ಧರ್ಮಸ್ಥಳ ಕ್ಷೇತ್ರದ ತೇಜೋವಧೆ ಸರಿಯಲ್ಲ; ಹಿಂದು ಜನಜಾಗೃತಿ ಸಮಿತಿ ಖಂಡನೆ

Dharmasthala
Published on

ಬೆಂಗಳೂರು: ಸೌಜನ್ಯಾ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಆದರೆ ಪ್ರಕರಣದ ನೆಪದಲ್ಲಿ ಶೀಕೇತ್ರ ಧರ್ಮಸ್ಥಳದ ತೇಜೋವಧೆ ನಡೆಯುತ್ತಿರುವುದು ಖಂಡನೀಯ ಎಂದು ಹಿಂದು ಜನಜಾಗೃತಿ ಸಮಿತಿ ಹೇಳಿದೆ.

ಕೇಂದ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಸೌಜನ್ಯಾ ಪ್ರಕರಣದಲ್ಲಿ ಆರೋಪಿ ಸಂತೋಷ್​ ರಾವ್​ನ್ನು ನಿದೋರ್ಷಿ ಎಂದು ಘೋಷಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷ ಕಳೆದರೂ ನಿಜವಾದ ಆರೋಪಿಗಳ ಬಂಧನ ಆಗದಿರುವುದು ಕಾನೂನು ಸುವ್ಯವಸ್ಥೆ ವಿಫಲವಾಗಿರುವುದರ ಲಕ್ಷಣ.

ಪ್ರಕರಣದ ಮರು ತನಿಖೆ ಆಗಬೇಕು ಎಂದು ಎಂಬ ಕೂಗು ಮತ್ತೆ ಕೇಳಿ ಬರುತ್ತಿದೆ. ಆದರೆ ಈ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕೆಲ ಸಂಟನೆ ಮತ್ತು ಜನರು ಶೀ ಕೇತ್ರ ಧರ್ಮಸ್ಥಳದ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಖಂಡನೀಯ. ರಾಜ್ಯದಲ್ಲಿ 2019 ರಿಂದ 2021ರ ಅವಧಿಯಲ್ಲಿ 40,000 ಬಾಲಕಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಈವರೆಗೆ ಈ ಪ್ರಕರಣಗಳ ತನಿಖೆ ಯಾಕೆ ಮಾಡಿಲ್ಲ? ಧರ್ಮಸ್ಥಳದ ಬಗ್ಗೆ ಮಾತನಾಡುವ ಹಿಂದುಯೇತರರು ಈ ಎಲ್ಲ ಪ್ರಕರಣಗಳ ಬಗ್ಗೆ ಯಾಕೆ ಮೌನ? ಟನೆಗಳನ್ನು ಗಮನಿಸಿದಾಗ ಸೌಜನ್ಯಾ ಪ್ರಕರಣವನ್ನು ನೆಪಮಾಡಿಕೊಂಡು ಹಿಂದು ವಿರೋಧಿಗಳು ಧರ್ಮಸ್ಥಳವನ್ನು ಗುರಿ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ ಎಂದು ಹಿಂದು ಜನಜಾಗೃತಿ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net