

ಯಾಂತ್ರಿಕ ಬದುಕಿನಲ್ಲಿ ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದು, ಮಾನಸಿಕ ಒತ್ತಡ, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ ಇಂದು ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರಿವೆ. ಅವುಗಳಲ್ಲಿ ಒಂದು ಮಹಿಳೆಯರನ್ನು ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಪಿ.ಸಿ.ಒ.ಡಿ.
ಹಾಮೋನ್ ಅಸಮತೋಲನದಿಂದ ಈ ಸಮಸ್ಯೆ ಉಂಟಾಗುತ್ತದೆ. ಋತು ಚಕ್ರದಲ್ಲಿ ಏರುಪೇರು, ಮುಖದ ಮೇಲೆ ಮೊಡವೆ, ಕೂದಲು ಬೆಳೆಯುವುದು, ತೂಕ ಜಾಸ್ತಿಯಾಗುವುದು, ಬಂಜೆತನ ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಈ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದರೆ ಇದು ಮಧುಮೇಹ ಮತ್ತು ಹೃದಯ ಸಂಬಂಧಿ ವ್ಯಾಧಿಗಳಿಗೆ ದಾರಿ ಮಾಡಿಕೊಡುತ್ತವೆ.
ಪಿ.ಸಿ.ಒ.ಡಿ ಎಂದರೇನು?: ಅಪಕ್ವವಾದ ಅಂಡಾಣು ಗರ್ಭಾಶಯದ ಎರಡು ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿ.ಸಿ.ಒ.ಡಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರೂ ಅಂಡಕೋಶದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗಿ ಗರ್ಭ ಧರಿಸಲು ಸಿದ್ಧವಾಗುತ್ತದೆ. ಆದರೆ ಯಾರಲ್ಲಿ ಪಿ.ಸಿ.ಒ.ಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೆ ಅಲ್ಲಿಯೇ ಅಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಯಂತೆ ಅಂಡಕೋಶದ ಒಳಪದರದ ಮೆಲೆ ಉಳಿದು ಹೋಗುತ್ತದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಬೈಲ್ಯಾಟರಲ್ ಪಿ.ಸಿ.ಒ.ಡಿ ಎಂದು ಕರೆಯುತ್ತಾರೆ.
ಟೈಪ್ 2 ಡಯಾಬಿಟೀಸ್, ಹೃದಯ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ, ಅಧಿಕ ರಕ್ತದ ಹರಿವು, ಎಂಡೊಮೆಟ್ರಿಯಲ್, ಕ್ಯಾನ್ಸರ್ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ವ್ಯಾಯಾಮ ಮಾಡುವುದು, ತೂಕವನ್ನು ಸರಿಯಾಗಿ ಇಟ್ಟಿಕೊಳ್ಳುವುದು, ಅತಿಯಾದ ಕೊಬ್ಬಿನ ಆಹಾರ ಸೇವನೆ ಮಾಡದೆ ಇರುವುದು ಇತ್ಯಾದಿಗಳಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.
ಹೋಮಿಯೋಕೇರ್ಚಿಕಿತ್ಸೆ
ಹೋಮಿಯೋಕೇರ್ ಇಂಟರ್ನ್ಯಾಷನ್ನಲ್ಲಿ ಜೆನಿಟಿಕ್ ಕಾನ್ಸಟಿಟ್ಯೂಷನಲ್ ಚಿಕಿತ್ಸೆ ವಿಧಾನದಿಂದ ಹಾಮೋನ್ಗಳ ಅಸಮತೋಲನತೆಯಿಂದ ಬರುವ ವ್ಯಾಧಿಗಳನ್ನು ನಿಯಂತ್ರಣದಲ್ಲಿ ಇಡುವ ಅವಕಾಶವಿದೆ. ಅಲ್ಲದೇ, ಯಾವುದೇ ಕಾಂಪ್ಲಿಕೇಷನ್ ಇದ್ದರೂ ಅದನ್ನು ಸರಿಪಡಿಸಲಾಗುವುದು. ಯೌವನಾವಸ್ಥೆಯಲ್ಲಿ ಸರಿಯಾಗಿ ಚಿಕಿತ್ಸೆ ತೆಗೆದುಕೊಂಡರೆ ಬಂಜೆತನ ಒಬೆಸಿಟಿಯಂಥ ಸಮಸ್ಯೆಗಳಿಂದಲೂ ರಕ್ಷಣೆ ಪಡೆಯಬಹುದು.