

ರಾಣೆಬೆನ್ನೂರ: ನಗರದ ಸಂಗಮ್ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಗಣಪತಿ ವಿಸರ್ಜನೆ ಸೆ. 25ರಂದು ನಡೆಯಲಿದ್ದು, ನಗರದ ಸೂಕ್ಷ$್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಭಾರಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಗಣಪತಿ ಮೂತಿರ್ ವಿಸರ್ಜನೆ ಮೆರವಣಿಗೆಯಲ್ಲಿ ದಾವಣಗೆರೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಗಲಾಟೆಗಳಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಮುಂಜಾಗೃತ ಕ್ರಮವಾಗಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿದೆ.
ನಗರದ ದುರ್ಗಾ ವೃತ್ತ ಹಾಗೂ ಕೆಎಂಪಿ ವೃತ್ತದಲ್ಲಿ ಪೊಲೀಸ್ ವಾಚ್ ಟವರ್ ಸ್ಥಾಪನೆ ಮಾಡಲಾಗಿದೆ. ಸಂಗಮ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ದುರ್ಗಾ ವೃತ್ತ ಸೇರಿ ಸೂಕ್ಷ$್ಮ ಹಾಗೂ ಅತಿಸೂಕ್ಷ$್ಮ ಪ್ರದೇಶದ 50 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೆರವಣಿಗೆಯದ್ದಕ್ಕೂ ಆಕ್ಸರ್ ಲೈಟ್ ಅಳವಡಿಸಲಾಗಿದೆ. ಅಲ್ಲದೆ 5 ಡಿವೈಎಸ್ಪಿ, 20 ಸಿಪಿಐ, 30 ಪಿಎಸ್ಐ, 500 ಜನ ಪೊಲೀಸ್ ಸಿಬ್ಬಂದಿ, 2 ಕೆಎಸ್ಆರ್ಪಿ ತುಕುಡಿಗಳು ಸೇರಿ ನೂರಾರು ಜನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ನಗರದಲ್ಲಿ ಗಣಪತಿ ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಎಚ್ಚರವಹಿಸಲು ಸಿಸಿ ಕ್ಯಾಮರಾ, ಡ್ರೋನ್ ಕ್ಯಾಮರಾ ಸೇರಿ ಸೂಕ್ಷ$್ಮ ಹಾಗೂ ಅತಿಸೂಕ್ಷ$್ಮ ಪ್ರದೇಶದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾರೂ ಕಾನೂನು ಉಲ್ಲಂನೆ ಮಾಡುವಂತಿಲ್ಲ. ಅಂಥವರು ಕಂಡು ಬಂದರೆ ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ "ವಿಜಯವಾಣಿ'ಗೆ ತಿಳಿಸಿದರು.