

Horoscope 2025 : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ನಾವೀಗ ವರ್ಷದ ಕೊನೆಯ ತಿಂಗಳಿಗೆ ಪ್ರವೇಶ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ವ್ಯಕ್ತಿಯು ಜನಿಸಿದ ರಾಶಿಚಕ್ರದ ಚಿಹ್ನೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಅದರಂತೆ, 2025 ರಲ್ಲಿ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಶುಕ್ರ ಗ್ರಹದ ಸಂಪೂರ್ಣ ಕೃಪೆಯಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
ಶುಕ್ರನ ಪ್ರಭಾವದಿಂದಾಗಿ 2025ರಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಸುವರ್ಣಯುಗವನ್ನು ಅನುಭವಿಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಮಿಥುನ ರಾಶಿಯ ಅಡಿಯಲ್ಲಿ ಜನಿಸಿದವರು 2025ರ ಉದ್ದಕ್ಕೂ ಹಣದ ಕೊರತೆಯನ್ನು ಹೊಂದಿರುವುದಿಲ್ಲ, ಏಕೆಂದರೆ ಅವರು ಸಂತೋಷದ ಅಧಿಪತಿಯಾದ ಶುಕ್ರನಿಂದ ಸಂಪೂರ್ಣವಾಗಿ ಆಶೀರ್ವದಿಸಲ್ಪಡುತ್ತಾರೆ. 2025ರ ವರ್ಷವು ಇವರ ಜೀವನದಲ್ಲಿ ಪ್ರಮುಖ ಸಂಗತಿಗಳು ಸಂಭವಿಸುವ ವರ್ಷವಾಗಲಿದೆ. ತಮ್ಮ ಜೀವನದಲ್ಲಿ ಅನಿರೀಕ್ಷಿತ ಮತ್ತು ಸಂತೋಷದ ತಿರುವುಗಳನ್ನು ಅನುಭವಿಸುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ. ವಾಹನ, ಭೂಮಿ ಮುಂತಾದ ಆಸ್ತಿಗಳನ್ನು ಖರೀದಿಸಲು ಅವಕಾಶವಿರುತ್ತದೆ. ಐಷಾರಾಮಿ ಜೀವನಕ್ಕೆ ಈ ವರ್ಷ ಅಡಿಪಾಯ ಬೀಳಲಿದೆ.
ಕನ್ಯಾ ರಾಶಿಯವರು, ಶುಕ್ರನ ಆಶೀರ್ವಾದದಿಂದ, 2025 ರಲ್ಲಿ ಸಮೃದ್ಧಿ ಜೀವನ ನಡೆಸುತ್ತಾರೆ. ಈ ವರ್ಷ ಇವರಲ್ಲಿ ಪ್ರಚಂಡ ಆರ್ಥಿಕ ಬೆಳವಣಿಗೆ ಇರುತ್ತದೆ. ಬಹುಕಾಲದ ಕನಸುಗಳು ನನಸಾಗುವ ವಿಶೇಷ ವರ್ಷವಾಗಲಿದೆ. ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ನಿರೀಕ್ಷಿತ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ನೀಡುತ್ತವೆ. ಹಲವು ರೀತಿಯಲ್ಲಿ ಆದಾಯ ಗಳಿಸಲು ಅವಕಾಶಗಳು ದೊರೆಯಲಿವೆ.
2025 ರಲ್ಲಿ ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಶುಕ್ರವು ಅಪಾರ ಲಾಭವನ್ನು ತರಲಿದೆ. ಈ ರಾಶಿಚಕ್ರ ಚಿಹ್ನೆಯ ಜನರು 2025 ರಲ್ಲಿ ಬಹಳಷ್ಟು ಧನಾತ್ಮಕ ಪ್ರಯೋಜನಗಳನ್ನು ಅನುಭವಿಸಲಿದ್ದಾರೆ. ವೃತ್ತಿಪರ ವಿಷಯಗಳಲ್ಲಿ ತೋರುವ ಆಸಕ್ತಿಗೆ ಅನುಗುಣವಾಗಿ ಆದಾಯವನ್ನು ಗಳಿಸುವ ಸಾಧ್ಯತೆಯಿದೆ. ಈ ವರ್ಷ ಬಡ್ತಿ ಮತ್ತು ಸಂಬಳ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.