ಹೋರಿ ಹಬ್ಬ ನಮ್ಮ ಪರಂಪರೆಯ ಸಂಕೇತ

skp hori
ಹೋರಿಬೆದರಿಸುವ ಹಬ್ಬಕ್ಕೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು. ಶ್ರೀ ಡಾ. ಸಿದ್ದಲಿಂಗ ಮಹಾ ಸ್ವಾಮೀಜಿ, ಎನ್.ವಿ.ಈರೇಶ್, ಬಿ.ಆರ್.ಸುಭಾಷ್, ಮಿಲಿಟರಿ ಬಸವರಾಜï, ಡಾ.ಪ್ರಶಾಂತ್, ಚರಣ್, ದಿನೇಶ್, ರುದ್ರೇಶ, ಶ್ರೀಧರ, ಅಂಜನೇಯ, ರಾಜಣ್ಣ, ರೇಣುಕೇಶ, ಗ್ರಾಪಂ ಸದಸ್ಯ ಸುರೇಶ್, ದಾನಣ್ಣ, ಅಭಿ, ಕಾರ್ತಿಕ್ ಇತರರಿದ್ದರು.
Published on

ಶಿಕಾರಿಪುರ: ಹೋರಿ ಬೆದರಿಸುವ ಹಬ್ಬ ನಮ್ಮ ಮಣ್ಣಿನ ಸಂಸ್ಕೃತಿ, ಪರಂಪರೆಯ ಸಂಕೇತ. ಅದನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಸಮೀಪದ ಕಪ್ಪನಹಳ್ಳಿಯಲ್ಲಿ ಚೆನ್ನಮ್ಮಾಜಿ ಕೋಟೆಯ ಆವರಣದಲ್ಲಿ ಹೊಸಕೋಟಿಪುರ, ದಾಸನಪುರ, ಹಿರೇಕಲವತ್ತಿ, ಕೋಟಿಪುರ, ಕಪ್ಪನಹಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ರಾಷ್ಟçಮಟ್ಟದ ಹೋರಿ ಬೆದರಿಸುವ ಹಬ್ಬದಲ್ಲಿ ಮಾತನಾಡಿದರು.
ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಅಗತ್ಯವಿದೆ. ಕರಾವಳಿಯ ಕಂಬಳದAತೆ ಇದು ಘಟ್ಟದ ಮೇಲಿನ ಜನರ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಇದು ಅಕ್ಷರಶಃ ರೈತರ ಹಬ್ಬ. ವರ್ಷವಿಡಿ ಅವುಗಳನ್ನು ಆರೈಕೆ ಮಾಡಿ ವರ್ಷಕ್ಕೊಮ್ಮೆ ಬೆದರಿಸಿ ಸಂತಸಪಡುವ ಹಬ್ಬ. ಬಹುತೇಕ ಉತ್ತರ ಕರ್ನಾಟಕದ ಸಾಕಷ್ಟು ಜಿ¯್ಲೆಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ಕಪ್ಪನಹಳ್ಳಿ ಗ್ರಾಮದಲ್ಲಿ ರಾಷ್ಟçಮಟ್ಟದ ಸ್ಪಧೆÉðಯನ್ನು ಏರ್ಪಡಿಸಿರುವುದು ಶ್ಲಾಘನೀಯ. ಸ್ಪರ್ಧೆಗಾಗಿಯೇ ರೈತರು ವಿಶೇಷವಾದ ಹೋರಿಗಳನ್ನು ಲಕ್ಷಾಂತರ ರೂ. ನೀಡಿ ಖರೀದಿಸುತ್ತಾರೆ. ಅವರ ಉತ್ಸಾಹ ಮತ್ತು ಕ್ರೀಡಾಸೂರ್ತಿ ಮೆಚ್ಚುವಂತದ್ದು . ಇಲ್ಲಿ ಹೋರಿಹಬ್ಬ ಮತ್ತು ಇತರೆ ಕ್ರೀಡೆಗಳಿಗಾಗಿ ಶಾಶ್ವತ ಕ್ರೀಡಾಂಗಣ ನಿರ್ಮಾಣವಾಗಬೇಕು. ದಕ್ಷಿಣಕನ್ನಡದ ಜನತೆಯ ಹಾಗೆ ನಮ್ಮ ಜನ ಹೋರಿ ಬೆದರಿಸುವ ಹಬ್ಬವನ್ನು ಬೆಳೆÀಸಬೇಕು ಎಂದು ಹೇಳಿದರು.
ಕಾಳೇನಹಳ್ಳಿಯ ಡಾ.ಸಿದ್ದಲಿಂಗ ಮಹಾಸ್ವಾಮೀಜಿ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎನ್.ವಿ.ಈರೇಶ್, ಬಿ.ಆರ್. ಸುಭಾಷ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಿಲಿಟರಿ ಬಸವರಾಜï, ಡಾ.ಪ್ರಶಾಂತ್, ಚರಣ್, ದಿನೇಶ್,À ರುದ್ರೇಶ, ಶ್ರೀಧರ, ಅಂಜನೇಯ, ರಾಜಣ್ಣ, ರೇಣುಕೇಶ, ಗ್ರಾಪಂ ಸದಸ್ಯ ಸುರೇಶ್, ದಾನಣ್ಣ, ಅಭಿ, ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net