ಉದ್ಯಮಿ ಮಗಳ ದಾರುಣ ಅಂತ್ಯ: ಐಶಾರಾಮಿ ಜೀವನವಿದ್ರೂ ಆತ್ಮಹತ್ಯೆಗೆ ಶರಣಾಗಿದ್ದೇಕೆ ಈ ಸುಂದರಿ?

Suicide
Published on

ನ್ಯೂಯಾರ್ಕ್​: ನ್ಯೂಯಾರ್ಕ್​ನ ದೈತ್ಯ ಕಂಪನಿಯ ಮಾಲೀಕ ಸ್ಟೀವ್​ ಟಿಶ್​​ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಹಿಲರಿ ಟಿಶ್​ (36) ಮೃತ ದುರ್ದೈವಿ. ನ್ಯೂಯಾರ್ಕ್​ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು, ಮಗಳನ್ನು ಕಳೆದುಕೊಂಡ ಕುಟುಂಬ ತೀವ್ರ ಶೋಕದಲ್ಲಿ ಮುಳುಗಿದೆ.

ಮಗಳ ಸಾವಿನ ಬಗ್ಗೆ ಮಾತನಾಡಿರುವ ಉದ್ಯಮಿ ಸ್ಟೀವ್​, ಸಾವಿಗೂ ಮುನ್ನ ಆಕೆ ಖಿನ್ನತೆ ವಿರುದ್ಧ ತುಂಬಾ ಹೋರಾಡಿದ್ದಳು ಎಂದು ಹೇಳಿದ್ದಾರೆ. ಇನ್ನು ಹಿಲರಿ ಸಾವಿನ ಸುದ್ದಿ ಕೇಳಿ ಆಕೆಯ ತಾಯಿ, ಸಹೋದರಿಯರು ಮತ್ತು ಸಹೋದರರು ಆಘಾತಕ್ಕೆ ಒಳಗಾಗಿದ್ದಾರೆ. ನಮ್ಮ ಜೀವನ ಹಾಗೂ ಹೃದಯದಲ್ಲಿ ದೊಡ್ಡ ರಂಧ್ರವನ್ನು ಮಾಡಿ ಹೊರಟು ಹೋದಳು ಎಂದು ನೋವಿನ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಹಿಲರಿ ಸಹೃದಯಿ ಹಾಗೂ ಸುಂದರಿಯಾಗಿದ್ದಳು ಎಂದು ಸ್ಮರಿಸಿದ್ದಾರೆ.

ತನ್ನಂತೆಯೇ ಖಿನ್ನತೆ ವಿರುದ್ಧ ಹೋರಾಡುತ್ತಿದ್ದ ಅನೇಕರನ್ನು ನೋಡಿ ಆಕೆ ಖುಷಿಪಡುತ್ತಿದ್ದಳು. ಆಕೆ ಅನೇಕ ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳು. ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲೇ ದೀರ್ಘ ಸಮಯ ಕಳೆಯುತ್ತಿದ್ದಳು. ಆಪರೇಷನ್​ ಸ್ಮೈಲ್​ ಎಂಬ ಚಾರಿಟಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು. ಅನೇಕರಿಗೆ ವೈದ್ಯಕೀಯ ನೆರವು ನೀಡಿದ್ದಳು ಎಂದು ಹೇಳಿದ್ದಾರೆ.

ಹಿಲರಿ ಯಶಸ್ವಿ ಜ್ಯುವೆಲ್ಲರಿ ಡಿಸೈನರ್​ ಮತ್ತು ರತ್ನಶಾಸ್ತ್ರಜ್ಞಳು ಆಗಿದ್ದಳು. ನ್ಯೂಯಾರ್ಕ್​ ಯೂನಿವರ್ಸಿಟಿಯ ಪದವಿಧರೆಯಾಗಿದ್ದಳು. ಆದರೆ, ಯಶಸ್ಸಿನ ಉತ್ತುಂಗದಲ್ಲಿದ್ದ ಹಿಲರಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಶರಣಾಗಿದ್ದು, ಖಿನ್ನತೆಯೆ ಆಕೆಯ ಜೀವಕ್ಕೆ ಮಾರಕವಾಗಿದೆ. ಮಗಳನ್ನು ಕಳೆದುಕೊಂಡ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net