

Roza: ಮುಸ್ಲಿಮರ ಪಾಲಿಗೆ ರಂಜಾನ್ ತಿಂಗಳು ಅತಿ ಪವಿತ್ರವಾದ ಮಾಸವಾಗಿದ್ದು, ಈ ತಿಂಗಳಲ್ಲಿ ಮುಸ್ಲಿಮರು ಕಡ್ಡಾಯವಾಗಿ ಉಪವಾಸ ಆಚರಿಸುತ್ತಾರೆ. ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಗೆಳತಿಯೊಂದಿಗೆ ಉಪವಾಸವನ್ನು ಆಚರಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸುಹಾನಾ (suha_hana88) ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, “ಒಂದು ತಿಂಗಳ ಕಾಲ ಉಪವಾಸ ಮಾಡುವವರಿಗೆ ವಂದನೆಗಳು ಮತ್ತು ದಯವಿಟ್ಟು ನಾನು ಮಾಡಿದ ಉಪವಾಸ ಕ್ರಮದಲ್ಲಿ ತಪ್ಪಿದ್ದರೆ ನನ್ನನ್ನು ಕ್ಷಮಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.
ಮುಸ್ಲಿಂ ಸ್ನೇಹಿತೆ ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುವುದನ್ನು ಕಂಡ ಹಿಂದೂ ಯುವತಿ ಇದರ ಅನುಭವವನ್ನು ನಾವು ಪಡೆಯಬೇಕೆಂದು ಒಂದು ದಿನದ ಮಟ್ಟಿಗೆ ಉಪವಾಸವನ್ನು ಆಚರಿಸಿದ್ದಾಳೆ. ಈ ಒಂದು ದಿನದ ರೋಜಾ ಅನುಭವ ತುಂಬಾನೇ ಚೆನ್ನಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆ ಯುವತಿ ನಾನು ಮುಸ್ಲಿಂ ಅಲ್ಲ ಆದ್ರೆ ನಾನು ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದೇನೆ ಎಂದು ಹೇಳಿ ಮುಂಜಾನೆ ಬೇಗ ಎದ್ದು ಏನು ತಿಂದೆ, ಉಪವಾಸದ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಹೇಳಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ 5.9 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.