

HOROSCOPE 2025: ಕ್ರೋಧಿನಾಮ ಸಂವತ್ಸರದ ಅಂತಿಮ 3 ತಿಂಗಳು 2025ರ ಮಾ. 29ಕ್ಕೆ ಕೊನೆಗೊಂಡು ವಿಶ್ವಾವಸು ಸಂವತ್ಸರ ಮಾ. 30ರಂದು ಸೂರ್ಯಗ್ರಹಣದೊಂದಿಗೆ (ಭಾರತದಲ್ಲಿ ಗೋಚರಿಸುವುದಿಲ್ಲ್ಲ) ಚಾಂದ್ರಮಾನ ಯುಗಾದಿ ಪ್ರಾರಂಭಗೊಂಡು, ಷಷ್ಟಗ್ರಹ ಕೂಟದೊಂದಿಗೆ ಪ್ರಾರಂಭಗೊಳ್ಳುತ್ತದೆ. ಈ ಗ್ರಹಗಳ ಕಕ್ಷಾ ಮಾರ್ಗ ಇತ್ಯಾದಿ ಗಣಿತ ಕ್ರಮ, ಚಲನವಲನ ಅಭ್ಯಸಿಸಿ ದ್ವಾದಶ ರಾಶಿಯವರ ಗೋಚಾರ ಫಲಗಳನ್ನು ಇಲ್ಲಿ ವಿವರಿಸಲಾಗಿದೆ.
| ಗಜೇಂದ್ರ ಬಾಬು, ಜ್ಯೋತಿಷಿ ಹಾಗೂ ವಾಸ್ತು ತಜ್ಞರು, ಆದಿತ್ಯ ಜ್ಯೋತಿರ್ ವಿಜ್ಞಾನ ಶಾಲೆ
ಗುರು: ವರ್ಷದ ಪ್ರಾರಂಭದಿಂದ ವೃಷಭ ರಾಶಿಯಲ್ಲೂ ಅನಂತರ 14.05.2025ರಿಂದ ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ.
ಶನೇಶ್ಚರ: ವರ್ಷದ ಪ್ರಾರಂಭದಿಂದ 29.03.2025ರವರೆಗೂ ಅನಂತರ ನೂತನ ಚಾಂದ್ರಮಾನ ಯುಗಾದಿಯಿಂದ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.
ರಾಹು: ವರ್ಷದ ಪ್ರಾರಂಭದಲ್ಲಿ ಛಾಯಾಗ್ರಹವಾದ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು ಅನಂತರ ಕುಂಭ ರಾಶಿಗೆ 18.05.2025ರಂದು ಪ್ರವೇಶಿಸುತ್ತಾನೆ.
ಕೇತು: ವರ್ಷದ ಪ್ರಾರಂಭದಲ್ಲಿ ಛಾಯಾಗ್ರಹವಾದ ಕೇತು ಗ್ರಹವು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದು ಅನಂತರ ದಿನಾಂಕ: 18.05.2025ರಂದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.
ಕುಜ: ಮಂಗಳ ಮಂಗಳ ಗ್ರಹನು ಪ್ರಾರಂಭದಲ್ಲಿ ವಕ್ರಿ ಚಲನೆಯಲ್ಲಿದ್ದು (ಹಿಂಬದಿ) ಕಟಕ ರಾಶಿಯಲ್ಲಿ ಸಂಚರಿಸುತ್ತಿದ್ದು ಅನಂತರ 25.1.2025ರಂದು ಮಿಥುನ ರಾಶಿಯನ್ನು ಪ್ರವೇಶಿಸಿ 25.2.2025ರಂದು ಹಿಂಬದಿ ಚಲನೆಯಿಂದ ನೇರ ಚಲನೆಗೆ ಮಾರ್ಗ ಹಿಡಿದು ಮತ್ತೆ ಕಟಕ ರಾಶಿಯನ್ನು 29.3.2025ರಂದು ಪ್ರವೇಶಿಸುತ್ತಾನೆ.
ಮುಂದಿನ ವಿಶ್ವಾವಸು ಸಂವತ್ಸರದ ಯುಗಾದಿಯು ಸೂರ್ಯ ಗ್ರಹಣದಿಂದ (ಭಾರತ ದೇಶಕ್ಕೆ ಗೋಚರಿಸುವುದಿಲ್ಲ) ಆರಂಭಗೊಂಡು ಮೀನ ರಾಶಿಯಲ್ಲಿ ಆರು ಗ್ರಹಗಳಾದ ರವಿ-ಬುಧ-ಶುಕ್ರ ಶನೇಶ್ಚರ-ರಾಜು-ಚಂದ್ರರು ಕೂಡಿ ಷಷ್ಠ ಗ್ರಹ ಕೂಟಗಳಿಂದ ಪ್ರಾರಂಭವಾಗುವುದು. ಮುಂದಿನ ಸಾಲಿನಲ್ಲಿ ಸಂಭವಿಸುವ ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣಗಳಲ್ಲಿ (ಕುಂಭ-ಸಿಂಹ) ಭಾರತಕ್ಕೆ ಗೋಚರಿಸುವುದು ಸೆಪ್ಟೆಂಬರ್ 7-8ರ ಚಂದ್ರಗ್ರಹಣ ಮಾತ್ರ. ಜನ್ಮಜಾತಕದಲ್ಲಿ ದಶಾಭುಕ್ತಿಗಳು ಹಾಗೂ ಅಷ್ಠಕವರ್ಗದ ಬಿಂದುಗಳು ಶುಭವಾಗಿದ್ದರೆ ರಾಶಿ ಫಲದ ಶುಭ-ಅಶುಭ ಫಲಗಳು ವ್ಯತ್ಯಾಸಗೊಳ್ಳುತ್ತದೆ ಎಂಬುದನ್ನು ಓದುಗರು ಗಮನಿಸತಕ್ಕದ್ದು.
ಮೊದಲ 4 ತಿಂಗಳು ಸೂರ್ಯಸಂಚಾರ ಶುಭಫಲಗಳನ್ನು, ಕುಜನ ಚಲನೆ ಮೇವರೆಗೆ ಶುಭ ಫಲಗಳನ್ನು ನೀಡುತ್ತದೆ. ಜೂನ್‌ವರೆಗೆ ಈ ಶುಭಫಲ ಅನುಭವಿಸಿದ ನಂತರ ಉತ್ತರಾರ್ಧದಲ್ಲಿ ಬಹಳ ಜಾಗೃತರಾಗಿರಬೇಕು. ಗುರುವು ಶುಭನಾಗಿ ಮೇವರೆಗೆ ದ್ವಿತೀಯದಲ್ಲಿ ಸಂಚರಿಸುತ್ತಿದ್ದು, ಕುಟುಂಬದಲ್ಲಿ ಒಳ್ಳೆಯ ವಾತಾವರಣ, ಯತ್ನಕಾರ್ಯಸಿದ್ಧಿ, ಬಂಧುಮಿತ್ರರಿಂದ ಸಹಾಯ, ಪುಣ್ಯ ಕ್ಷೇತ್ರಗಳ ದರ್ಶನ, ದೇವಕೃಪೆ, ಮನಸ್ಸಿಗೆ ಶಾಂತಿ, ಸಾರ್ವಜನಿಕ ಜೀವನದಲ್ಲಿ ಗೌರವ, ಧನಲಾಭ, ವಾಹನಲಾಭ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ, ಸ್ಥಿರಾಸ್ತಿ ಸಂಪಾದನೆ, ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ, ಅವಿವಾಹಿತರಿಗೆ ವಿವಾಹ, ತಾಂತ್ರಿಕತೆಯಲ್ಲಿ ಕೌಶಲ್ಯ ಅಭಿವೃದ್ಧಿ, ದುಡಿದ ಕಾರ್ಯಗಳಿಗೆ ಪ್ರತಿಫಲ, ಉನ್ನತಿ ಕಾಣುವಿರಿ. ಯುಗಾದಿ ನಂತರ ಗ್ರಹಗಳ ಚಲನೆಗಳಿಂದ ಫಲಾಫಲ ಮಾರ್ಪಟ್ಟು ತೊಂದರೆಗಳು ಆರಂಭವಾಗುತ್ತವೆ.
