ಸಲಿಂಗಕಾಮ: ತನ್ನ ಸಂಗಾತಿಗಾಗಿ 5 ತಿಂಗಳ ಮಗುವನ್ನೇ ಕೊಂದ ಪಾಪಿ ತಾಯಿ; ಇಬ್ಬರ ಬಂಧನ| Arrested

ವಿಜಯವಾಣಿ - 2025-11-04T074926.598
Published on

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಲಮಂಗಲಂ ಬಳಿ ಸಲಿಂಗಕಾಮಕ್ಕಾಗಿ ನ. 02ರಂದು ತನ್ನ ಐದು ತಿಂಗಳ ಗಂಡು ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ 25 ವರ್ಷ ತಾಯಿ ಮತ್ತು ಆಕೆಯ ಸಲಿಂಗಕಾಮಿಯನ್ನು ಬಂಧಿಸಲಾಗಿದೆ(Arrested) ಎಂದು ಶುಕ್ರವಾರ(ನ. 07) ವರದಿಯಾಗಿದೆ.

ಕೆಲಮಂಗಲಂ ಬಳಿಯ ಚಿನ್ನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ತಾಯಿ ಎಸ್​.ಭಾರತಿ ಹಾಗೂ ಆಕೆಯ ಸಲಿಂಗಕಾಮಿ 22 ವರ್ಷದ ಸುಮಿತ್ರಾ ಎಂದು ಗುರುತಿಸಲಾಗಿದೆ. ತಾಯಿ ಭಾರತಿ ಕೆ.ಸುರೇಶ್ ಅವರನ್ನು  ಮದುವೆಯಾಗಿದ್ದರು. ದಂಪತಿಗೆ 5, 3 ವರ್ಷದ ಇಬ್ಬರು ಹೆಣ್ಣುಮಕ್ಕಳು ಹಾಗೂ ಧ್ರುವನ್ ಎಂಬ 5 ತಿಂಗಳ ಗಂಡುಮಗುವಿತ್ತು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಭಾರತಿ ತನ್ನದೇ ಗ್ರಾಮದ ಸುಮಿತ್ರಾ ಎಂಬ ಯುವತಿ ಸಂಬಂಧದಲ್ಲಿದ್ದಳು. ಪತಿ ಸುರೇಶ್​ಗೆ ಈ ಸಂಬಂಧದ ಬಗ್ಗೆ ತಿಳಿದಾಗ ಮನೆಯಲ್ಲಿ ದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ಸುರೇಶ್ ತನ್ನ ಹೆಣ್ಣುಮಕ್ಕಳನ್ನು ತಂಗಿ ಮನೆಯಲ್ಲಿ ನೋಡಿಕೊಳ್ಳಲು ಬಿಟ್ಟಿದ್ದನು. ಹೀಗೆ ಜಗಳ ಮುಂದುವರೆದಿದ್ದರಿಂದ ಭಾರತಿ ಪತಿ ಮನೆ ಬಿಟ್ಟು ಕುಂತುಮಾರನಪಲ್ಲಿಯ ತನ್ನ ತಾಯಿಯ ಮನೆಗೆ ತೆರಳಿದ್ದಳು. ಆದರೆ ಕುಟುಂಬ ಸದಸ್ಯರ ಮಧ್ಯಸ್ಥಿಕೆಯಿಂದ ಮತ್ತೆ ಮನೆಗೆ ಬಂದಿದ್ದಳು.

ಹೀಗೆ ನ. 02ರಂದು ಕುಟುಂಬ ಸದಸ್ಯರು ಕೆಲಸಕ್ಕೆ ಹೋಗಿದ್ದಾಗ ಭಾರತಿ ತನ್ನ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದು, ಮನೆಯವರ ಮುಂದೆ ಮಗು ಉಸಿರುಗಟ್ಟಿ ಸತ್ತಿದೆ ಎಂದು ನಂಬಿಸಿದ್ದಳು. ಅವಳ ಮಾತನ್ನು ನಂಬಿದ್ದ ಕುಟುಂಬಸ್ಥರು ಅಂತಿಮ ವಿಧಿವಿಧಾನಗಳನ್ನು ಮಾಡಿ ಶವ ಹೂತಿದ್ದರು ಎಂದು ತಿಳಿಸಿದ್ದಾರೆ.

ಮಂಗಳವಾರ ಪತಿ ಸುರೇಶ್ ಮಗು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಸಲಿಂಗಕಾಮಿ ಸ್ನೇಹಿತೆ ಸುಮಿತ್ರಾಳ ಸಂಚಿನಿಂದ ಭಾರತಿ ಮಗುವನ್ನು ಕೊಲೆಗೈದಿದ್ದಾಳೆ ಎಂದು ತಿಳಿದು ಬಂದಿದೆ. ತಕ್ಷಣ ಆರೋಪಿಗಳನ್ನು ಇಬ್ಬರನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net