

ಕೆಜಿಎಫ್: ಆರೋಗ್ಯವೇ ಮಹಾಭಾಗ್ಯವಾಗಿದ್ದು, ಆರೋಗ್ಯ ಸಮಸ್ಯೆಗಳಿಂದ ಬಳಲುವ ಬಡವರಿಗೆ ಸುಲಭವಾಗಿ ಉತಷ್ಟ ದರ್ಜೆಯ ಆರೋಗ್ಯ ಸೌಕರ್ಯಗಳನ್ನು ಅವರ ಮನೆಬಾಗಿಲಿನಲ್ಲಿಯೇ ದೊರಕುವಂತೆ ಮಾಡುವ ಉದ್ದೇಶದಿಂದ ನಮ್ಮ ಕ್ಲಿನಿಕ್ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ನಗರದ ಗಣೇಶ್ಪುರಂನಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಕ್ಲಿನಿಕ್ನ ಮುಖ್ಯ ಉದ್ದೇಶ ಮಹಿಳೆಯರು ಪ್ರಸೂತಿಯಾದಾಗಿನಿಂದ ಯಾವ ಯಾವ ಸಮಯಕ್ಕೆ ಚುಚ್ಚುಮದ್ದುಗಳನ್ನು ಪಡೆದುಕೊಳ್ಳಬೇಕು, ಮಕ್ಕಳ ಮೆದುಳು ಸಕ್ರಿಯವಾಗಿ ಕೆಲಸ ಮಾಡುವಂತಾಗಬೇಕು ಮತ್ತು ಆರೋಗ್ಯವಂತರಾಗಿಬೇಕು, ತಾಯಿ ಮತ್ತು ಮಗುವಿಗೆ ಮಾತ್ರೆಗಳನ್ನು ಕೊಡುವುದು ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಒಳ್ಳೆಯ ಉದ್ದೇಶದಿಂದ ಈ ಕ್ಲಿನಿಕ್ನ್ನು ಸರ್ಕಾರ ರೂಪಿಸಿದೆ ಎಂದರು.
ಶ್ರೀವೇ ಸಿಬ್ಬಂದಿ ನೇಮಕ: ಸಾರ್ವಜನಿಕ ಆಸ್ಪತ್ರೆಯಲ್ಲಿ 24 ಹಾಸಿಗೆಗಳ ಐಸಿಯು ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಅಗತ್ಯವಾದ ಯಂತ್ರೋಪಕರಣಗಳೆಲ್ಲವೂ ಈಗಾಗಲೇ ಬಂದಿವೆ. ಐಸಿಯು ಕೇಂದ್ರದಲ್ಲಿ 5 ಬೆಡ್ಗಳಿಗೆ ಒಬ್ಬ ವೈದ್ಯರು, ಇಬ್ಬರು ಶುಶ್ರೂಷಕಿಯರು ಮತ್ತು ಸ್ಟ್ಾ ನರ್ಸ್ಗಳ ಅಗತ್ಯವಿದ್ದು, ದಿನದ 24 ಗಂಟೆ 3 ಶಿಫ್ಟ್ಗಳಲ್ಲಿ ಕೇಂದ್ರ ಕೆಲಸ ನಿರ್ವಹಿಸುತ್ತದೆ. ಇಲ್ಲಿನ ಪ್ರಾರಂಭವಾಗಲಿರುವ ಐಸಿಯು ಕೇಂದ್ರಕ್ಕೆ 15 ಮಂದಿ ತ ವೈದ್ಯರು, 45 ಮಂದಿ ನರ್ಸ್ಗಳು ಮತ್ತು 15&20 ಗ್ರೂಪ್ ಡಿ ನೌಕರರ ಅಗತ್ಯವಿದ್ದು, ಸಿಬ್ಬಂದಿ ನೇಮಕಾತಿಗೆ ಕೂಡಲೇ ಐಸಿಯುವನ್ನು ಪ್ರಾರಂಭಿಸಲಾಗುವುದು ಎಂದು ಶಾಸಕಿ ಹೇಳಿದರು.
ಇದಲ್ಲದೇ ಇಡೀ ಜಿಲ್ಲೆಯಲ್ಲಿಯೇ ಜನರ ಆರೋಗ್ಯದ ದೃಷ್ಟಿಯಿಂದ 50 ಲಕ್ಷ ರೂ ವೆಚ್ಚದಲ್ಲಿ ಬ್ಲಾಕ್ ಪಬ್ಲಿಕ್ ಹೆಲ್ತ್ ಯೂನಿಟ್ನ್ನು ಮೊದಲ ಬಾರಿಗೆ ಕೆಜಿಎಫ್ ನಗರದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಸೈಲೆಂಟ್ ಕಿಲ್ಲರ್ಸ್ ಎಂದು ಕರೆಯಲಾಗುವ ಬಿಪಿ ಮತ್ತು ಶುಗರ್ಗಳಿಗೆ ಜನರು ಇದ್ದಕ್ಕಿದ್ದಂತೆ ತುತ್ತಾಗುವುದರಿಂದ ಈ ಬ್ಲಾಕ್ ಪಬ್ಲಿಕ್ ಹೆಲ್ತ್ ಯೂನಿಟ್ನಲ್ಲಿ ಈ ಖಾಯಿಲೆಗಳಿಗೆ ಚಿಕಿತ್ಸೆಯ ಜತೆಗೆ ಕೌನ್ಸಿಲಿಂಗ್ನ್ನೂ ಸಹ ಮಾಡಲಾಗುವುದು ಎಂದರು.
ಕೋಲಾರ ಜಿಲ್ಲಾ ಲೆಪ್ರೆಸಿ ಅಧಿಕಾರಿ ಹಾಗೂ ಕೆಜಿಎಫ್ ನೋಡಲ್ ಅಧಿಕಾರಿ ಡಾ.ನಾರಾಯಣಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ, ವೈದ್ಯರಾದ ಡಾ.ದೀಪಾ, ಡಾ.ಆಶಾಲತಾ, ಡಾ.ಶುಕ್ಲಾ, ಆರೋಗ್ಯ ನಿರೀಕ್ಷಕ ಪ್ರಸನ್ನ ಮೊದಲಾದವರು ಇದ್ದರು.