ಆರೋಗ್ಯ: ಆರೋಗ್ಯ ಮಧ್ಯಮ. ಆಗಾಗ್ಗೆ ಜ್ವರ, ತಲೆನೋವು, ನಿದ್ರಾಹೀನತೆ, ನೇತ್ರಬಾಧೆ, ಅಪಸ್ಮಾರ, ತಲೆತಿರುಗುವಿಕೆ, ಆಮಶಂಕೆ, ಮಲಬದ್ಧತೆ ಸಮಸ್ಯೆ. ಬೆಂಕಿಯಿಂದ ದೂರವಿರಿ.
ಯುವಕರು, ವಿದ್ಯಾರ್ಥಿಗಳು: ವಿದ್ಯೆಯಲ್ಲಿ ಮುನ್ನಡೆ, ಇತರ ವಿಷಯಗಳಲ್ಲೂ ಆಸಕ್ತಿ. ಕಾನೂನು, ಪ್ರವಾಸೋದ್ಯಮ, ತತ್ವಶಾಸ್ತ್ರ, ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಶುಭ ಸಮಯ, ಉನ್ನತ ವ್ಯಾಸಂಗಕ್ಕೆ ಶುಭದಾಯಕ.
ಪರಿಹಾರ: ಪ್ರತಿ ಶನಿವಾರ ಹನುಮಾನ್ ದೇವಾಲಯ, ತುಳಸಿ ಅರ್ಚನೆ, ತಿಲತೈಲ ದಾನ, ನರಸಿಂಹ ಸ್ತೋತ್ರ, ಗುರು ಪಾರಾಯಣ/ರಾಘವೇಂದ್ರಸ್ವಾಮಿ ಸೇವೆ.
ದಾನ: ತೊಗರಿ
ಉದ್ಯೋಗ, ವೃತ್ತಿಯಲ್ಲಿ ಮುನ್ನಡೆ. ಧನಲಾಭ, ತಂದೆ ಆರೋಗ್ಯಕ್ಕೆ ವೆಚ್ಚ. ಶನೇಶ್ಚರನು ಯುಗಾದಿ ನಂತರ ಲಾಭ ಸ್ಥಾನದಲ್ಲಿ ಸಂಚರಿಸುವುದರಿಂದ ಉದ್ಯೋಗದಲ್ಲಿ ಬಡ್ತಿ, ನೂತನ ವ್ಯಾಪಾರ ಪ್ರಾರಂಭಿಸುವವರಿಗೆ ಹೆಚ್ಚಿನ ಲಾಭ, ಕೃಷಿಯಲ್ಲಿ ಅಧಿಕ ಲಾಭ. ಶುಭ ಕಾರ್ಯ ಯತ್ನದಲ್ಲಿ ಪ್ರಗತಿ, ಧರ್ಮ ಕಾರ್ಯಾಸಕ್ತಿ ವ್ಯವಹಾರಗಳಲ್ಲಿ ಉತ್ತಮ ಫಲ. ಹೊಸ ಸ್ನೇಹಿತರು ದೊರೆಯುವರು, ಕನಸುಗಳೆಲ್ಲ ನನಸಾಗುವ ಸಮಯ. ಕೇತು ಪಂಚಮದಲ್ಲಿ ಚಲಿಸುತ್ತ ಗುರುವಿನ ದೃಷ್ಟಿಗೆ ಒಳಪಟ್ಟಿರುವುದರಿಂದ ಸಂತಾನ ಭಾಗ್ಯಕ್ಕೆ ಉತ್ತಮ ಸಮಯ, ಆಧ್ಯಾತ್ಮಿಕ ಒಲವು. ಆತ್ಮಬಲ, ಶಾಂತಿ, ಧೈರ್ಯದಿಂದ ಜೀವನ ನಡೆಸಿದರೆ ಶುಭ ಫಲ.
ಆರೋಗ್ಯ: ನೇತ್ರಬಾಧೆ, ಕಿವಿನೋವು, ಬೊಜ್ಜು, ಗಂಟಲು ನೋವು, ಮೂಲವ್ಯಾಧಿ, ಅಜೀರ್ಣ ಸಮಸ್ಯೆ.
ಯುವಕರು, ವಿದ್ಯಾರ್ಥಿಗಳು: ಗುರಿಸಾಧನೆಯತ್ತ ಗಮನವಿರಲಿ. ಚಂಚಲತೆಯಿಂದ ದೂರವಿರಿ, ಸುತ್ತಲಿನವರಿಂದ ಜಾಗೃತರಾಗಿರಿ. ಓದಿನಲ್ಲಿ ಕಠಿಣವಾಗಿ ತೊಡಗಿಸಿಕೊಳ್ಳಿ. ಗುಂಪು ಓದು ಬಹಳ ಅನುಕೂಲ. ವರ್ಷಾಂತ್ಯದಲ್ಲಿ ಶುಭಫಲ.
ಪರಿಹಾರ: ಶಿವಾಲಯದಲ್ಲಿ ಪ್ರದೋಶ ಪೂಜೆ-ಗೋಪೂಜೆ, ದೇವಿ ಆರಾಧನೆ
ದಾನ: ಅವರೆಕಾಳು
ಸೂರ್ಯ ಚಲನೆಯಿಂದ ಮೊದಲ 4 ತಿಂಗಳು ಶುಭ, ಆರ್ಥಿಕ ಲಾಭ, ಅನವಶ್ಯಕ ಖರ್ಚಿನ ಬಗ್ಗೆ ಎಚ್ಚರ ವಹಿಸಿ, ಮೃತ್ತಿ ವ್ಯಾಪಾರಸ್ಥರಿಗೆ ಶುಭ ಸಮಯ. ಪುತ್ರರಿಂದ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ಭಾಗ್ಯ ತೆರೆವ ಸಮಯ, ತಂದೆಗೆ ವೃತ್ತಿ-ವ್ಯಾಪಾರದಲ್ಲಿ ಲಾಭ, ಗೃಹದಲ್ಲಿ ಶುಭ ಕಾರ್ಯ, ಸಂತಾನವೃದ್ಧಿ, ಪತಿ-ಪತ್ನಿಗೆ ಶುಭ. ಯುಗಾದಿ ನಂತರ ಜನ್ಮ ರಾಶಿಗೆ ಗುರು ಪ್ರವೇಶಿಸಿ ಆರೋಗ್ಯ ಸುಧಾರಣೆ, ದೇವತಾ ದರ್ಶನದಿಂದ ನೆಮ್ಮದಿ, ಶುಭಕಾರ್ಯ ಯತ್ನಫಲ, ಉದ್ಯೋಗದಲ್ಲಿ ಪ್ರಗತಿ. ಪುತ್ರ ಸಂತಾನ ಲಾಭ, ಮಕ್ಕಳಿಗೆ ಯಶಸ್ಸು, ಪತ್ನಿಯಿಂದ ಲಾಭ. ಸಮಾಜದಲ್ಲಿ ಗೌರವ, ಸನ್ಮಾನ. ಸಮಾಜಮುಖಿ ಕೆಲಸದಲ್ಲಿ ಬಿಜಿ. ವ್ಯಾಪಾರ-ವ್ಯವಹಾರ ವೃದ್ಧಿಗೆ ಉತ್ತಮ ಸಮಯ. ಮೇ ನಂತರ ಆಧ್ಯಾತ್ಮಿಕ ಒಲವು. ದೂರ ಪ್ರಯಾಣ, ಒಡಹುಟ್ಟಿದವರಿಗೆ ಶುಭ ಸಮಯ, ಉತ್ತಮ ಫಲ. ಕೇತುವಿನ ಪ್ರಭಾವದಿಂದ ಗೃಹದಲ್ಲಿ ಶಾಂತಿಭಂಗ, ಹಿಂದಿನ ತಪ್ಪು ಸರಿಪಡಿಸಿಕೊಳ್ಳಿ. ಸ್ಥಿರಾಸ್ತಿ ಬಗ್ಗೆ ಎಚ್ಚರ. ಮೇ ನಂತರ ನೆರೆಹೊರೆ, ಒಡಹುಟ್ಟಿದವರಿಂದ ಮಾನಸಿಕ ಒತ್ತಡ.
