ಹಿಂಗೂಳಾಂಬಿಕ ಮಾತೆ ಗೋಂದಳ ಉತ್ಸವ: ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಂಚಾಟೆ ಚಾಲನೆ

hangalu
Published on

ಬೆಂಗಳೂರು: ಬಸವನಗುಡಿಯ ಭವಾನಿ ಕಲ್ಯಾಣ ಮಂದಿರದಲ್ಲಿ ಭಾನುವಾ ಹಮ್ಮಿಕೊಂಡಿದ್ದ ಭಾವಸಾರ ಕ್ಷತ್ರಿಯ ಜನಾಂಗದ ಕುಲದೇವತೆ ಶ್ರೀ ಹಿಂಗುಳಾಂಬಿಕ ಮಾತೆಯ ಪೂಜೆ, ಆರಾಧನೆ ಮತ್ತು ಗೋಂದಳ ಕಾರ್ಯಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಕುಮಾರ್ ಅಂಚಾಟೆ ಚಾಲನೆ ನೀಡಿದರು.
ಕಾರ್ಯಕ್ರಮದ ನಿಮಿತ್ತ ಹಿಂಗೂಳಾಂಬಿಕೆ ಮಾತೆಗೆ ವಿಭಿನ್ನ ಅಲಂಕಾರ ಮತ್ತು ವಿಶೇಷ ಪೂಜಾ ಕೈಂಕರ್ಯಯಗಳನ್ನು ನೆರೆವೇರಿಸಲಾಯಿತು. ಇದೇ ವೇಳೆ ಬಸವನಗುಡಿಯ ಪುಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಮಾಡಲಾಯಿತು. ಗೊಂಧಳ್ ದೇವಿಯ ಕಥಾರೂಪವನ್ನು ಜಯಂತ್ ಲಕ್ಷ್ಮಣರಾವ್ ಬುರತ್, ಭದ್ರಾವತಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರು ಪ್ರಸ್ತುತಪಡಿಸಿದರು.

ಪಂಡಿತ ಅಭಿಷೇಕಾಚಾರ್ಯ ಅವರು ಪ್ರವಚನ ನೀಡಿದರು. ಹಿಂಗೂಳಾಂಬಿಕ ಭಾವಸಾರ ಕ್ಷತ್ರೀಯ ಸೇವಾ ಸಮಿತಿ ಗೌರವಾಧ್ಯಕ್ಷ ತಾರಾನಾಥ್ ಜಾಧವ್, ಅಧ್ಯಕ್ಷ ಪಿ.ಎನ್. ವಿಶ್ವನಾಥ್ ರಾವ್ ಪ್ರಧಾನ ಕಾರ್ಯದರ್ಶಿ ನಾಗೇಶ್ವರ್ ರಾವ್ ಕೆ.ಆರ್. ಉಪಾಧ್ಯಕ್ಷ ಹರೀಶ್ ಎಸ್. ಭೋಂಗಾಳೆ, ಖಜಾಂಚಿ ಶ್ರೀಹರಿರಾವ್ ಉತ್ತರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net