

ಚಿತ್ರದುರ್ಗ: ನಾಳೆ (ಸೆ.13) ನಡೆಯಲಿರುವ ನಗರದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗಾಗಿ ನಿಷೇಧವಿದ್ದರೂ ನಗರಕ್ಕೆ ಡಿ.ಜೆ ಗಳನ್ನು ತರಲಾಗಿದ್ದು, ಇದನ್ನು ಗಮನಿಸಿದ ಪೊಲೀಸರು ನಗರದ ಚಳ್ಳಕೆರೆ ಗೇಟ್ ಬಳಿ ಡಿಜೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಿರ್ದಿಷ್ಟ ಡೆಸಿಬಲ್ ಶಬ್ಧಕ್ಕೆ ಸಂಬಂಧಿಸಿದ ಸ್ಪೀಕರ್‌ಗಳ ಅವಳಡಿಕೆಗೆ ಅನುಮತಿ ಇದೆ ಎಂದು ಬೆಳಗ್ಗೆ ಎಸ್‌ಪಿ ರಂಜಿತ್‌ಕುಮಾರ್ ಪ್ರಕಟಿಸಿದ್ದರು. ಶೋಭಾಯಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ಕೊಡುವುದಿಲ್ಲವೆಂದು ಡಿಸಿ, ಎಸ್‌ಪಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಡಿಜೆಗೆ ಅನುಮತಿ ಕೊಡುವಂತೆ ಆಗ್ರಹಿಸಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಈಗಾಗಲೇ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತದ ನಡೆ ಖಂಡಿಸಿ ವಿಎಚ್‌ಪಿ, ಬಜರಂಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರ ಸಹಿತ ಹಿಂದೂ ಪರ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.