ಆರೋಗ್ಯ: ಗಾಳಿಯಿಂದ ಸೋಂಕು ತಗಲಿ ಶ್ವಾಸಕೋಶ ಸಂಬಂಧಿ ಕಾಯಿಲೆ, ಅಸ್ತಮಾ, ಕೆಮ್ಮು, ಮಂದಾಗ್ನಿ, ದುರ್ಬಲ ಜೀರ್ಣಶಕ್ತಿ, ತೊದಲುವಿಕೆ ಸಮಸ್ಯೆ.
ಯುವಕರು, ವಿದ್ಯಾರ್ಥಿಗಳು: ಉನ್ನತ ಶಿಕ್ಷಣ ಪಡೆಯಲು ಶುಭ ಸಮಯ, ಸಂಶೋಧನಾ ವಿದ್ಯಾರ್ಥಿಗಳ ಅಭಿವೃದ್ಧಿ. ಹೊರಗಿನ ವಿಷಯ ನಿರ್ಲಕ್ಷಿಸಿ ಸ್ವಂತ ವಿದ್ಯಾಭ್ಯಾಸಕ್ಕೆ ಗಮನ ನೀಡಿದರೆ ಸಾಧನೆ.
ಪರಿಹಾರ: ವಿಷ್ಣು ಸಹಸ್ರನಾಮ, ಗುರು ಚರಿತ್ರೆ ಪಾರಾಯಣ, ಗಣಪತಿ ಆರಾಧನೆ
ದಾನ: ಹೆಸರು ಕಾಳು
ಸೂರ್ಯನ ಚಲನೆಯಿಂದ ಪ್ರಾರಂಭದ 3 ತಿಂಗಳು ಕಾಲ ಶುಭ ಫಲ. ಅಷ್ಟಮ ಶನಿಯ ಅಂತ್ಯ ಭಾಗ ಯುಗಾದಿಯೊಂದಿಗೆ ಮುಗಿದು ನಂತರ ಶುಭಫಲ. ಕೌಟುಂಬಿಕ ಜೀವನ ಉತ್ತಮ. ಸಂಬಂಧಗಳಿಂದ ಜಾಗೃತರಾಗಿರಿ. ಅವಿವಾಹಿತರಿಗೆ ವಿವಾಹ ಯೋಗ. ತೀರ್ಥಕ್ಷೇತ್ರ ದರ್ಶನಕ್ಕೆ ಶುಭ ಸಮಯ. ವ್ಯಾಪಾರ-ವ್ಯವಹಾರ ಉತ್ತಮ. ಧನ-ಧಾನ್ಯ ಲಾಭ. ನಿವೇಶನ, ನೂತನ ಗೃಹ, ವಾಹನ ಹೊಂದುವಿರಿ. ಉದ್ಯೋಗಸ್ಥರಿಗೆ ಬಡ್ತಿ, ಪ್ರಯಾಣದಲ್ಲಿ ಶುಭ. ಒಡಹುಟ್ಟಿದವರಿಗೆ ಶುಭ, ಪುತ್ರ ಸಂತಾನಕ್ಕೆ ಶುಭ, ಮಕ್ಕಳಿಂದ ಉತ್ತಮ ವಾರ್ತೆ, ಪತ್ನಿ ಆರೋಗ್ಯ ಸುಧಾರಣೆ. ಮೇ ನಂತರ ಆಸ್ಪತ್ರೆ ವೆಚ್ಚ, ಸ್ಥಾನಪಲ್ಲಟ, ವೃತ್ತಿಯಲ್ಲಿ ಅಸಮಾಧಾನ, ವಿದೇಶ ಪ್ರಯಾಣ ಸಾಧ್ಯತೆ. ವಾಹನ ಚಾಲನೆಯಲ್ಲಿ ಜಾಗೃತರಾಗಿರಿ, ಆರೋಗ್ಯದಲ್ಲಿ ಸುಧಾರಣೆ, ಕುಟುಂಬ ಸೌಖ್ಯ, ಅಭಿವೃದ್ಧಿ, ಆಸ್ತಿ ಖರೀದಿ. ದೂರ ಪ್ರಯಾಣ, ಆಧ್ಯಾತ್ಮಿಕ ಒಲವು, ಮೇ ನಂತರ ನವ ಚೈತನ್ಯ. ಒಡಹುಟ್ಟಿದವರೊಂದಿಗೆ ಉತ್ತಮ ಬಾಂಧವ್ಯ.
ಆರೋಗ್ಯ: ಹೃದಯ ಸಂಬಂಧಿ ಕಾಯಿಲೆ, ಅಜೀರ್ಣ, ಗ್ಯಾಸ್ಟ್ರಿಕ್, ಬೊಜ್ಜು, ರಕ್ತದೊತ್ತಡ, ಶ್ವಾಸಕೋಶ, ಅರುಚಿ, ರಕ್ತಹೀನತೆ ಸಮಸ್ಯೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ವಿದ್ಯಾಭ್ಯಾಸದಲ್ಲಿ ಮುನ್ನಡೆ. ಉನ್ನತ ಶಿಕ್ಷಣಕ್ಕೆ ಸುಗಮ ದಾರಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಗತಿ. ಚಂಚಲ ಮನಸ್ಸನ್ನು ಹತೋಟಿಯಲ್ಲಿಡಿ.
