ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

baniyan
Published on

ಕಲಬುರಗಿ: ಹೈಟೆಕ್​​ ಉಪಾಯ ಬಳಸಿ ಪೊಲೀಸ್ ಪೇದೆ ಪರೀಕ್ಷೆಯಲ್ಲಿ ನಕಲು ಮಾಡೋದಕ್ಕೆ ಮುಂದಾಗಿದ್ದ ಮೂವರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಬನಿಯನ್​ ಒಳಗೆ ಡಿವೈಸ್​ ಇಟ್ಟುಕೊಂಡು ಬ್ಲೂ ಟೂತ್ ಮೂಲಕ ಕಾನ್​​ಸ್ಟೆಬಲ್​ ಹುದ್ದೆಯ ಪರೀಕ್ಷೆಯ ಉತ್ತರಗಳನ್ನು ಬರೆಯಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಕಲಬುರಗಿಯಲ್ಲಿ ಮೂವರು ಪೊಲೀಸ್ ಪೇದೆ ಪರೀಕ್ಷೆಯ ಅಭ್ಯರ್ಥಿಗಳಾದ ರಾಜಕುಮಾರ್, ಪೀರಪ್ಪ ಮತ್ತು ಮಾಳಪ್ಪ ಎಂಬುವರು ಬನಿಯನ್ ಒಳಗೆ ಡಿವೈಸ್ ಇಟ್ಕೊಂಡು ಪರೀಕ್ಷೆಗೆ ಹೋಗಲು ಸಿದ್ದತೆ ಮಾಡಿಕೊಂಡಿದ್ದರು. ಒಂದು ಅಭ್ಯರ್ಥಿಯ ಬನಿಯನ್ ಡಿವೈಸ್​ಗೆ 5 ಲಕ್ಷ ರೂಪಾಯಿ ನಿಗದಿ ಮಾಡಿದ್ದ ಗ್ಯಾಂಗ್ ಸದಸ್ಯರು, ನಗರದ ಪ್ರೀತಂ ಲಾಡ್ಜಲ್ಲಿ ಕುಳಿತು ಸ್ಕೆಚ್ ಹಾಕುತಿದ್ದರು ಎನ್ನಲಾಗಿದೆ.

ಸಿಇಎನ್ ಪೋಲೀಸರ ತಂಡವು ಕಾರ್ಯಾಚರಣೆ ನಡೆಸಿ ಮೂವರು ಅಭ್ಯರ್ಥಿಗಳೂ ಸೇರಿದಂತೆ 11 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿಗಾಗಿ ಬಳಸುತ್ತಿದ್ದ ಬ್ಲೂಟೂತ್​ ಡಿವೈಸ್​ಗಳನ್ನು ಒಳಗೊಂಡ ಬನಿಯನ್​ಗಳನ್ನೂ, ಮೊಬೈಲ್​ ಫೋನ್​ಗಳನ್ನೂ ಜಪ್ತಿಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net