

ಬೆಂಗಳೂರು: ಅ. 14ರಂದು ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್ರ ಜಾಮೀನು (Darshan Bail) ಅರ್ಜಿ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಸಿವಿಲ್ ಕೋರ್ಟ್ನಲ್ಲಿ ಜಾಮೀನು ಸಿಗದ ಕಾರಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ದರ್ಶನ್ಗೆ ನ್ಯಾಯಾಲಯ ಅ.22ರಂದು ವಿಚಾರಣೆಗೆ ಕರೆದಿತ್ತು.