ಪರಿಹಾರ: ನದಿ ತೀರದಲ್ಲಿರುವ ಶಿವಾಲಯದಲ್ಲಿ ರುದ್ರಾಭಿಷೇಕ, ಆಂಜನೇಯ ಪೂಜೆ, ದೇವಿ ಆರಾಧನೆ
ದಾನ: ಅಕ್ಕಿ, ಅನ್ನ
ಮೊದಲ 4 ತಿಂಗಳು ಸೂರ್ಯನಿಂದ ಶುಭಫಲ. ಹಣದ ವ್ಯವಹಾರದಲ್ಲಿ ಶುಭ. ಉತ್ತಮ ಚಿಕಿತ್ಸೆ. ಪ್ರಯಾಣ. ಪುತ್ರಸಂತಾನ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ, ಇತರ ಶುಭಫಲ ಪ್ರಾಪ್ತಿ. ಅಷ್ಟಮ ಶನಿ ಪ್ರಭಾವದಿಂದ ಮೇಲಧಿಕಾರಿಗಳ ಕಿರುಕುಳ, ಶಾರೀರಿಕ- ಮಾನಸಿಕ ಒತ್ತಡ. ಕೆಲಸಗಳು ಮಂದಗತಿ. ಕುಟುಂಬದಲ್ಲಿ ಒಂಟಿ ಜೀವನ. ಆರೋಗ್ಯ ಬಾಧೆ, ಧನಕ್ಷಯ. ವೃತ್ತಿ-ವ್ಯಾಪಾರದಲ್ಲಿ ಹಿನ್ನಡೆ, ನೇತ್ರಬಾಧೆ, ಉದರ ಬಾಧೆ. ಸ್ನೇಹಿತರು, ಕುಟುಂಬಸ್ಥರಿಂದ ನೆರವು ಸಿಗದು. ವೆಚ್ಚ ಅಧಿಕ, ಸರ್ಕಾರಿ ನೌಕರರಿಗೆ ದೂರದ ಊರುಗಳಿಗೆ ವರ್ಗಾವಣೆ, ಮುಂದಿನ ಸಂವತ್ಸರದ ನಂತರ ಜನಪ್ರಿಯತೆ. ಗೃಹದಲ್ಲಿ ಶುಭ ಸಮಾರಂಭ, ಸಮಾಜದಲ್ಲಿ ಎಲ್ಲರಿಂದ ಸಹಕಾರ. ಹಣದ ವಿಚಾರದಲ್ಲಿ ಜಾಗೃತರಾಗಿರಿ. ಮಾತಿನಿಂದ ಕಲಹ, ಕುಟುಂಬದಲ್ಲಿ ಅಶಾಂತಿ, ಆರ್ಥಿಕ ಸಂಕಷ್ಟ. ಮೇ ನಂತರ ಕೇತು ರಾಶಿ ಸಂಚಾರನಾಗಿದ್ದು, ಆಧ್ಯಾತ್ಮಿಕ ಒಲವು. ಹಿಂದಿನ ಕೆಲಸದಿಂದ ಫಲ, ಪ್ರಶಸ್ತಿ.
ಆರೋಗ್ಯ: ಹೃದಯ ಬಾಧೆ, ಉಸಿರಾಟದ ತೊಂದರೆ, ಒಣಕೆಮ್ಮು, ಉದರಬೇನೆ, ಬೆನ್ನುಮೂಳೆ, ಕರುಳು, ಪಿತ್ತಕೋಶ ಪೀಡೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಗುರಿಸಾಧನೆಯಲ್ಲಿ ಯಶಸ್ಸು, ವೃತ್ತಿ ಜೀವನಕ್ಕಾಗಿ ವಿದ್ಯಾಭ್ಯಾಸದ ಯೋಜನೆ ನಿರೂಪಿಸಿ, ಆತ್ಮಸ್ಥೈರ್ಯದಿಂದ ಮುನ್ನಡೆದರೆ ಉತ್ತಮ ಫಲ. ನಿತ್ಯ ವ್ಯಾಯಾಮ ಅಗತ್ಯ.
ಪರಿಹಾರ: ಬೆಟ್ಟದ ಮೇಲಿರುವ ಶಿವಾಲಯದಲ್ಲಿ ಪರಿಹಾರ, ಕಾಲಭೈರವನ ಆರಾಧನೆ
ದಾನ: ಗೋಧಿ
ಮುಂದಿನ ಸಂವತ್ಸರದ ನಂತರ ಜಾಣ್ಮೆಗಳಿಂದ ಸಕಲಕಾರ್ಯಗಳಲ್ಲಿ ಯಶಸ್ಸು. ಸಂತಾನ ಪ್ರಾಪ್ತಿ, ನೂತನ ಗೃಹವನ್ನು ಹೊಂದುವ ಸಾಧ್ಯತೆ, ವಿವಾಹಯೋಗ್ಯರಿಗೆ ಸೂಕ್ತ ಬಾಳಸಂಗಾತಿ ಪ್ರಾಪ್ತಿ, ಸಾಧನೆಯಿಂದ ಸಾಮಾಜಿಕ ಮನ್ನಣೆ. ಅನಾರೋಗ್ಯ ಇರುವವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ. ಷಷ್ಠಗ್ರಹಗಳ ಕೂಟ ಸಪ್ತಮದಲ್ಲಿ ಸಂಚಾರ. ಪಾಲುದಾರಿಕೆ, ದಾಂಪತ್ಯ ಜೀವನ, ಪ್ರೇಮಜೀವನ, ಶತ್ರುಬಾಧೆ ಸಾಧ್ಯತೆ. ಕೋರ್ಟ್‌ನಲ್ಲಿ ಗೆಲುವು. ಕಾರ್ಮಿಕರಿಗೆ ಸಾಲ ಕಳೆದು ನೆಮ್ಮದಿ, ರಾಜಕಾರಣಿಗಳಿಗೆ ಶುಭ, ವ್ಯಾಪಾರ-ವ್ಯವಹಾರಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ. ಶತ್ರುಗಳ ಮೇಲೆ ಜಯ. ಸ್ಥಿರಾಸ್ತಿ ಅಭಿವೃದ್ಧಿಗೆ ಉತ್ತಮ ಸಮಯ. ವೃತ್ತಿ, ವ್ಯಾಪಾರ ಮಂದಗತಿ, ಜನಸೇವೆಗೆ ಎಲ್ಲೆಡೆಯಿಂದ ಬೆಂಬಲ. ಆಧ್ಯಾತ್ಮಿಕ ಒಲವು.
ಆರೋಗ್ಯ: ಮಲಬದ್ಧತೆ, ಕರುಳುಬಾಧೆ, ಸಂಧಿವಾತ, ಅಜೀರ್ಣ, ಹರ್ನಿಯಾ, ಚರ್ಮವ್ಯಾಧಿ, ಮಧುಮೇಹ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಸೋದರ ದಾರಿ ತಪ್ಪುವ ಸಾಧ್ಯತೆ, ಗುರಿ ಮುಟ್ಟುವ ಸಾಧನೆ ಬಿಡದಿರಿ. ಕೆಲಸಕ್ಕೆ ಬಾರದ ವಿಚಾರಗಳಿಗೆ ಗಮನ ಕೊಡಬೇಡಿ. ವರ್ಷದ ಉತ್ತರಾರ್ಧದಲ್ಲಿ ಕಠಿಣ ಶ್ರಮ ಅಗತ್ಯ.
