ತಿರುಪತಿಯ ಹಾಂಗ್ಯೋ ಐಸ್‌ಕ್ರೀಮ್ಸ್ ಅತ್ಯಾಧುನಿಕ ಕಾರ್ಖಾನೆಗೆ ಸಚಿವ ಟಿ. ಜಿ. ಭರತ್ ಭೇಟಿ

ಹಾಂಗ್ಯೋ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ತಿರುಪತಿಯ ಅತ್ಯಾಧುನಿಕ ನೂತನ ಉತ್ಪಾದನಾ ಘಟಕಕ್ಕೆ ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ, ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಸಚಿವ ಟಿ. ಜಿ. ಭರತ್ ಅವರು ವಿಶ್ವ ಪರಿಸರ ದಿನದಂದು ಭೇಟಿ ನೀಡಿದರು.
ಹಾಂಗ್ಯೋ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ತಿರುಪತಿಯ ಅತ್ಯಾಧುನಿಕ ನೂತನ ಉತ್ಪಾದನಾ ಘಟಕಕ್ಕೆ ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ, ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಸಚಿವ ಟಿ. ಜಿ. ಭರತ್ ಅವರು ವಿಶ್ವ ಪರಿಸರ ದಿನದಂದು ಭೇಟಿ ನೀಡಿದರು.
Published on
ಮಂಗಳೂರು: ದಕ್ಷಿಣ ಭಾರತದ ಪ್ರಮುಖ ಐಸ್‌ಕ್ರೀಮ್ ಬ್ರಾಂಡ್‌ಗಳಲ್ಲಿ ಒಂದಾದ ಹಾಂಗ್ಯೋ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ತಿರುಪತಿಯ ಅತ್ಯಾಧುನಿಕ ನೂತನ ಉತ್ಪಾದನಾ ಘಟಕಕ್ಕೆ ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ, ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಸಚಿವ ಟಿ. ಜಿ. ಭರತ್ ಅವರು ಜೂನ್ 5ರ ವಿಶ್ವ ಪರಿಸರ ದಿನದಂದು ಭೇಟಿ ನೀಡಿದರು.
ಸಚಿವರ ಈ ಭೇಟಿಯು ಹಾಂಗ್ಯೋ ಸಂಸ್ಥೆಗೆ ಮಹತ್ವದ ಮೈಲಿಗಲ್ಲಾಗಿದ್ದು, ಅವರು ಕಾರ್ಖಾನೆಯ ಸುಧಾರಿತ ತಂತ್ರಜ್ಞಾನ, ಕಟ್ಟುನಿಟ್ಟಾದ ಗುಣಮಟ್ಟದ ಮಾನದಂಡಗಳು ಹಾಗೂ ಆಹಾರ ಸುರಕ್ಷತಾ ಕ್ರಮಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಶ್ಲಾಘಿಸಿದರು. ಪರಿಸರ ದಿನದ ಅಂಗವಾಗಿ ಸಚಿವರು ತಮ್ಮ ಕುಟುಂಬಸ್ಥರೊಂದಿಗೆ ಕಾರ್ಖಾನೆಯ ಆವರಣದಲ್ಲಿ ಸಸಿನಟ್ಟು, ಹಸಿರು ಉತ್ಪಾದನೆ ಮತ್ತು ಜವಾಬ್ದಾರಿಯುತ ಕೈಗಾರಿಕಾ ಬೆಳವಣಿಗೆಗೆ ಕರೆ ನೀಡಿದರು. ಬಳಿಕ ಮಾತನಾಡಿದ ಸಚಿವ ಟಿ. ಜಿ. ಭರತ್, ಹಂಗ್ಯೋ ಸಂಸ್ಥೆಯು ತಿರುಪತಿಯಲ್ಲಿ ಸ್ಥಾಪಿಸಿರುವ ತಂತ್ರಜ್ಞಾನ ಮತ್ತು ಗುಣಮಟ್ಟದ ಮಾನದಂಡಗಳು ಭಾರತದ ಯುವ ಉದ್ಯಮಕ್ಕೆ ಪ್ರೇರಣಾದಾಯಕವಾಗಿವೆ. ಇಂತಹ ಹೂಡಿಕೆಗಳು ಆಂಧ್ರಪ್ರದೇಶವನ್ನು ಆಹಾರ ಸಂಸ್ಕರಣಾ ವಲಯದಲ್ಲಿ ಮುಂಚೂಣಿಗೆ ತರುತ್ತವೆ. ಉದ್ಯೋಗ ಸೃಷ್ಟಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಹಂಗ್ಯೋ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಹಾಂಗ್ಯೋ ಸಂಸ್ಥೆಯ ಸಂಸ್ಥಾಪಕ ದಿನೇಶ್ ಆರ್. ಪೈ ಅವರು ಮಾತನಾಡಿ, ಸಚಿವರ ಭೇಟಿ ಇಡೀ ತಂಡಕ್ಕೆ ಹೆಮ್ಮೆ ತಂದಿದೆ. ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ ನೀಡುತ್ತಾ, ವಿಶ್ವದರ್ಜೆಯ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಆಂಧ್ರಪ್ರದೇಶ ಸರ್ಕಾರದ ಉದ್ಯಮಸ್ನೇಹಿ ನೀತಿಗಳಿಗೆ ನಾವು ಕೃತಜ್ಞರಾಗಿದ್ದೇವೆ ಎಂದರು.
ಹ್ಯಾಂಗ್ಯೋ ಸಂಸ್ಥೆಯ ಪ್ರಮುಖ ಶ್ರೀನಿವಾಸ್ ಪೈ, ಸಂಕೀರ್ಣ ಪೈ, ಸಿಎಫ್‌ಒ ಆನಂದ್ ಶಾಸ್ತ್ರಿ, ಪ್ಲಾಂಟ್ ಹೆಡ್ ಆರ್‌ವಿಆರ್‌ವಿ ಪ್ರಸಾದ್ ಮತ್ತು ಮಾರ್ಕೆಟಿಂಗ್ ಹೆಡ್ ಮಹೇಶ್ ಶಿವರಾಮ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net