

ಕೋಲಾರ: ಎಲ್ಲ ಇಲಾಖೆಗಳನ್ನು ಒಳಗೊಂಡು ಏಪ್ರಿಲ್‌ನಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಽಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತುಮಕೂರಿನಲ್ಲಿ ಸಮಾವೇಶ ಮಾಡಿದಂತೆ ಜಿಲ್ಲೆಯಲ್ಲೂ ಮಾಡಬೇಕು, ಸಿಎಂ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಟ್ರ‍್ಯಾಕ್ಟರ್, ಮೋಟಾರ್, ಬೀತ್ತನೆ ಬೀಜ, ಅಂಗವಿಕಲರಿಗೆ ವಾಹನ ವಿತರಣೆ, ಕೃಷಿ ಯಂತ್ರಗಳು ಹೀಗೆ ಹಲವು ಯೋಜನೆಗಳನ್ನು ೧,೦೦೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಲಾಯಿತು. ಅವರಿಗೆ ಸಾಧ್ಯವಾಗಿದ್ದೇನು, ನಮ್ಮ ಜಿಲ್ಲೆಯಲ್ಲಿ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಯಾವುದೇ ತಾಲೂಕಿನಲ್ಲೂ ಸೌಲಭ್ಯ ಕೊಡಬಾರದು, ಜಿಲ್ಲಾಮಟ್ಟದ ಕಾರ್ಯಕ್ರಮ ಮಾಡಿ ವಿತರಿಸಬೇಕು. ಇದರಿಂದ ಎಷ್ಟು ಮಂದಿಗೆ ಸೌಲಭ್ಯ ನೀಡಲಾಗಿದೆ ಎಂಬುದು ಗೊತ್ತಾಗುತ್ತದೆ. ಇಲಾಖೆಯ ಅಽಕಾರಿಗಳು ಸಹಕಾರ ನೀಡಬೇಕು ಎಂದು ಸೂಚಿಸಿದರು.
ಮಧ್ಯ ಪ್ರವೇಶಿಸಿದ ಸಂಸದ ಎಂ.ಮಲ್ಲೇಶ್‌ಬಾಬು ಮಾತನಾಡಿ, ಮಂತ್ರಿ ಆದವರು ಪ್ರತಿ ತಾಲೂಕಿಗೆ ಭೇಟಿ ನೀಡಿದರೆ ಆಡಳಿತ ಚುರುಕಾಗುತ್ತದೆ, ಸಿಎಂ ಅವರು ಕಾರ್ಯ ಒತ್ತಡದಲ್ಲಿದ್ದು ಅವರನ್ನು ಕರೆಸುವುದು ತಡವಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್, ಎಂಪಿ ಅವರೇನೊ ಸಿಎಂ ಬರಲ್ಲ ಅಂತ ಹೇಳುತ್ತಿದ್ದಾರೆ, ಕಾರ್ಯಕ್ರಮಕ್ಕೆ ಯಾರು ಬರಲಿ ಬಿಡಲಿ, ನಾನಂತೂ ಬರುತ್ತೇನೆ, ಸಿಎಂ ಅವರನ್ನು ಕರೆದುಕೊಂಡು ಬರುತ್ತೇನೆ ಎಂದರು. ಆಗ ಶಾಸಕರೆಲ್ಲ ಒಮ್ಮತ ವ್ಯಕ್ತಪಡಿಸಿದರು.
ಅಽಕಾರಿಗಳು ವರ್ಗಾವಣೆಯಾಗಿ ಜಿಲ್ಲೆಗೆ ಬಂದ ವಾರದೊಳಗೆ ಶಿಷ್ಟಾಚಾರದ ಪ್ರಕಾರ ಸಚಿವ, ಎಂಎಲ್‌ಎ, ಎಂಎಲ್ಸಿ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಳ್ಳಬೇಕು. ಅಽಕಾರಿಗಳು ಜನಪ್ರತಿನಿಽಗಳನ್ನು ಭೇಟಿ ಮಾಡದೆ ಕೆಡಿಪಿಗೆ ಬರುವ ಹಾಗಿಲ್ಲ, ಡಿಸಿ, ಸಿಇಒ ಅಽಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಿAದ ಗ್ರಾಮ ಸಭೆಗಳು ನಡೆಯುತ್ತವೆ. ಇದರಲ್ಲಿ ಪ್ರತಿ ಇಲಾಖೆಯ ಅಽಕಾರಿಗಳು ಭಾಗಿಯಾಗುತ್ತಾರೆ, ಆಗ ಇಲಾಖೆ ಯೋಜನೆಗಳ ಬಗ್ಗೆ ಪ್ರಚಾರ ಮಾಡಿದರೆ ಜನರಿಗೆ ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.
ಜಿಲ್ಲಾಽಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಕ್ಕಿಲಿಗರ್ ಉಪಸ್ಥಿತರಿದ್ದರು.