ಪರಿಹಾರ: ವಿಷ್ಣು ಸಹಸ್ರನಾಮ, ಗಣಪತಿ ಆರಾಧನೆ
ದಾನ: ಹೆಸರುಕಾಳು
ಸೂರ್ಯನು ದಕ್ಷಿಣಾಯನ ಪಥ ಚಲನದಲ್ಲಿ ಶುಭ ಫಲ ನೀಡುತ್ತಾನೆ. ಕೌಟುಂಬಿಕ ಜೀವನದಲ್ಲಿ ಸಾಮಾನ್ಯ ಸಂಕಟ. ನಂತರ ಶುಭ ಧನ, ನೂತನ ಗೃಹ ಸೌಖ್ಯ, ಆಧ್ಯಾತ್ಮಿಕ ಚಿಂತನೆ, ಕ್ಷೇತ್ರದರ್ಶನದಿಂದ ಲಾಭ, ನಂತರ ಗೃಹದಲ್ಲಿ ಲಾಭ, ತಂದೆಯಿಂದ ಸುಖ, ಕುಟುಂಬದ ಬೆಂಬಲ, ವಾಹನಸೌಖ್ಯ, ಒಡಹುಟ್ಟಿದವರಿಗೆ ಅಭಿವೃದ್ಧಿ, ವಿದೇಶ ಪ್ರವಾಸ, ದಾನ-ಧರ್ಮದಲ್ಲಿ ಆಸಕ್ತಿ, ಅನಾರೋಗ್ಯ ಇರುವವರಿಗೆ ಉತ್ತಮ ಚಿಕಿತ್ಸೆ. ಯುಗಾದಿವರೆಗೂ ಪಂಚಮದಲ್ಲಿ ಶನೇಶ್ಚರನ ಚಲನೆ. ಪುತ್ರರೊಂದಿಗೆ ಕಲಹ, ನಿಮ್ಮವರಿಂದಲೇ ಕಡೆಗಣನೆ. ಆಸ್ತಿಗಾಗಿ ಬಂಧುಗಳ ಜತೆ ವಿವಾದ, ಎಲ್ಲರ ವಿರೋಧ, ಯುಗಾದಿವರೆಗೆ ತಾಳ್ಮೆ ಅಗತ್ಯ. ಯುಗಾದಿ ನಂತರ ವೈಯಕ್ತಿಕ, ಸಾಮಾಜಿಕ ಸಂತಸದ ಘಟನೆಗಳು. ಗೃಹ ನಿರ್ಮಾಣಕ್ಕೆ ಪೂರಕ ವಾತಾವರಣ, ನ್ಯಾಯಾಲಯದಲ್ಲಿ ಜಯ, ಕಾರ್ಮಿಕ ವರ್ಗದವರಿಗೆ ಶುಭ, ರಾಜಕೀಯ ಸಂಬಂಧ ಯಶಸ್ಸು, ವೃತ್ತಿ ವ್ಯಾಪಾರಗಳಲ್ಲಿ ಅಭಿವೃದ್ಧಿ, ಶತ್ರು ನಾಶ, ಭಾವನಾತ್ಮಕ-ಸೃಜನಾತ್ಮಕ ಚಿಂತನೆ, ಉತ್ತಮಫಲ. ಆದರೆ ದಶಮ ಕೇತುವಿನಿಂದ ವೃತ್ತಿ-ವ್ಯಾಪಾರಕ್ಕೆ ತಡೆ.
ಆರೋಗ್ಯ: ಮೂತ್ರಪಿಂಡದ ಉರಿಯೂತ, ಚರ್ಮರೋಗ, ಮೂತ್ರನಾಳ ಅಸ್ವಸ್ಥತೆ, ತಲೆತಿರುಗುವಿಕೆ, ಕಣ್ಣಿನ ಸಮಸ್ಯೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಗುರಿಸಾಧನೆ ಗೊಂದಲ ಸರಿಪಡಿಸಿಕೊಳ್ಳಿ, ದೃಢ ಸಂಕಲ್ಪದಿಂದ ಅಭ್ಯಾಸ ಮಾಡಿದರೆ ಉತ್ತಮ ಫಲ, ಏಕಾಗ್ರತೆ, ನಿರಂತರ ಅಭ್ಯಾಸ ಅಗತ್ಯ. ಉನ್ನತ ಶಿಕ್ಷಣಕ್ಕೆ ಉತ್ತಮ ಕಾಲ.
ಪರಿಹಾರ: ದೇವಿ ಆರಾಧನೆ, ದುರ್ಗಾಸಪ್ತಶತಿ ಪಾರಾಯಣ, ಗುರು ಸೇವೆ- ಆರಾಧನೆ.
ದಾನ: ಅವರೆಕಾಳು
ವರ್ಷದ ಮೊದಲ ಭಾಗದಲ್ಲಿ ಧನಲಾಭ, ವೃತ್ತಿಯಲ್ಲಿ ಮುನ್ನಡೆ, ಸಮಾಜದಲ್ಲಿ ಮನ್ನಣೆ. ನಂತರ ಅಡೆ-ತಡೆ. ಹೆಚ್ಚು ಶ್ರಮ, ಸಂಶೋಧನಾತ್ಮಕ ವಿಷಯಗಳಲ್ಲಿ ಸಾಧನೆ. ಪ್ರಾರಂಭದ 6 ತಿಂಗಳಲ್ಲಿ ಬೃಹತ್ ಯೋಜನೆ ಪ್ರಯತ್ನ, ಗೃಹದಲ್ಲಿ ವಿವಾಹಾದಿ ಮಂಗಳ ಕಾರ್ಯ, ಆರೋಗ್ಯ ಉತ್ತಮ, ವಿದ್ಯಾರ್ಜನೆಯಲ್ಲಿ ಜಯ, ಸರ್ಕಾರದಿಂದ ಶುಭವಾರ್ತೆ, ಸುಖ-ಸಂಪತ್ತು, ವಾಹನಸೌಖ್ಯ, ವೃತ್ತಿವ್ಯಾಪಾರದಲ್ಲಿ ಅಭಿವೃದ್ಧಿ, ಸಮಾಜದಲ್ಲಿ ಗೌರವ-ಕೀರ್ತಿ. ಗೃಹಸೌಖ್ಯ, ಧನಲಾಭ, ತೀರ್ಥಯಾತ್ರೆ, ಶುಭಫಲ. ಯುಗಾದಿ ನಂತರ ವ್ಯಾಪಾರ-ಉದ್ಯೋಗ ಕ್ಷೀಣ. ಬಂಧುಗಳು ದೂರ. ಪುತ್ರರೊಂದಿಗೆ ಕಲಹ, ಆಸ್ತಿ ವಿಷಯದಲ್ಲಿ ವಿವಾದ. ಹಳೆಯ ಯೋಜನೆ ಪೂರ್ಣಗೊಳಿಸಲು ಶುಭ ಸಮಯ.
ಆರೋಗ್ಯ: ಕಿವಿ, ಮೂಗಿನ ಬಾಧೆ, ಹಲ್ಲು, ನಾಲಿಗೆ, ಗಂಟಲು ಅನಾರೋಗ್ಯ, ಮೂವ್ಯಾಧಿ, ಪಿಸ್ತುಲಾ, ಗುದ ಖಾಯಿಲೆ, ಹೈಡ್ರೋಸಿಲ್, ಮೂತ್ರಾಂಗದಲ್ಲಿ ಕಲ್ಲು, ಯಕೃತ್ತಿನ ತೊಂದರೆ, ಪಿತ್ತಕೋಶದಲ್ಲಿ ಕಲ್ಲು, ಬೆನ್ನು ನೋವು, ರಕ್ತದ ಒತ್ತಡ, ಸ್ತ್ರೀರೋಗ, ಮೂತ್ರನಾಳ ಸಮಸ್ಯೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಕೆಲಸಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ, ಒಳ್ಳೆಯ ಅವಕಾಶ ಲಭ್ಯ. ಪ್ರಶಂಸೆ- ಪ್ರಶಸ್ತಿ, ಸಂಶೋಧನಾ ವಿಷಯಗಳಲ್ಲಿ ಮುನ್ನಡೆ. ಸಹಾಯಧನ ಪ್ರಾಪ್ತಿ, ಉನ್ನತ ಶಿಕ್ಷಣಕ್ಕೆ ಶುಭ ಸಮಯ, ಅಧಿಕ ಪ್ರಯತ್ನದಿಂದ ಗುರಿ ಸಾಧನೆ.
ಪರಿಹಾರ: ನರಸಿಂಹದೇವರ ಪೂಜೆ, ಸ್ತೋತ್ರ, ಸುಬ್ರಹ್ಮಣ್ಯ ಆರಾಧನೆ, ಗುರುಚರಿತ್ರೆ ಪಾರಾಯಣ, ಗಾಣಗಾಪುರ ಕ್ಷೇತ್ರ ದರ್ಶನ.
