ಕನಕ ನೌಕರರ ಸಂಘಕ್ಕೆ ಎಚ್.ಕೆ.ತಿಪ್ಪೇಶ್ ಅಧ್ಯಕ್ಷ

6KDR5
ಕಡೂರು ಪಟ್ಟಣದಲ್ಲಿ ಕನಕನೌಕರರ ಸಂಘಕ್ಕೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಕೆ. ತಿಪ್ಪೇಶ್ ಅವರನ್ನು ನೌಕರರ ಬಳಗದವರು ಅಭಿನಂದಿಸಿದರು. ರವಿ, ಮಂಜುನಾಥ್, ಹರೀಶ್ ಮತ್ತಿತರಿದ್ದರು.
Published on

ಕಡೂರು: ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷರಾಗಿ ಎಚ್.ಕೆ.ತಿಪ್ಪೇಶ್ ಭಾನುವಾರ ಆಯ್ಕೆಯಾದರು. ಪಟ್ಟಣದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ನೌಕರರ ಬಳಗದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕೆಂಪಸಿದ್ದಯ್ಯ(ಗೌರವಾಧ್ಯಕ್ಷ), ಎಸ್.ಬಿ. ಮಲ್ಲಿಕಾರ್ಜುನ್ (ಕಾರ್ಯದರ್ಶಿ), ವೈ.ಬಿ.ಹನುಮಂತಪ್ಪ, ಎನ್.ಬಿ.ಚಂದ್ರುಶೇಖರ್, ಎಲ್‌ಐಸಿಹಾಲಪ್ಪ,(ಉಪಾಧ್ಯಕ್ಷರು), ಕೆ.ಆರ್. ಸುರೇಶ್(ಖಜಾಂಚಿ), ಎಸ್.ರಾಜುಒಡೆಯರ್(ಸಹಕಾರ್ಯದರ್ಶಿ), ಅನ್ನಪೂರ್ಣಮ್ಮ, ಎನ್.ಬಿ. ಸುರೇಶ್ (ಸಂಘಟನಾ ಕಾರ್ಯದರ್ಶಿ), ಎ.ಲಕ್ಷ್ಮಣ್, ಎನ್.ಎಚ್.ಚಂದ್ರಪ್ಪ(ಗೌರವ ಸಲಹೆಗಾರ), ನಿರ್ದೇಶಕರು ಎಚ್.ಸಿರಾಜಪ್ಪ, ಪುಟ್ಟಸ್ವಾಮಿ, ಎಂ.ಎನ್.ಶಿವಣ್ಣ, ಬಿ.ಎನ್.ಮಲ್ಲೇಶಪ್ಪ, ಕೆ.ಲಿಂಗರಾಜು, ಕೆ.ಸಿ.ರಾಧಮ್ಮ, ಶ್ರೀನಿವಾಸ್, ಬಿ.ಟಿ. ಗಿರಿರಾಜ್, ಎಲ್.ಚಂದ್ರುಶೇಖರ್, ಆನಂದಪ್ಪ ಆಯ್ಕೆಯಾಗಿದ್ದಾರೆ.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಎಚ್.ಕೆ.ತಿಪ್ಪೇಶ್ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ತೆಗೆ ತಾಲೂಕಿನ ಪ್ರಗತಿ ಪರ ರೈತರನ್ನು ಗೌರವಿಸಲಾಗುವುದು. ಇತರೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಗುವುದು. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಸಮಾಜದಲ್ಲಿ ಬಡತನದಿಂಧ ನೊಂದವರಿಗೆ ಸಹಾಯಹಸ್ತ ನೀಡಲು ಸೂಕ್ತ ನಿವೇಶನ ಪಡೆದು ಸಂಘಕ್ಕೆ ಕಟ್ಟಡ ನಿರ್ಮಾಣದ ಗುರಿಹೊಂದಲಾಗಿದೆ. ಕ್ಷೇತ್ರದ ಶಾಸಕರ ಹಾಗೂ ಸಮಾಜದ ಗಣ್ಯರಿಂದ ಸಹಾಯಹಸ್ತ ಪಡೆಯಲಾಗುವುದು ಎಂದರು. ಈ ಸಂದರ್ಭದಲ್ಲಿ ವಕೀಲ ರವಿ, ಎಂ.ಬಿ. ಮಂಜುನಾಥ್, ಹರೀಶ್, ಎಚ್.ಬಿ. ರಾಜಣ್ಣ, ಪ್ರಭಾಕರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net