ಹೊಮ್ಮರಗಳ್ಳಿ ರಕ್ಷಾ ಕ್ಲಿನಿಕ್ ಬಂದ್

06HDK 01 (1)
ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಪರವಾನಗಿ ಹೊಂದಿರದ ಕ್ಲಿನಿಕ್ ಅನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಎಚ್.ರವಿಕುಮಾರ್ ಬಂದ್ ಮಾಡಿಸಿದರು.
Published on

ಎಚ್.ಡಿ.ಕೋಟೆ: ಪರವಾನಗಿ ಪಡೆಯದೆ ಅಕ್ರಮವಾಗಿ ಕ್ಲಿನಿಕ್ ನಡೆಸುವುದು ಕಾನೂನು ಬಾಹಿರ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಎಚ್.ರವಿಕುಮಾರ್ ತಿಳಿಸಿದರು.

ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಪರವಾನಗಿ ಪಡೆಯದೆ ಕ್ಲಿನಿಕ್ ನಡೆಸುತ್ತಿದ್ದ ರಕ್ಷಾ ಕ್ಲಿನಿಕ್ ಗೆ ಶುಕ್ರವಾರ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಟಿಎಚ್‌ಒ, ಬಳಿಕ ಕ್ಲಿನಿಕ್ ಬಂದ್ ಮಾಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕ ವೈದ್ಯಕೀಯ ಖಾಸಗಿ ಕಾಯ್ದೆ 2007ರ ಪ್ರಕಾರ ಪರವಾನಗಿ ಪಡೆಯದೆ ರಕ್ಷಾ ಕ್ಲಿನಿಕ್ ಅನಧಿಕೃತಕವಾಗಿ ನಡೆಸುತ್ತಿರುವ ಬಗ್ಗೆ ದೂರ ಬಂದಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿ ಯಾವುದೇ ಪರವಾನಗಿ ಪಡೆಯದಿರುವುದು ಹಾಗೂ ಕ್ಲಿನಿಕ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಮುಚ್ಚಿಸಲಾಗಿದೆ ಎಂದರು.

ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಯವರು ಕೆಪಿಎಂಇಎ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುವಂತಿಲ್ಲ. ಆಸ್ಪತ್ರೆ ಮುಖ್ಯಸ್ಥರು ತಮಲ್ಲಿ ಸಿಗುವ ಸೌಲಭ್ಯಗಳ ವಿವರ ಮತ್ತು ಚಿಕಿತ್ಸೆಯ ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ಅಂತಹ ಕ್ಲಿನಿಕ್ ಮತ್ತು ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಆದೇಶದಂತೆ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿರುವ ಎಲ್ಲ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಒಟ್ಟು 48 ಕ್ಲಿನಿಕ್ ಇದ್ದು, ಕೆಲವು ಕ್ಲಿನಿಕ್‌ಗಳ ಪರವಾನಗಿ ನವೀಕರಣಗೊಂಡಿಲ್ಲ. ನೂನ್ಯತೆ ಕಂಡಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net