

ಹುಣಸೂರು : 29ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಬುಧವಾರ ಪವಮಾನ ಹೋಮ ನಡೆಸಲಾಯಿತು. ನಗರದ ಬ್ರಾಹ್ಮಣರ ಬೀದಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಅರ್ಚಕ ಶ್ರೀಹರಿ ನೇತೃತ್ವದಲ್ಲಿ ಪವಮಾನ ಹೋಮ ನೆರವೇರಿತು. ಒಂದು ಸಾವಿರಕ್ಕು ಹೆಚ್ಚು ಹನುಮ ಭಕ್ತರು ಒಂದು ಲಕ್ಷಕ್ಕೂ ಹೆಚ್ಚು ಬಾರಿ ಬರೆದ ಶ್ರೀ ರಾಮ ಜಯ ರಾಮ, ಜೈಹನುಮಾನ್ ಮುಂತಾದ ಶ್ಲೋಕಗಳ ಪುಸ್ತಕಗಳನ್ನು ಹೋಮಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭ ಮಾತನಾಡಿದ ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, 29ನೇ ಹನುಮ ಜಯಂತಿ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿದೆ. ಮುಂದಿನ ವರ್ಷ 30ನೇ ಹನುಮ ಜಯಂತಿ ಮಹೋತ್ಸವ ಡಿ.13,14 ಮತ್ತು 15ರಂದು ನೆರವೇರಿಸಲು ಯೋಜನೆ ಸಿದ್ಧಗೊಂಡಿದೆ ಎಂದರು.
ಅರ್ಚಕ ಚಂದ್ರಮೌಳಿ, ಸಮಿತಿ ಸದಸ್ಯ ಎಚ್.ವೈ.ಮಹದೇವ್, ಮುಖಂಡರಾದ ಮಹದೇವ್ ಬಾಗಲ್ ದಂಪತಿ, ಸಂಪತ್ ಕುಮಾರ್ ಇತರರಿದ್ದರು.