ಅಕ್ಟೋಬರ್ 31 ರಂದು ದೇಶಾದ್ಯಂತ ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ ಕಾಂತಾರ ಅಧ್ಯಾಯ 1 Kantara Chapter 1

kantara
Published on

Kantara Chapter 1: ಕಾಂತಾರ ಅಧ್ಯಾಯ 1 ಚನಲಚಿತ್ರವು 2025 ರ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಬಾಕ್ಸ್​ ಆಫೀಸ್​ಗೆ ಹೆಚ್ಚಿನ ಗಳಿಕೆಯನ್ನು ಮುಂದುವರೆಸಿದೆ. ಇದು 2022 ರ ಬ್ಲಾಕ್​ ಬ್ಲಸ್ಟರ್ ಕಾಂತಾರ ​ಎ ಲೆಜೆಂಡ್​ನ ಪೂರ್ವಭಾವಿ ಚಿತ್ರವಾಗಿದ್ದು, ದೇಶೀಯವಾಗಿ ಇದು 500 ಕೋಟಿ ರೂ.ಗಳಿಸಿದೆ ಮತ್ತು ಇನ್ನೂ ಹಣ ಗಳಿಸುತ್ತಿದೆ.

ಆದರೆ, ಈಗ ಈ ದೈವಿಕ ಸಾಹಸಗಾಥೆಯು ಭಾಷೆಗಳು ಮತ್ತು ಸಂಸ್ಕೃತಿಗಳ ಗಡಿಯನ್ನು ಮೀರುವ ಸಮಯ ಬಂದಿದ್ದು, ಹೊಂಬಾಳೆ ಫಿಲ್ಮ್ಸ್, ಕಾಂತಾರ ಅಧ್ಯಾಯ 1 ಇಂಗ್ಲಿಷ್ ಆವೃತ್ತಿಯು ಅಕ್ಟೋಬರ್ 31 ರಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು  ಅಧೀಕೃತವಾಗಿ ತಿಳಿಸಿದೆ.

ಕಾಂತಾರ ಅಧ್ಯಾಯ 1 ಕಥಾವಸ್ತು

ಅಧ್ಯಾಯ 1 ಕಾಡುಬೆಟ್ಟು ಶಿವನ ತಂದೆ ಅಣ್ಣಪ್ಪ ನಾಪತ್ತೆಯಾಗಿದ್ದು, ಅವರು 1970 ರಲ್ಲಿ ಭೂತ ಕೋಲ ಆಚರಣೆಯ ಸಮಯದಲ್ಲಿ ಕಣ್ಮರೆಯಾದರು ಮತ್ತು ರಹಸ್ಯವು ಕಾಂತಾರ ಎಂಬ ಹಳ್ಳಿಯ ಬಾವಿಯಲ್ಲಿದೆ ಎಂಬುದರ ಸುತ್ತ ಸಿನಿಮಾ ಸುತ್ತುತ್ತಿದೆ.

ಚಿತ್ರದ ಕಥಾವಸ್ತುವಿನ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ , ಇದು ನಮಗೆ ಕೇವಲ ಪುರಾಣ ಕಥೆಯಲ್ಲ. ಇದು ನಮಗೆ, ಒಂದು ಇತಿಹಾಸ. ಅದು ಈ ಸಿನಿಮಾ ಮೂಲಕ ಸಂಭವಿಸಿದೆ ನಾವು ಅದನ್ನು ನಮ್ಮ ಜಾನಪದದಲ್ಲಿ ಕೇಳಿದ್ದೇವೆ. ಹಾಗೂ ಸಂಪ್ರದಾಯದಲ್ಲಿ ಅನುಸರಿಸುತ್ತೇವೆ. ಇದನ್ನು ಕೆಲವರು ಪುರಾಣ ಎಂದರೆ ನಮಗೆ ಇದು ಇತಿಹಾಸ. ಇದಕ್ಕೆ ಪುರಾವೆಗಳಿವೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

ರಿಷಬ್​ ಶೆಟ್ಟಿ ಪ್ರತಿಕ್ರಿಯೆ

ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿದಾಗ, ನಮಗೆ ಸಂತೋಷ ಮತ್ತು ಕೃತಜ್ಞತೆ ಉಂಟಾಗುತ್ತದೆ. ನಾವು ಅದನ್ನು ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತೇವೆ. ಈ ಯಶಸ್ಸಿಗೆ ಇಡೀ ತಂಡದ ಪ್ರಯತ್ನವೇ ಕಾರಣ. ಎಲ್ಲರೂ ಚಿತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ" ಎಂದು ರಿಷಬ್​ ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕೊನೆಯದಾಗಿ ಪ್ರೇಕ್ಷಕರು ಚಿತ್ರ ಕಥೆ ಮತ್ತು ಪರಿಕಲ್ಪನೆಯೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಗುರಿಯಾಗಿತ್ತು. ನಮಗೆ ಸಿಕ್ಕ ಪ್ರತಿಕ್ರಿಯೆಯನ್ನು ನಾವು ಸ್ವಾಗತಿಸಿದ್ದೇವೆ. ಆದರಿಂದ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net