ದಾನ: ತೊಗರಿಬೇಳೆ
ಕುಟುಂಬದಲ್ಲಿ ಸೌಹಾರ್ದ. ಜೂನ್ ನಂತರ ಬೆಳವಣಿಗೆ, ಬೌದ್ಧಿಕ ವಿಷಯಗಳಲ್ಲಿ ಆಸಕ್ತಿ, ನೂತನ ವಿಷಯಗಳಲ್ಲಿ ಗಮನ, ಗುರಿ ಸಾಧನೆಗಳಿಗೆ ಉತ್ತಮ ಸಮಯ, ಆಧ್ಯಾತ್ಮಿಕ ಒಲವು, ಶತ್ರುಗಳಿಂದ ದೂರವಿರಿ. ವಿನಾ ಖರ್ಚಿನ ಬಗ್ಗೆ ಎಚ್ಚರ, ಕೌಶಲಾಭಿವೃದ್ಧಿ, ತಂತ್ರಜ್ಞಾನ ಬಳಸಲು ಹೆಚ್ಚು ಶ್ರಮ. ನುರಿತವರಿಂದ ಸಹಾಯ ಪಡೆಯಿರಿ. ಧರ್ಮಕಾರ್ಯಗಳಿಗೆ ಹಣ ವ್ಯಯ, ಆಸ್ತಿ ಸಂಬಂಧ ಎಚ್ಚರ, ಶತ್ರುಬಲ ಹೆಚ್ಚಳ. ಜೂನ್ ನಂತರ ಬಹುಲಾಭ, ಧನ-ಧಾನ್ಯ, ಲಾಭ, ಸಂಪತ್ತು, ನಿವೇಶನ, ಗೃಹ, ವಾಹನ ಹೊಂದಲು ದೇವಗುರುವಿನ ಕೃಪೆ. ಉನ್ನತ ಶಿಕ್ಷಣ, ಸಂಶೋಧನೆ, ಸ್ನಾತಕೋತ್ತರ, ವಿದ್ಯಾರ್ಜನೆ ಸಫಲ, ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ, ವೃತ್ತಿಯಲ್ಲಿ ಬಡ್ತಿ ಸಮಯ. ಬಂಧುಗಳ ಸಹಾಯ, ವ್ಯಾಪಾರ ಉದ್ದಿಮೆದಾರರಿಗೆ ಶುಭ ಫಲ, ಶತ್ರುನಾಶ. ನಂತರ ಅರ್ಧಾಷ್ಟಮ ಶನಿ ಪ್ರಾರಂಭವಾಗಿ ಯತ್ನಕಾರ್ಯ, ವ್ಯಾಪಾರ ಉದ್ಯೋಗ ಆಮೆಗತಿ, ಆರೋಗ್ಯ ಏರು-ಪೇರು, ಬಂಧುಗಳು ದೂರ. ನೂತನವಾಗಿ ಯಾವುದೇ ಕಾರ್ಯ ಪ್ರಾರಂಭಿಸದಿರಿ, ಹಳೆ ಯೋಜನೆ ಪುನ ಶ್ಚೇತನಗೊಳಿಸಿ ಮುಂದುವರೆಸಿ. ದೂರ ಪ್ರಯಾಣ ಶುಭಕರ. ವಿದ್ಯಾಭ್ಯಾಸ, ಬೋಧನೆ, ಪ್ರಕಟಣೆಗಳಿಗೆ ಉತ್ತಮ ಸಮಯ. ಬುದ್ಧಿವಂತಿಕೆ ಬಳಸಿದರೆ ಉತ್ತಮ ಫಲ. ಯಾವುದೇ ಯೋಜನೆ ಅಭಿವೃದ್ಧಿಪಡಿಸಿ ವಿಸ್ತರಿಸಲು ಸೂಕ್ತ ಸಮಯ. ದೂರದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿಕೊಳ್ಳಿ.
ಆರೋಗ್ಯ: ಕ್ಷಯ, ಮೂತ್ರಾಂಗದಲ್ಲಿ ಕಲ್ಲು, ಶ್ವಾಸಕೋಶ, ನರಗಳು, ಪಾರ್ಶ್ವವಾಯು, ಜಠರ, ಕುಹರ ಸಂಬಂಧಿತ, ಮೂರ್ಛೆ, ಉಬ್ಬಸ, ರಕ್ತನಾಳ ಉಬ್ಬುವಿಕೆ, ಯಕೃತ್‌ಗೆ ಸಂಬಂಧಿಸಿದ ಕಾಯಿಲೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ವಿದ್ಯಾಭ್ಯಾಸದ ಕಡೆ ಗಮನ, ಉನ್ನತ ಶಿಕ್ಷಣಕ್ಕೆ ಹೆಚ್ಚು ಶ್ರಮ ಅಗತ್ಯ. ಕಾನೂನು, ಪ್ರವಾಸೋದ್ಯಮ, ಸೃಜನಶೀಲ ಅಧ್ಯಯನದ ವಿದ್ಯಾರ್ಥಿಗಳಿಗೆ ಉತ್ತಮ ಸಮಯ.
ಪರಿಹಾರ: ಆಂಜನೇಯನ ಸೇವೆ, ಸ್ತೋತ್ರ, ಗಾಣಗಾಪುರ ದತ್ತಗುರು ಪಾರಾಯಣ, ಕುಲಗುರು ಸೇವೆ.
ದಾನ: ಕಡಲೆಕಾಳು
ಕುಟುಂಬದಲ್ಲಿ ನೂತನ ಶಿಶು ಆಗಮನ, ಹೊಸ ಸ್ನೇಹಿತರಿಂದ ಶುಭಫಲ, ದೀರ್ಘ ಕಾಲದಿಂದ ಸ್ಥಗಿತಗೊಂಡ ಕೆಲಸಗಳು ಪುನರಾರಂಭ, ವರ್ಷದ ಕೊನೆಯಲ್ಲಿ ಉತ್ತಮ ಫಲ, ಹಣದ ವಿಷಯದಲ್ಲಿ ಲಾಭ. ಆದರೂ ಎಚ್ಚರದಿಂದಿರಿ. ವಿಷಯ ವಿಮರ್ಶಿಸಿ ನಿರ್ಧಾರ ಕೈಗೊಳ್ಳಿ. ಕೌಶಲಾಭಿವೃದ್ಧಿಗೆ ಹೆಚ್ಚು ಸಮಯ ನೀಡಿ, ವ್ಯಾಪಾರದಲ್ಲಿ ನೂತನ ಅವಕಾಶ ಪ್ರಾಪ್ತಿ, ವ್ಯಾಪಾರ ವಿಸ್ತರಣೆಗೆ ಶುಭ ಸಮಯ. ಗೃಹದಲ್ಲಿ ಶಾಂತಿ, ಗೃಹ ನಿವೇಶನ ಹೊಂದುವ ಅವಕಾಶ, ಸಂಪತ್ತಭಿವೃದ್ಧಿ, ಮನೆ ಮುಂದೆ ತೋರಣ ಕಟ್ಟಿ ಮಂಗಳ ಕಾರ್ಯ. ವಿವಾಹವಯಸ್ಕರಿಗೆ ವಿವಾಹ ಯೋಗ. ದೈವಾನುಗ್ರಹದ ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಪುಣ್ಯಕ್ಷೇತ್ರ ದರ್ಶನ, ಧರ್ಮಕಾರ್ಯಾಸಕ್ತಿ, ವೃತ್ತಿವ್ಯಾಪಾರಗಳಲ್ಲಿ ಪ್ರಗತಿ. ಕಷ್ಟಕಾರ್ಪಣ್ಯ ಮಾಯ. ಜೀವನದಲ್ಲಿ ಸುಧಾರಣೆ. ವಿಕ್ರಮಭಾವದಲ್ಲಿ ಶನೇಶ್ಚರನ ಪರಿಭ್ರಮಣದಿಂದ ನಿಮಗೆ ವರದಾನ. ಬಂಧುಗಳು, ಅಧಿಕಾರಿಗಳಿಂದ ಸಹಾಯ, ಬಡ್ತಿ, ಗೃಹ ನಿರ್ಮಾಣ, ವಾಹನ ಖರೀದಿ, ಶತ್ರುಗಳು ದೂರ ಸರಿವರು. ಬರವಣಿಗೆ, ಪ್ರಯಾಣ, ಪ್ರಕಟಣೆ, ಉಪನ್ಯಾಸ ಇತ್ಯಾದಿಗಳಿಗೆ ಶುಭ, ಕೀರ್ತಿ ಖ್ಯಾತಿ, ಕುಟುಂಬಸ್ಥರಿಗೆ ಹಣಕಾಸಿನ ಭದ್ರತೆ, ದೊಡ್ಡ ವೃತ್ತಿಗಳ ಸಹಾಯದಿಂದ ವೃತ್ತಿಯಲ್ಲಿ ಮುಂದಿನ ಯೋಜನೆಗಳನ್ನು ರೂಪಿಸುವಿರಿ, ಪ್ರಾಯೋಗಿಕ ಕಾರ್ಯವಿಧಾನ ಬಳಸುವ ಜ್ಞಾನ ಪಡೆದು ಜೀವನ ಶೈಲಿಯಲ್ಲಿ ಆಧ್ಯಾತ್ಮಿಕತೆಯತ್ತ ಒಲವು.
