂದ ಪವಾಡವೆಂಬಂತೆ ಪಾರಾಗಿದ್ದಾನೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಲಾಸ್​ ಎಂಜಲಿಸ್​ ನಗರದ ಪೊಲೀಸರು, ಇದೊಂದು ದುಃಖಕರ ಫಲಿತಾಂಶ ಆಗಿರಬಹುದು. ಚಾಲಕ ಸಣ್ಣ ಗಾಯಗಳಿಂದ ಬಚಾವ್​ ಆಗಿದ್ದಾರೆ. ಆದರೂ ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ರೈಲ್ವೆ ಟ್ರ್ಯಾಕ್​ ಬಳಿ ತುಂಬಾ ಜಾಗರೂಕರಾಗಿರಬೇಕು. ಯಾವಾಗಲೂ ಟ್ರಾಫಿಕ್​ ಸಿಗ್ನಲ್​ ಮತ್ತು ಸಾಧನಗಳಿಗೆ ವಿಧೇಯರಾಗಿರಿ ಎಂದು ಮನವಿ ಮಾಡಿದ್ದಾರೆ.

ಕೊನೆಯಲ್ಲಿ ಟ್ರೈನ್​ ಡಿಕ್ಕಿಗೆ ಜಖಂಗೊಂಡ ಕಾರಿನ ಫೋಟೋವನ್ನು ಅಪ್​ಲೋಡ್​ ಮಾಡಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲೂ ಭಾರಿ ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.ವಿಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net