

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗುಡ್ಡಗಳಲ್ಲಿ ಬಿರುಕು, ಕುಸಿತ ಕಾಣಿಸುತ್ತಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇಂದು ಕುದುರೆಮುಖದ ಸಮೀಪ ಜಾಂಬಳೆಯಲ್ಲಿ ಭಾರಿ ಶಬ್ದವಾಗಿ, ಕೆಲವೇ ಹೊತ್ತಲ್ಲಿ ಗುಡ್ಡ ಕುಸಿತವಾಗಿದೆ.
ಕೆಲವು ದಿನಗಳ ಹಿಂದೆ ಆನೆಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈಗ ಜಾಂಬಳೆ ಸಮೀಪದ ಕಟ್ಟಿನವಾರೆ ತಲೆಗುಡ್ಡ ಕುಸಿದಿದೆ.
ಇದನ್ನೂ ಓದಿ: ಗಣಿಗಾರಿಕೆಗೆ ಅವಕಾಶ ನೀಡಲ್ಲ
ಹೀಗೆ ಮಳೆಗಾಲಕ್ಕೂ ಮೊದಲೇ ಗುಡ್ಡಗಳಲ್ಲಿ ಕುಸಿತ ಆಗುತ್ತಿರುವುದು ಆತಂಕ ಮೂಡಿಸಿದೆ. ಅಲ್ಲದೆ, ಗುಡ್ಡಪ್ರದೇಶಗಳ ಸುತ್ತಮುತ್ತಲಿನ ಮನೆಗಳ ನಿವಾಸಿಗಳಲ್ಲಿ ಭಯ ಆವರಿಸಿದೆ. ಇದೀಗ ಕುಸಿದಿರುವ ಕುದುರೆಮುಖದ ಸಮೀಪದ ಜಾಂಬಳೆಯಲ್ಲಿರುವ ಗುಡ್ಡದ ಸಮೀಪ ನಾಲ್ಕು ಮನೆಗಳಿವೆ.