2023ನೇ ಸಾಲಿನ 'ಸಾರ್ವತ್ರಿಕ ರಜೆ- ಪರಿಮಿತ ರಜೆ'ಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

Vidhana Soudha vvani
Published on

ಬೆಂಗಳೂರು: ಮುಂದಿನ ವರ್ಷ ಅಂದರೆ 2023ನೇ ಸಾಲಿನಲ್ಲಿ ಒಟ್ಟು 19 ದಿನಗಳನ್ನು ಸಾರ್ವತ್ರಿಕ ರಜಾ ದಿನವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಈ ದಿನಗಳಲ್ಲಿ ಪ್ರಮುಖ ಹಬ್ಬಗಳು, ಗಣ್ಯರ ಜಯಂತಿಗಳು ಇರಲಿವೆ. ಸರ್ಕಾರ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ.

  • ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (15.01.2023), ಬಸವ ಜಯಂತಿ/ಅಕ್ಷಯ ತೃತೀಯ (23.04.2023) ಮತ್ತು ನರಕ ಚತುರ್ದಶಿ (12.11.2023) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (14.10.2023) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (28.10.2023) ಈ ರಜಾ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
  • ದಿನಾಂಕ: 01.04.2023 ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ, ಸದರಿ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರುತ್ತದೆ.
  • ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.
  • ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net