ಆ್ಯಕ್ಷನ್ ಮೂಡ್‌ನಲ್ಲಿ ರಾಜವರ್ಧನ್; ಪ್ರವೀಣ್ ಅವ್ಯಕ್ತ್ ನಿರ್ದೇಶನದ ‘ಹಿರಣ್ಯ’ ಟೀಸರ್ ರಿಲೀಸ್

hiranya
Published on

ಬೆಂಗಳೂರು: ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಪ್ರವೀಣ್ ಅವ್ಯಕ್ತ್ ಈಗ ‘ಹಿರಣ್ಯ’ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 2020ರಲ್ಲಿ ತೆರೆಕಂಡ ‘ಬಿಚ್ಚುಗತ್ತಿ’ ಖ್ಯಾತಿಯ ನಟ ರಾಜವರ್ಧನ್ ಈ ಚಿತ್ರಕ್ಕೆ ನಾಯಕ.

ಇತ್ತೀಚೆಗಷ್ಟೆ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆ ಮಾಡಲಾಗಿದ್ದು, ‘ಈ ಸಿನಿಮಾ ಎಲ್ಲರೂ ಎಂಜಾಯ್ ಮಾಡಬಹುದು. ರಾಜವರ್ಧನ್ ‘ರಾಣಾ ಡೆಡ್ಲಿ’ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಇಡೀ ತಂಡದ ಸಹಕಾರದಿಂದ ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ’ ಎಂದು ನಿರ್ದೇಶಕ ಪ್ರವೀಣ್ ಮಾಹಿತಿ ಹಂಚಿಕೊಂಡರು. ನಾಯಕ ರಾಜವರ್ಧನ್, ‘ಎರಡು ವರ್ಷದ ಹಿಂದೆಯೇ ಚಿತ್ರದ ಕಥೆಯನ್ನು ಪ್ರವೀಣ್ ಹೇಳಿದ್ದರು. ಆಗಷ್ಟೇ ‘ಬಿಚ್ಚುಗತ್ತಿ’ ಮಾಡಿದ್ದರಿಂದ ಈ ಕಥೆ ಆಯ್ಕೆ ಮಾಡಿಕೊಳ್ಳುವುದು ಚಾಲೆಂಜ್ ಆಗಿತ್ತು. ಆದರೆ, ನಿರ್ದೇಶಕರ ನಂಬಿಕೆಯಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿಕೊಂಡರು. ಇನ್ನು ರಾಜವರ್ಧನ್‌ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಯೋಗೇಶ್ವರನ್ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತವಿರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶಿಘ್ರದಲ್ಲೇ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net