ಹಿಂದಿ ವೇಗವಾಗಿ ಬೆಳೆಯುತ್ತಿರುವ ಭಾಷೆ

hindi
Published on

ಶಿವಮೊಗ್ಗ: ಭಾಷಾ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಬಹುಸಂಖ್ಯೆಯ ಜನರು ಮಾತನಾಡುವುದು ಹಿಂದಿಯನ್ನು. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಷೆ ಇದಾಗಿದೆ ಎಂದು ರಾಜಭಾಷಾ ಸಂಘರ್ಷ ಸಮಿತಿ ಉಪಾಧ್ಯಕ್ಷೆ ಡಾ.ಜಿ.ಎಸ್.ಸರೋಜಾ ಹೇಳಿದರು.

ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಭಾಷೆಗಳಲ್ಲಿ ಹಲವಾರು ಉತ್ಕೃಷ್ಟ ಸಾಹಿತ್ಯ ಸಂಪದ್ಭರಿತ ಔಆಷೆಗಳಿವೆ. ಇವುಗಳಲ್ಲಿ ಹಿಂದಿಯೂ ಒಂದು ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತದ ಸುಪುತ್ರಿಯೆಂದೇ ಕರೆಯಲಾಗುವ ಹಿಂದಿ ಅತ್ಯಂತ ಸರಳ ಹಾಗೂ ಸುಂದರವಾದ ಸಂಪರ್ಕ ಭಾಷೆ. ರಾಷ್ಟ್ರೀಯ ಸೌಹಾರ್ದತೆ ಮತ್ತು ಭಾವೈಕ್ಯತೆ ಮೂಡಿಸುವ ಮದುರ ಭಾಷೆಯಾಗಿದೆ. ಉದ್ಯೋಗ, ವಾಣಿಜ್ಯ, ವ್ಯಾಪಾರ, ವ್ಯವಹಾರ, ತಾಂತ್ರಿಕ ಮುಂತದ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಹಿಂದಿಯ ಉಪಯುಕ್ತತೆ ಹೆಚ್ಚಿದೆ ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಎಚ್.ಎಂ.ಸುರೇಶ, ಪ್ರಾಧ್ಯಾಪಕಿ ಸತಿಭಾರತಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net