

ಚನ್ನಪಟ್ಟಣ : ಇತಿಹಾಸ ಮರೆತಿರುವ ಹಾಗೂ ಇತಿಹಾಸವನ್ನು ತಿರುಚಿರುವ ಕಾರಣ ಸಮಾಜದಲ್ಲಿ ಗೊಂದಲ ಹಾಗೂ ಅಪನಂಬಿಕೆಗಳು ಮೂಡಿವೆ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಪುತ್ಥಳಿ ಬಳಿ ಭಾರತ ಸಂವಿಧಾನ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಮಹಿಷ ಮಂಡಲ ಆದಿದೊರೆಯ 2ನೇ ವರ್ಷದ ಮಹಿಷ ದಸರ ಉತ್ಸವದಲ್ಲಿ ಮಾತನಾಡಿ, ಇತಿಹಾಸಕ್ಕೆ ಗೌರವ ನೀಡುವ ಉದ್ದೇಶದಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ. ಮೂಲನಿವಾಸಿಗಳ ಧಾರ್ಮಿಕ ಹಕ್ಕಾಗಿರುವ ಮಹಿಷ ದಸರಾ ಆಚರಿಸಲು ಅತೀವ ಹೆಮ್ಮೆ ಎನ್ನಿಸುತ್ತಿದೆ ಎಂದರು.
ಆರ್ಯರ ಇತಿಹಾಸದ ನಂಬಿಕೆಯಿಂದ ಇಂದಿನ ಪೀಳಿಗೆ ಪೂರ್ವಿಕರನ್ನು ಮರೆತು ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ಮೂಲ ಆಚಾರ ವಿಚಾರಗಳಿಂದ ಹಿಂದೆ ಸರಿಸುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಷ ಮಂಡಲದ ಆದಿ ದೊರೆಯನ್ನು ಕುತಂತ್ರದಿಂದ ಕೊಲೆ ವಾಡಿದ ಆರ್ಯರು ಇತಿಹಾಸವನ್ನು ಮರೆಸಲು, ಚಾಮುಂಡಿ ಎಂಬ ಮಹಿಳೆಯನ್ನು ದೇವತೆ ಎಂಬಂತೆ ಬಿಂಬಿಸಿ ಮಹಿಷ ದೊರೆಯನ್ನು ನರಕ ಶೂರ ಎಂದು ಅಪಪ್ರಚಾರ ವಾಡಿದರು. ಅವರ ಕುತಂತ್ರದಿಂದಾಗಿ ಇಂದಿಗೂ ನಾವು ಚಾಮುಂಡಿಗೆ ಪೂಜೆ ಸಲ್ಲಿಸಿ, ಮಹಿಷನನ್ನು ಮರೆಯುವಂತಾಗಿದೆ. ಚಾಮುಂಡಿ ಹಿವಾಲಯದಿಂದ ಮೈಸೂರಿಗೆ ಬಂದು ಹತ್ತು ಕೈಗಳಿಂದ ಆಯುಧವನ್ನು ಹಿಡಿದು ಮಹಿಷನನ್ನು ಸಂಹರಿಸಲು ಸಾಧ್ಯವೇ? ಇದರ ಬಗ್ಗೆ ಇಂದಿನ ಯುವ ಸಮುದಾಯ ಚಿಂತನೆ ನಡೆಸಬೇಕು. ನಿಜವಾದ ಇತಿಹಾಸವನ್ನು ಅರಿಯಬೇಕು ಎಂದು ಕರೆನೀಡಿದರು.
ಇತಿಹಾಸ ಪ್ರಾಧ್ಯಾಪಕ ಡಾ.ರವಿಕುವಾರ್ ವಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯಂತೆ ಮಹಿಷ ಶೂರನ ಮರೆತಿರುವ ಸವಾಜ ಎಂದಿಗೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ಮಹಿಷನ ಆಳ್ವಿಕೆಯಲ್ಲಿ ಅಂದಿನ ಜನತೆ ಯಾರಿಗೂ ಹೆದರದೆ, ಬೆದರದೆ ಜೀವನ ಸಾಗಿಸುತ್ತಿದ್ದರು ಎಂಬ ಇತಿಹಾಸವಿದೆ.
ಆದರೆ, ಅಂದಿನ ಇತಿಹಾಸಕಾರರು ಮಹಿಷ ಶೂರರನ್ನು ರಾಕ್ಷಸ ಎಂಬಂತೆ ಬಿಂಬಿಸಿ, ಮಹಿಷನನ್ನು ಮರೆತು ಆರ್ಯರ ಸಂಸ್ಕೃತಿಯನ್ನು ಬಳಸಿಕೊಳ್ಳುವಂತಾಗಿದೆ. ಆದರೆ, ಇಂದಿನ ಯುವಸಮುದಾಯ ನೈಜತೆಯನ್ನು ತಿಳಿದು ಮಹಿಷನಿಗೆ ಗೌರವಿಸಬೇಕಾಗಿದೆ ಎಂದರು.
ನಿವೃತ್ತ ಅಧಿಕಾರಿ ಮೈಸೂರು ಸಿದ್ದಸ್ವಾಮಿಯವರ ಮಹಿಷಾ ಮಂಡಲ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಬಳಗದ ಪಿ.ಜೆ. ಗೋವಿಂದರಾಜು, ಜಯಕಾಂತ್ ಚಾಲುಕ್ಯ, ಅಕ್ಕೂರು ಶೇಖರ್, ನೀಲಸಂದ್ರ ಸಿದ್ದರಾಮು, ಮತ್ತಿಕೆರೆ ಹನುಮಂತಯ್ಯ, ಜೈಪ್ರಕಾಶ್, ಡಾ. ಜಯಸಿಂಹ. ಅಪ್ಪಗೆರೆ ಪ್ರದೀಪ್, ಶ್ರೀನಿವಾಸ್ ಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.