ಮೀನು ಸಾಕಾಣಿಕೆಯಿಂದ ಅಧಿಕ ಲಾಭ

12 nrp 3
ಎನ್.ಆರ್.ಪುರದಲ್ಲಿ 20 ರೈತ ಕುಟುಂಬಗಳಿಗೆ ಜೋಬಿಶ್ ಮೀನು ಮರಿಗಳನ್ನು ವಿತರಿಸಿದರು. ಪ್ರಭಾಕರ್ ಇದ್ದರು.
Published on

ಎನ್.ಆರ್.ಪುರ: ಮೀನು ಮರಿಗಳನ್ನು ಸಾಕುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಸೋಷಿಯಲ್ ವೆಲ್‌ೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ತಿಳಿಸಿದರು.
ಮಂಗಳವಾರ 20 ರೈತ ಕುಟುಂಬಗಳಿಗೆ ಮೀನು ಮರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮೀನು ಮರಿಗಳನ್ನು ಸಾಕುವ ವಿಧಾನಗಳ ಬಗ್ಗೆ ಮಾಹಿತಿ ನೀಡಿ, ಬಿ.ಆರ್.ಪ್ರಾಜೆಕ್ಟ್ ನಿಂದ ಕಾಟ್ಲಾ, ಗೌರಿ, ರೋವು, ಮೃಗಾಲ್ ಜಾತಿಯ ಮೀನು ಮರಿಗಳನ್ನು ತರಲಾಗಿದೆ ಎಂದು ತಿಳಿಸಿದರು.
ಮೀನಿನ ಮರಿಗಳನ್ನು ನೇರವಾಗಿ ಕೆರೆಗಳಿಗೆ ಸುರಿಯದೇ ಮೊದಲು ಕೆರೆ ನೀರನ್ನು ಬಕೆಟ್‌ನಲ್ಲಿ ತುಂಬಿಸಿಕೊಂಡು ಅದಕ್ಕೆ ಮೀನು ಮರಿಗಳನ್ನು ಹಾಕಿ ಸ್ವಲ ಹೊತ್ತು ಬಿಟ್ಟು ನಂತರ ಕೆರೆಗೆ ಸುರಿಯಬೇಕು. ಕೆಲವು ದಿನ ಹಾವು, ಕಾಗೆಯಿಂದ ಮೀನು ಮರಿಗಳನ್ನು ರಕ್ಷಣೆ ಮಾಡಬೇಕು. ಮೀನು ಮರಿಗಳಿಗೆ ಆಹಾರವಾಗಿ ಮೀನು ಪುಡ್, ಪಾಲೀಸ್ ತೌಡು, ಶೇಂಗಾ ಹಿಂಡಿ ನೀಡಬಹುದು. ಒಣಗಿದ ಅಥವಾ ಹಸಿ ಸಗಣಿಗಳನ್ನು ಕೆರೆಯ ದಂಡೆಯಲ್ಲಿ ನೀರಿಗೆ ತಾಗುವ ಹಾಗೆ ಸುರಿಯಬೇಕು. 1ವರ್ಷದಲ್ಲಿ ಮೀನುಗಳು ದೊಡ್ಡದಾಗುತ್ತದೆ. 1ಮೀನು 2 ಕೆ.ಜಿ.ತೂಕ ಬರಲಿದೆ ಎಂದರು.
ಸೊಸೈಟಿ ನಿರ್ದೇಶಕ ಜೋಬಿಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net