ಗೃಹರಕ್ಷಕ ಪ್ರಕಾಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಸ್ತಾಂತರ

home
ವಿಟ್ಲ ಘಟಕದ ಗೃಹರಕ್ಷಕರಾಗಿದ್ದ ದಿ.ಪ್ರಕಾಶ್ ಪತ್ನಿ ಸೌಮ್ಯಾ ಅವರಿಗೆ 5 ಲಕ್ಷ ರೂ. ಪರಿಹಾರಧನದ ಮಂಜೂರಾತಿ ಪತ್ರವನ್ನು ಸಮಾದೇಷ್ಟ ಡಾ.ಮುರಲಿ ಮೋಹನ್ ಚೂಂತಾರು ನೀಡಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್. ಮೊದಲಾದವರಿದ್ದರು.
Published on

ಮಂಗಳೂರು: ಕರ್ತವ್ಯದಲ್ಲಿದ್ದಾಗ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ವಿಟ್ಲ ಘಟಕದ ಗೃಹರಕ್ಷಕರಾಗಿದ್ದ ಪ್ರಕಾಶ್ ಅವರ ಕುಟುಂಬಕ್ಕೆ ಸರ್ಕಾರದಿಂದ ಕೇಂದ್ರ ಕಚೇರಿ ಮೂಲಕ 5 ಲಕ್ಷ ರೂ. ಪರಿಹಾರಧನ ಮಂಜೂರಾಗಿದೆ. ಮಂಜೂರಾತಿ ಪತ್ರವನ್ನು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅವರು ಪ್ರಕಾಶ್ ಅವರ ಪತ್ನಿ ಸೌಮ್ಯಾ ಅವರಿಗೆ ಹಸ್ತಾಂತರಿಸಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್., ಮೀನಾಕ್ಷಿ, ಗೃಹರಕ್ಷಕರಾದ ದಿವಾಕರ್, ಗಿರೀಶ್, ಸುಲೋಚನ, ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.

2022 ಫೆ.4ರಂದು ಬಂಟ್ವಾಳ ಆರ್.ಟಿ.ಒ ಕರ್ತವ್ಯದಲ್ಲಿರುವಾಗ ಪ್ರಕಾಶ್ ಅಪಘಾತದಿಂದ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net