ಆರೋಗ್ಯ: ಖಿನ್ನತೆ, ಅರುಚಿ, ವಾತ, ಉಳುಕು, ಕ್ಷಯ, ಕುಷ್ಠ, ಚರ್ಮ ಕಾಯಿಲೆ, ಕೀಲು ಬಾಧೆ, ದಂತ ನೋವು, ಮಂಡಿ ನೋವು ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಸಾಸಿವೆಯಷ್ಟು ಸಾಧನೆ, ಆಕಾಶದಷ್ಟು ಆಸೆ ಎಂಬುದನ್ನು ನೆನಪಿನಲ್ಲಿಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ಶ್ರಮವಹಿಸಿ. ಸಂಶೋಧನೆಯಲ್ಲಿ ಮುನ್ನಡೆಯುವಿರಿ. ತಜ್ಞರಿಂದ ಸಹಾಯ ಪಡೆದು ವಿಶೇಷ ವಿಷಯಗಳಲ್ಲಿ ಸಾಧನೆ ಮಾಡುವಿರಿ.
ಪರಿಹಾರ: ಮಂತ್ರಾಲಯ ದರ್ಶನ ಸೇವೆ, ಶ್ರೀ ಸುಬ್ರಹ್ಮಣ್ಯ ಸೇವೆ.
ದಾನ: ತಿಲ
ಯುಗಾದಿ ನಂತರ ಶುಭ ಫಲ. ಸೂರ್ಯನ ಮುಂದಿನ 4 ತಿಂಗಳ ಸಂಚಾರ ಕಾಲದಲ್ಲಿ ಎಲ್ಲ ಕಾರ್ಯವ್ಯಾಪ್ತಿಯಲ್ಲಿ ಮುನ್ನಡೆ. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ ವಹಿಸಿ. ವಾದವಿವಾದಗಳಲ್ಲಿ ಅಧ್ಯಯನ ಅಗತ್ಯ, ನೂತನ ಯೋಜನೆಗಳಿಂದ ಜೂನ್ ನಂತರ ಫಲ. ಗೊಂದಲದ ವಿಷಯಗಳಲ್ಲಿ ಸಮಗ್ರ ನೀತಿ ಅನುಸರಿಸುವುದು ಉತ್ತಮ. ವೃತ್ತಿ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡರೂ ಶತ್ರುಗಳಿಂದ ತೊಂದರೆ, ಚಿತ್ತಚಾಂಚಲ್ಯ, ಮನೋವಿಕಾರ. ಬಂಧುಗಳ ವಿರೋಧ, ಆಧ್ಯಾತ್ಮಿಕ ಚಿಂತನೆ, ತೀರ್ಥಕ್ಷೇತ್ರ ದರ್ಶನ, ಗೃಹ-ನಿವೇಶನ ಹೊಂದುವ ಅವಕಾಶ, ಸಂಪತ್ತು ಗಳಿಕೆ, ಚಪ್ಪರ ತೋರಣಕಟ್ಟಿ ಮಂಗಳ ಕಾರ್ಯ, ವಿದ್ಯಾರ್ಥಿಗಳು ಉನ್ನತ ಶ್ರೇಣಿ ಸಾಧಿಸುವ ಸಮಯ, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಶುಭಕಾರ್ಯ ಯತ್ನದಲ್ಲಿ ಪ್ರಗತಿ, ಧರ್ಮಕಾರ್ಯಾಸಕ್ತಿ, ಕೃಷಿ ವ್ಯಾಪಾರ ವೃತ್ತಿಗಳಲ್ಲಿ ಅಭಿವೃದ್ಧಿ. ಕೋರ್ಟು-ಕಛೇರಿಗಳಿಗೆ ಅಲೆಯುವ ಸ್ಥಿತಿ ಬದಲು. ಪರಸ್ಥಳ ವಾಸ, ಸಾಲಗಾರರ ಕಿರುಕುಳ, ಉದ್ಯೋಗದಲ್ಲಿ ವ್ಯರ್ಥ ಧನ ಹಾನಿ, ಸ್ಥಿರಾಸ್ತಿ ಸಂಬಂಧ ವ್ಯಾಜ್ಯ. ಕುಲಗುರುಗಳ ಮಾರ್ಗದರ್ಶನದಿಂದ ಶುಭಫಲ, ಮನೋಧೈರ್ಯದಿಂದ ಮುನ್ನಡೆದರೆ ಅಡೆತಡೆಗಳಿಂದ ಮುಕ್ತಿ, ಜೂನ್ ನಂತರ ಪಾಲುದಾರಿಕೆಯಲ್ಲಿ ಎಚ್ಚರಿಕೆ. ವೈವಾಹಿಕ ವಿಷಯದಲ್ಲಿ ಎಚ್ಚರ ಅಗತ್ಯ.
ಆರೋಗ್ಯ: ಶ್ವಾಸಕೋಶ, ಪಿತ್ತ-ಕಫ ಸಂಬಂಧಿ ರೋಗ, ದೃಷ್ಟಿ ದೋಷ, ಬೆನ್ನೆಲುಬು, ರಕ್ತಹೀನತೆ, ಗಾಯ, ಕೆಳಕಾಲಲ್ಲಿ ಮೀನಖಂಡ ಗಾಯ, ಸ್ನಾಯು ಸೆಳೆತ ಸಮಸ್ಯೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ. ಕೆಲಸಕ್ಕಾಗಿ ವೃತ್ತಿಪರ ಕೋರ್ಸ್ ಆಯ್ಕೆ ಉತ್ತಮ. ಅನಗತ್ಯ ವಿಷಯಗಳಲ್ಲಿ ಕಾಲಹರಣ ಬೇಡ. ವಿದ್ಯಾಭ್ಯಾಸದಲ್ಲಿ ಗುಂಪು ಅಧ್ಯಯನ ಹೆಚ್ಚು ಪರಿಣಾಮಕಾರಿ.
