ಖೋ ಖೋ ವಿಶ್ವ ಚಾಂಪಿಯನ್‌ಗೆ ತವರಿನ ಸನ್ಮಾನ

17M.D.R.4
2025ರ ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಡಿ.ಮಲ್ಲಿಗೆರೆಯ ಎಂ.ಕೆ.ಗೌತಮ್‌ಗೆ ಗ್ರಾಮಸ್ಥರು ತವರಿನ ಸನ್ಮಾನ ಮಾಡಿದರು. ಟಿ.ಹುಚ್ಚಪ್ಪ, ಎಂ.ಬಿ.ರಮೇಶ್, ಎಂ.ಟಿ.ಶ್ರೀನಿವಾಸ್, ಎಂ.ಆರ್.ಸುನೀಲ್, ಎಂ.ಎನ್.ಕಪನೀಗೌಡ, ಎಂ.ಎಚ್.ಪುಟ್ಟಸ್ವಾಮಿ, ಎಂ.ಶ್ರೀಕಂಠೇಗೌಡ, ಎಂ.ಎನ್.ಸ್ವಾಮಿಗೌಡ ಇದ್ದರು.
Published on

ಮದ್ದೂರು: 2025ರ ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಡಿ.ಮಲ್ಲಿಗೆರೆಯ ಎಂ.ಕೆ.ಗೌತಮ್‌ಗೆ ಗ್ರಾಮಸ್ಥರು ಬುಧವಾರ ತವರಿನ ಸನ್ಮಾನ ಮಾಡಿದರು.

ದೇಶೀಯ ಕ್ರೀಡೆ ಖೋಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಗೌತಮ್ ಅವರನ್ನು ಡಿ.ಮಲ್ಲಿಗೆರೆ ಗ್ರಾಮಸ್ಥರು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಅಭಿನಂದಿಸಲಾಯಿತು.

ಗ್ರಾಮದ ಮುಖಂಡ ಟಿ.ಹುಚ್ಚಪ್ಪ ಮಾತನಾಡಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಗೌತಮ್ ಮಾಡಲಿ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಎಂ.ಕೆ.ಗೌತಮ್ ಒಬ್ಬ ಆಟೋ ಚಾಲಕನ ಮಗನಾಗಿದ್ದು ಈ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಇವರು ತಮ್ಮ ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೇರಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಕ್ರೀಡಾಲೋಕದಲ್ಲಿ ಮತ್ತಷ್ಟು ಸಾಧನೆ ಮಾಡಲು ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಡಿ.ಮಲ್ಲಿಗೆರೆ ಗ್ರಾಮದಎಂ.ಬಿ.ರಮೇಶ್, ಎಂ.ಟಿ.ಶ್ರೀನಿವಾಸ್, ಎಂ.ಆರ್.ಸುನೀಲ್, ಎಂ.ಎನ್.ಕಪನೀಗೌಡ, ಎಂ.ಎಚ್.ಪುಟ್ಟಸ್ವಾಮಿ, ಎಂ.ಶ್ರೀಕಂಠೇಗೌಡ, ಎಂ.ಎನ್.ಸ್ವಾಮಿಗೌಡ, ಎಂ.ಬಿ.ಶ್ರೀನಿವಾಸ್, ಎಂ.ಎಚ್. ಮಹೇಶ್, ಎಂ.ಟಿ.ರಾಮಚಂದ್ರ, ಎಂ.ನಂಜಪ್ಪ, ಸಂತೋಷ, ಅಭಿ, ಗ್ರಾಮದ ಯಜಮಾನರು ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net