ಒಂದೇ ರಾತ್ರಿಯಲ್ಲಿ ಖತರ್ನಾಕ್ ಕಳ್ಳರ ಕೈ ಚಳಕ, ಕನ್ನ ಹಾಕಿದ ಮನೆಗಳೆಷ್ಟು ಗೊತ್ತಾ..?

theft pic
Published on

ವಿಜಯನಗರ: ಖತರ್ನಾಕ್ ಕಳ್ಳರ ತಂಡವೊಂದು ಒಂದೇ ಗ್ರಾಮದ ಸುಮಾರು 15 ಮನೆಗಳಿಗೆ ಕನ್ನ ಹಾಕಿ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಹೊಸಪೇಟೆ ತಾಲೂಕಿನ ಕಮಲಾಪುರ ಕೆರೆತಾಂಡದಲ್ಲಿ ನಡೆದಿದೆ.

ಕಬ್ಬು ಕಟಾವಿನ ಕೆಲಸಕ್ಕೆ ಊರಿನ ಕೆಲ ಮನೆಯವರು ಬೇರೆ ಕಡೆ ತೆರಳಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು, ಭಾನುವಾರ ತಡ ರಾತ್ರಿ ಗ್ರಾಮಕ್ಕೆ ನುಗ್ಗಿದ್ದಾರೆ. ನಂತರ ಮನೆಗಳ ಬೀಗ ಒಡೆದು ಕೈ ಚಳಕ ತೋರಿದ್ದಾರೆ.

ಮನೆಯಲ್ಲಿನ ಗಾಡ್ರೇಜ್, ಟ್ರಂಕ್ ಗಳನ್ನು ಒಡೆದು ಅಂದಾಜು 3 ಲಕ್ಷ ಹಣ, ಮತ್ತು 10 ರಿಂದ 12 ತೊಲೆ ಬಂಗಾರದ ಸಾಮಾನುಗಳು ಕದ್ಯೊಯ್ದಿದ್ದಾರೆ ಎನ್ನಲಾಗಿದೆ. ಒಂದೇ ರಾತ್ರಿ 15 ಮನೆಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರನ್ನು ಖೆಡ್ಡಾಗೆ ಕೆಡವಲು ಕಮಲಾಪುರ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net