

ಮೇಷ: ಅಪರಾಧದ ಹಿನ್ನೆಲೆಯ ದುಷ್ಟ ಜನ ನಿಮ್ಮ ಜತೆಗೂಡುವ ಸಾಧ್ಯತೆ ಇದೆ. ಎಲ್ಲರನ್ನೂ ನಂಬಿ ಮೋಸಹೋಗದಿರಿ. ಶುಭಸಂಖ್ಯೆ: 8
ವೃಷಭ: ಮಹತ್ವಾಕಾಂಕ್ಷೆಯ ಸಾಕಾರಕ್ಕಾಗಿ ತುಂಬ ಶ್ರಮಿಸುತ್ತಿದ್ದೀರಿ. ಗುರಿ ತಲುಪಲು ಹೊಸ ದಾರಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 4
ಮಿಥುನ: ಗುರು ಹಿರಿಯರನ್ನು ಗೌರವಿಸಿ. ಒಂಟಿತನ ನೀಗಿಸಿಕೊಳ್ಳಲು ಹಿಂಜರಿಯದಿರಿ. ಇದರಿಂದ ಕ್ಷೇಮಕ್ಕೆ ದಾರಿ ಇದೆ. ಶುಭಸಂಖ್ಯೆ: 1
ಕಟಕ: ಸಂಗಾತಿಯೊಡನೆ ವಾದಿಸುವುದು ಬೇಡ. ಇದು ಬಹಳಷ್ಟು ತೊಂದರೆಗಳಿಗೆ ಹೆದ್ದಾರಿ ಆದೀತು. ಸಹನೆ ಇರಲಿ. ಶುಭಸಂಖ್ಯೆ: 6
ಸಿಂಹ: ವಿಷಮತೆಯ ದಾರಿಗೆ ತಳ್ಳಲೆಂದೇ ವರ್ತಮಾನ ಕಾದುಕೊಂಡಿದೆ. ಈ ವೇಳೆ ವಿವೇಚನೆಯನ್ನು ಮಾತ್ರ ಕಳೆದುಕೊಳ್ಳದಿರಿ. ಶುಭಸಂಖ್ಯೆ: 3
ಕನ್ಯಾ: ದಯಾಮಯಿಯಾದ ಚಂಡಿಕಾದೇವಿಯನ್ನು ಆರಾಧಿಸಿ. ಮನಸ್ಸಿನ ತಾಪಗಳು ಬಹಳ ಬೇಗ ಪರಿಹಾರಗೊಳ್ಳಲಿವೆ. ಶುಭಸಂಖ್ಯೆ: 7
ತುಲಾ: ಹೊಸ ವಿಚಾರಗಳನ್ನು ಕುರಿತು ಬರೆಯುವ ಉತ್ಸಾಹ ಮೂಡಿದೆ. ಶ್ರೀ ಶಾರದೆಯ ಕೃಪಾಶೀರ್ವಾದವೂ ಸಿಗಲಿದೆ. ಶುಭಸಂಖ್ಯೆ: 2
ವೃಶ್ಚಿಕ: ನಿಮ್ಮ ನಿರ್ಧಾರ ನಿಮಗೆ ಸರಿ ಎನಿಸಬಹುದು. ಆದರೆ ತಂದೆ-ತಾಯಿಗಳ ದೃಷ್ಟಿಕೋನವನ್ನು ಕೂಡ ಅರಿತುಕೊಳ್ಳಿ. ಶುಭಸಂಖ್ಯೆ: 9
ಧನುಸ್ಸು: ಹಳೆಯ ಸಹಪಾಠಿಯೊಬ್ಬರ ಸಹಾಯದಿಂದ ವೈಯಕ್ತಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರದ ಮಾರ್ಗವು ಗೋಚರಿಸಲಿದೆ. ಶುಭಸಂಖ್ಯೆ: 5
ಮಕರ: ಹಣದ ಚೀಲ ತಾನಾಗಿ ನಿಮ್ಮ ಕೈಗೆ ಬಂದು ನಿಲ್ಲದು. ಆರ್ಥಿಕ ಚೇತರಿಕೆಯ ವಿಚಾರಗಳಿಗೆ ಚಾಲನೆ ಸಿಗುವಂತಾಗಲಿ. ಶುಭಸಂಖ್ಯೆ: 8
ಕುಂಭ: ಯಶಸ್ಸಿಗೆ ಅವಕಾಶವಿದೆ. ಗುರು ದತ್ತಾತ್ರೇಯ ಸ್ವಾಮಿಯನ್ನು ಪ್ರಾರ್ಥಿಸಿ ನಿಮ್ಮ ಅಂತಿಮ ತೀರ್ವನಗಳನ್ನು ಕೈಗೊಳ್ಳಿ. ಶುಭಸಂಖ್ಯೆ: 4
ಮೀನ: ಪರಿಶ್ರಮದಿಂದ ಸಂಪಾದಿಸಿದ ಹಣಕಾಸಿನ ಮೇಲೆ ದುಷ್ಟರ ಕಣ್ಣು ಬಿದ್ದೀತು. ಮೈಮರೆಯದೆ ಸ್ವಲ್ಪ ಎಚ್ಚರದಿಂದ ಇರಬೇಕು. ಶುಭಸಂಖ್ಯೆ: 1