ಪರಿಹಾರ: ತಿರುನಲ್ಲಾರ್ ಶ್ರೀ ಶನೇಶ್ಚರ ದೇವಾಲಯ ಯಾತ್ರೆ, ಸೇವೆ, ಹನುಮಾನ್ ಸೇವೆ, ಪ್ರದೋಷಕಾಲದಲ್ಲಿ ಶಿವಾಲಯದಲ್ಲಿ ಸೇವೆ, ಪೂಜೆ, ಗಾಣಗಾಪುರ ದರ್ಶನ, ದತ್ತಚರಿತ್ರೆ ಪಾರಾಯಣ.
ದಾನ: ಕಪ್ಪು ಉದ್ದು
ಜನ್ಮಶನಿ ಎಂದು ಭಯ ಪಡಬೇಡಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಫಲ. ಸ್ನೇಹಿತರಿಂದ, ಸಂಬಂಧಿಕರಿಂದ ಬೆಂಬಲ ಪ್ರಾಪ್ತಿ. ಹುದ್ದೆಯಲ್ಲಿ ಬದಲಾವಣೆ, ವರ್ಗಾವಣೆ ಕಾಣುವಿರಿ. ಅಲ್ಪಾವಧಿ ಯೋಜನೆಗಳಲ್ಲಿ ಯಶಸ್ಸು, ದೀರ್ಘಾವಧಿ ಯೋಜನೆಗಳಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ. ಜವಾಬ್ದಾರಿ ಹುದ್ದೆ ನಿಭಾಯಿಸುವವರು ಆತುರದ ನಿರ್ಧಾರಗಳ ಬಗ್ಗೆ ಎಚ್ಚರ ವಹಿಸದಿದ್ದರೆ ತೊಂದರೆಗೆ ಒಳಗಾಗುವಿರಿ. ವ್ಯಾಪಾರದಲ್ಲಿ ಅಭಿವೃದ್ಧಿ ಕಂಡರೂ ನಿರೀಕ್ಷಿಸಿದಷ್ಟು ಫಲ ದೊರೆಯದು. ಒಡಹುಟ್ಟಿದವರಿಗೆ ಶುಭ, ವ್ಯಾಪಾರವೃತ್ತಿಯಲ್ಲಿ ಲಾಭ, ಪಾಲುದಾರಿಕೆ- ದಾಂಪತ್ಯ ಜೀವನದಲ್ಲಿ ಶುಭ, ಯುಗಾದಿ ನಂತರ ಕೆಲಸಗಳಲ್ಲಿ ಸ್ವಲ್ಪ ವಿಘ್ನ, ಬಂಧುಗಳ ವಿರೋಧ, ವಿವಿಧ ರೀತಿಯ ಪರೀಕ್ಷೆ, ಪರಸ್ಥಳ ವಾಸ, ವಾಗ್ವಾದ, ಕಲಹಗಳಿಂದ ಮಾನಸಿಕ ತೊಂದರೆ, ಅನಾರೋಗ್ಯದಿಂದ ವೈದ್ಯಕೀಯ ವೆಚ್ಚ. ವೃತ್ತಿ, ವ್ಯಾಪಾರದಲ್ಲಿ ಅಭಿವೃದ್ಧಿ, ಬಡ್ತಿ, ಗುರಿ ತಲುಪುವ ಸಂದೇಶ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಆಧ್ಯಾತ್ಮಿಕ ಒಲವು. ಆರೋಗ್ಯದ ಕಡೆ ಹೆಚ್ಚು ಗಮನ ಅಗತ್ಯ. ನ್ಯಾಯವಾದ ಕಾರ್ಯಗಳಲ್ಲಿ ಅಸಫಲತೆ. ಆಸ್ತಿ ವಿಚಾರದಲ್ಲಿ ವಾಗ್ವಾದ, ಜನ್ಮದಲ್ಲಿ ಶನೇಶ್ಚರ ಸಂಚರಿಸುವಾಗ ಚಂಚಲ ಮನಸ್ಸು, ವಿಶ್ರಾಂತಿಯಿಲ್ಲದ, ಹೊಳಪಿಲ್ಲದ ಜೀವನ ಪ್ರಾರಂಭ. ಸ್ಥಾನಪಲ್ಲಟ, ಅನಾರೋಗ್ಯ, ಉದ್ವೇಗ, ಮಿತ್ರ ವಿರೋಧ, ಸಲ್ಲದ ಅಪವಾದ, ಯತ್ನಕಾರ್ಯ ವಿಫಲ, ವೃಥಾ ತಿರುಗಾಟ. ಮುಂದಿನ ಮೇವರೆಗೆ ಆತ್ಮಸ್ಥೈರ್ಯದಿಂದ ಗುರಿ ತಲುಪುವಿರಿ, ಆಧ್ಯಾತ್ಮಿಕ ಚಿಂತನೆ, ಪ್ರಸ್ತುತ ಪಾಲುದಾರರಿಂದ ತೊಂದರೆಯಿದ್ದರೂ ಮೇ ನಂತರ ಪರಿಹಾರ ಸಾಧ್ಯ. ಕುಟುಂಬದಲ್ಲಿ ಸೌಹಾರ್ದ ಸುಧಾರಣೆ ಸಾಧ್ಯತೆ. ಅನಾರೋಗ್ಯಕ್ಕೆ ಉತ್ತಮ ವೈದ್ಯರಿಂದ ಚಿಕಿತ್ಸೆ ದೊರೆತು ಕಾಯಿಲೆಗೆ ಮುಕ್ತಿ.
ಆರೋಗ್ಯ: ಆಯಾಸ, ಗಾಯ, ಬೊಕ್ಕೆಗಳು, ಶ್ವಾಸಕೋಶ ಸಂಬಂಧಿ ಕಾಯಿಲೆ, ಜ್ಞಾಪಕಶಕ್ತಿ ಕಳೆದುಕೊಳ್ಳುವುದು. ಗ್ರಂಥಿ ರೋಗ, ಬುದ್ಧಿಭ್ರಮಣೆ ಸಾಧ್ಯತೆ.
ಯುವಕರು, ವಿದ್ಯಾರ್ಥಿಗಳು: ಪಣತೊಟ್ಟು ವಿದ್ಯಾಭ್ಯಾಸ ಮಾಡಿದರೆ ಉತ್ತಮ ಫಲ. ಚೈತನ್ಯ, ಉತ್ಸಾಹ ಕುಗ್ಗುತ್ತಿರುವುದರಿಂದ ಗುರುಗಳ ಮಾರ್ಗದರ್ಶನ ಪಡೆಯಿರಿ. ಗುಂಪು ಅಧ್ಯಯನ ಹೆಚ್ಚು ಪರಿಣಾಮಕಾರಿ. ಕಾನೂನು, ತತ್ವಶಾಸ್ತ್ರ, ಪ್ರವಾಸೋದ್ಯಮ, ಕಲೆ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಸೂಕ್ತ ಸಮಯ.
ಪರಿಹಾರ: ಸಮುದ್ರ ತೀರದಲ್ಲಿರುವ ಶಿವಾಲಯ ದರ್ಶನ ಸೇವೆ, ಶ್ರೀ ಸುಬ್ರಹ್ಮಣ್ಯ ದೇವಾಲಯ, ಗಾಣಗಾಪುರ ದರ್ಶನ ಸೇವೆ
ದಾನ: ಕಡಲೆಕಾಳು