ಹತ್ಯೆ ಯತ್ನ ಪ್ರಕರಣದ ತನಿಖೆಗೆ ಹಿಂಜಾವೇ ಆಗ್ರಹ

bdvt
ಭದ್ರಾವತಿಯಲ್ಲಿ ಅಪ್ರಾಪ್ತೆ ಹತ್ಯೆ ಯತ್ನ ಪ್ರಕರಣದ ತನಿಖೆಗೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯ ದೇವರಾಜ್ ಅರಳೀಹಳ್ಳಿ, ರಾಕೇಶ್, ರಘುವರನ್, ನಾಗೇಶ್, ರಾಜೇಂದ್ರ, ಪವನ್, ರುದ್ರ ಪಾಟೀಲ್ ಮತ್ತಿತರರು ಪ್ರದೀಪ್ ನಿಕ್ಕಂ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಭದ್ರಾವತಿ ಕಾಗದ ನಗರ ಠಾಣೆ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಅಪ್ರಾಪ್ತೆಗೆ ಆಕೆಯ ತಾಯಿ ಹಾಗೂ ಸ್ನೇಹಿತ ಮದ್ಯಪಾನ ಮಾಡಿಸಿ ಕೊಲೆಗೆ ಯತ್ನಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಪ್ರದೀಪ್ ನಿಕ್ಕಂ ಅವರಿಗೆ ಮನವಿ ಸಲ್ಲಿಸಿದರು.

ಇದೊಂದು ಆತಂಕ ಮೂಡಿಸುವ ಪ್ರಕರಣ. ಇದರ ಹಿಂದೆ ಯಾರ ಕೈವಾಡವಿದೆ? ಎಂಬ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ದೇವರಾಜ್ ಅರಳೀಹಳ್ಳಿ ಮಾತನಾಡಿ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಲ್ಲೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಗಮನಿಸಿದಾಗ ಹೆಣ್ಣು ಮಕ್ಕಳ ಸುರಕ್ಷತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇಬೇಕು ಎಂದರು.
ಪ್ರಮುಖರಾದ ಶಿವಕುಮಾರ್, ಪವನ್, ರುದ್ರ ಪಾಟೀಲ್, ರಾಕೇಶ್, ರಘುವರನ್, ನಾಗೇಶ್, ರಾಜೇಂದ್ರ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net