* ಜಿಲ್ಲೆಯಿಂದಲೇ ಕ್ರಮವಾಗಲಿ
ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಫಲ ಪುಷ್ಪ ಪ್ರದರ್ಶನ ಮಾಡಲಾಗಿದೆ, ನರ್ಸರಿಗಳನ್ನು ಕಾನೂನಡಿಗೆ ತರಲು ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿದ್ದಾರೆ. ಅವರಿಂದ ಏನು ಅನುಕೂಲ ಮಾಡಲಾಗುತ್ತಿದೆ, ನರ್ಸರಿ, ನಕಲಿ ಗೊಬ್ಬರ ವಿರುದ್ಧ ಕ್ರಮವಾಗುತ್ತಿಲ್ಲ, ಅಂಗಡಿಗಳವರು ದಂಧೆ ಮಾಡಿಕೊಂಡಿದ್ದಾರೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಬೈರತಿ ಸುರೇಶ್ ಮಾತನಾಡಿ, ಕಳೆದ ಸಭೆಯಲ್ಲಿಯೇ ನರ್ಸರಿಗಳ ವಿರುದ್ಧ ಕ್ರಮವಹಿಸಲು ಚರ್ಚಿಸಲಾಗಿದೆ. ನಕಲಿ ಗೊಬ್ಬರ, ಬಿತ್ತನೆ ಬೀಜ, ನರ್ಸರಿಗಳ ವಿರುದ್ಧ ಕ್ರಕೈಗೊಳ್ಳುವುದು ಜಿಲ್ಲೆಯಿಂದಲೇ ಪ್ರಾರಂಭವಾಗಲಿ ಎಂದು ಸಲಹೆ ನೀಡಿದರು.
* ಫಲಿತಾಂಶ ಸುಧಾರಣೆಯಾಗದಿದ್ದರೆ ಡಿಡಿಪಿಐ ಹೊಣೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯೂ ಕಳೆದ ಬಾರಿ ೬ನೇ ಸ್ಥಾನದಿಂದ ೨೦ನೇ ಸ್ಥಾನಕ್ಕೆ ಕುಸಿದಿದೆ, ಇದಕ್ಕೆ ಕಾರಣ ಕೇಳಿದರೆ ವಿಡಿಯೋಗ್ರಫಿ ಸಬೂಬು ಹೇಳುತ್ತಾರೆ. ಈ ವರ್ಷ ಸುಧಾರಣೆಯಾಗಬೇಕು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಸೂಚಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಕೃಷ್ಣಮೂರ್ತಿ ಪ್ರಸಕ್ತ ಸಾಲಿನಲ್ಲಿ ೧೦ರೊಳಗೆ ಬರುವುದಾಗಿ ಭರವಸೆ ನೀಡಿದರು. ಮಧ್ಯ ಪ್ರವೇಶಿಸಿದ ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್, ಕಳೆದ ಬಾರಿ ಫಲಿತಾಂಶ ಕುಸಿದಾಗಲೇ ನಿಮ್ಮನ್ನು ಹೊಣೆ ಮಾಡಬೇಕಾಗಿತ್ತು, ಈ ಬಾರಿ ಕಡಿಮೆಯಾದರೆ ಸುಮ್ಮನೆ ಬಿಡುವುದಿಲ್ಲ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
* ಬುಕ್ಕಿಗಳ ವಿರುದ್ಧ ಕ್ರಮಕೈಗೊಳ್ಳಿ
ಮುಂದಿನ ಮಾರ್ಚ್ನಲ್ಲಿ ಐಪಿಎಲ್ ಶುರುವಾಗಲಿದ್ದು, ಪ್ರತಿ ತಾಲೂಕಿನಲ್ಲೂ ನಮ್ಮನ್ನೇ ಮೇಯಿಸುವ ಬುಕ್ಕಿಗಳು ಇದ್ದಾರೆ, ಇದರ ವಿರುದ್ಧ ಈಗಿನಿಂದಲೇ ಕ್ರಮವಹಿಸಬೇಕು, ಇಲ್ಲದಿದ್ದರೆ ಯುವಕರು ಬೀದಿಪಾಲಾಗುವ ಸಾಧ್ಯತೆಯಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಬಿ.ನಿಖಿಲ್, ಈ ಬಗ್ಗೆ ತಳಮಟ್ಟದಿಂದ ಕೆಲಸ ಶುರುವಾಗಿದ್ದು, ಎರಡು ವಾರದಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಿದರು.
* ಆರ್‌ಟಿಒ ಅಧಿಕಾರಿಗಳಿಗೆ ತರಾಟೆ
ಅಂತಾರಾಜ್ಯ ವಾಹನಗಳು ರಾಜ್ಯದಲ್ಲಿ ಅನಽಕೃತವಾಗಿ ಓಡಾಡುತ್ತಿರುವ ಬಗ್ಗೆ ದೂರುಗಳು ಇವೆ. ಅಜೆಸ್ಟ್ಮೆಂಟ್ ವ್ಯವಹಾರ ಜಾಸ್ತಿ ನಡೆಯುತ್ತಿದೆ, ಆರ್‌ಟಿಒ ಅಽಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಸಚಿವ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಮೃದ್ಧಿ ಮಂಜುನಾಥ್, ವರದಿ ಸಲ್ಲಿಸಿರುವ ಮಾಹಿತಿ ಪ್ರಕಾರ ವಾಹನಗಳು ಓಡಾಡುತ್ತಿಲ್ಲ. ಚೆಕ್‌ಪೋಸ್ಟ್ ಗಳಲ್ಲಿದೊಣ್ಣೆ ಹಿಡಿದುಕೊಂಡು ನಿಂತಿರುತ್ತಾರೆ, ಅದು ಯಾವುದೂ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಆರ್‌ಟಿಒ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಬಾಕ್ಸ್...
ಮಹಿಳಾ, ಮಕ್ಕಳ ಆಸ್ಪತ್ರೆಗೆ ಮನವಿ
ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ, ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರ ಮಂಜೂರು ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಸುರೇಶ್, ಸಂಬAಧಪಟ್ಟ ಸಚಿವರೊಂದಿಗೆ ಚರ್ಚಿಸಿ ಮಂಜೂರು ಮಾಡಿಸಲಾಗುವುದು ಎಂದರು.