ಹಿರಣ್ಯಕೇಶಿ ಕಾರ್ಖಾನೆ ಅಭಿವೃದ್ಧಿಗೆ ಸಹಕರಿಸಿ

31Huk2-Web
ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಜರುಗಿದ ವಾರ್ಷಿಕ ಸಭೆಯಲ್ಲಿ ನಿಖಿಲ್ ಕತ್ತಿ ಮಾತನಾಡಿದರು. ಶ್ರೀಶೈಲಪ್ಪ ಮಗದುಮ್ಮ, ನಿರ್ದೇಶಕರಾದ ಪ್ರಲ್ಹಾದ ಪಾಟೀಲ, ಶಿವನಾಯಿಕ ನಾಯಿಕ ಇತರರಿದ್ದರು.
Published on

ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕೆಲ ಸದಸ್ಯರು ತಾವು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗೆ ಕಳುಹಿಸುತ್ತಿರುವುದರಿಂದ ಅಂಥ ಸದಸ್ಯರಿಗೆ ಸಕ್ಕರೆ ವಿತರಣೆ ಪ್ರಮಾಣ ಕಡಿಮೆ ಮಾಡಲಾಗಿದೆ. ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಮಾತ್ರ ಸಕ್ಕರೆ ವಿತರಣೆ ಮಾಡಲಾಗುವುದು ಎಂದು ಕಾರ್ಖಾನೆ ಚೇರ್ಮನ್ ನಿಖಿಲ್ ಕತ್ತಿ ತಿಳಿಸಿದ್ದಾರೆ.

ಗುರುವಾರ ಹಮ್ಮಿಕೊಂಡಿದ್ದ ಕಾರ್ಖಾನೆಯ 64 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಅನ್ಯಾಯವಾಗದಿರಲಿ ಎಂದು ಕಾರ್ಖಾನೆಯ ಮಾರ್ಗದರ್ಶಕರಾದ ಶಾಸಕ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಲಹೆಯಂತೆ ಕಾರ್ಖಾನೆಯ ಸದಸ್ಯರ ಸಂಖ್ಯೆಯನ್ನು 12 ಸಾವಿರದಿಂದ 31 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪರಿಣಾಮ ಹೆಚ್ಚಿನ ರೈತರಿಗೆ ನೆರವಾಗಿದೆ. ಆದರೆ, ಅನೇಕ ಸದಸ್ಯರು ಬೇರೆ ಕಾರ್ಖಾನೆಗೆ ಸಕ್ಕರೆ ಪೂರೈಕೆ ಮಾಡುತ್ತಿರುವುದರಿಂದ ಕಾರ್ಖಾನೆಗೆ ನಷ್ಟವಾಗಿದೆ. ಹೀಗಾದರೆ ಖಾಸಗಿಯವರಿಗೆ ಲೀಜ್ ಆಧಾರದ ಮೇಲೆ ಕಾರ್ಖಾನೆ ನೀಡುವ ದಿನ ಶೀಘ್ರ ಬರಲಿದೆ ಎಂದರು. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ 10 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 4,84,748 ಮೆಟ್ರಿಕ್ ಟನ್ ಕಬ್ಬು ನುರಿಸಿದೆ. 5,19,900 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದೆ. ರೈತರು ಕಾರ್ಖಾನೆಗೆ ಹೆಚ್ಚಿನ ಕಬ್ಬು ಪೂರೈಕೆ ಮಾಡಿ ಅಭಿವೃದ್ಧಿಗೆ ಸಹಕರಿಬೇಕು ಎಂದರು.

ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ನಿರ್ದೇಶಕರಾದ ಪ್ರಲ್ಹಾದ ಪಾಟೀಲ, ಶಿವನಾಯಿಕ ನಾಯಿಕ, ರಾಜಕುಮಾರ ಪಾಟೀಲ, ಉದಯಕುಮಾರ ದೇಸಾಯಿ, ಸುರೇಶ ಬೆಲ್ಲದ, ಬಸವರಾಜ ಕಲ್ಲಟ್ಟಿ, ಪಿ.ಜಿ.ಘಾಳಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲಪ್ಪ ಪಾಟೀಲ, ಎಪಿಎಂಸಿ ನಿರ್ದೇಶಕ ಪ್ರಶಾಂತ ಪಾಟೀಲ, ಸತ್ತೆಪ್ಪ ಚಂದರಗಿ, ದಿಲೀಪ ವಾಳಿಖಿಂಡಿ, ದುಂಡಪ್ಪ ಹೆದ್ದೂರಿ, ಜಯಸಿಂಗ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net