ಹಿಜಾಬ್​ ವಿವಾದ: ವಿಚಾರಣೆ ಮತ್ತೆ ಮುಂದೂಡಿಕೆ; ಕುತೂಹಲ ಕೆರಳಿಸಿದೆ ನಾಳೆಯ ಬೆಳವಣಿಗೆ!

high court
Published on

ಬೆಂಗಳೂರು: ಹೈಕೋರ್ಟ್​ ಮೆಟ್ಟಿಲೇರಿರುವ ಹಿಜಾದ್ ವಿವಾದ ಪ್ರಕರಣದ ಮತ್ತೆ ಮುಂದೂಡಲ್ಪಟ್ಟಿದ್ದು, ನಾಳೆಯ ಬೆಳವಣಿಗೆಯತ್ತ ಎಲ್ಲರ ಗಮನ ನೆಟ್ಟಿದೆ.

ಪ್ರಕರಣ ಹೈಕೋರ್ಟ್​​ನಲ್ಲಿದ್ದರೂ ರಾಜ್ಯಾದ್ಯಂತ ಹಿಜಾಬ್​ ವಿವಾದದ ಬಿಸಿ ತಗ್ಗಿಲ್ಲ. ಅಲ್ಲಲ್ಲಿ ಹಿಜಾಬ್​-ಕೇಸರಿ ಸಂಘರ್ಷ ಮುಂದುವರಿದಿದೆ. ಇನ್ನೊಂದೆಡೆ ಹೈಕೋರ್ಟ್​ ಸೂಚನೆಯಂತೆ ನಾಳೆ ರಾಜ್ಯದ ಎಲ್ಲ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಪುನರಾರಂಭಗೊಳ್ಳಬೇಕಿದೆ.

ಮತ್ತೊಂದೆಡೆ ಇಂದು ಹಿಜಾಬ್​ ಕುರಿತ ವಿವಾದದ ವಿಚಾರಣೆ ನಾಳೆಗೆ ಮತ್ತೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿನ ಹಿಜಾಬ್​-ಕೇಸರಿ ಸಂಘರ್ಷದ ಪರಿಸ್ಥಿತಿ ಹೇಗಿರಲಿದೆ ಎಂಬತ್ತ ಸಾರ್ವಜನಿಕರು ಕೌತುಕದಿಂದ ನೋಡುವಂತಾಗಿದೆ.

ಹಿಜಾಬ್​ ಧರಿಸಿ ತರಗತಿ ಹಾಜರಾಗಲು ಉಂಟಾಗಿರುವ ಅಡ್ಡಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಕೈಗೊಂಡಿದ್ದು, ಬುಧವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net