ಪಂಚಾಯತ್ ಸದಸ್ಯತ್ವ ರದ್ಧತಿಗೆ ಹೈ ನಕಾರ

highcourt
Published on

ಬೆಂಗಳೂರು: ಗ್ರಾಮ ಪಂಚಾಯತಿ ಸದಸ್ಯರು ಪಡೆದುಕೊಂಡಿರುವ ಪಂಚಾಯಿತಿಗೆ ಸಂಬಂಧಿಸಿದ ಕಾಮಗಾರಿಯ ಗುತ್ತಿಗೆ ಅಸ್ವಿತ್ವದಲ್ಲಿ ಇದ್ದರೆ ಮಾತ್ರ ಆತನ ಸದಸ್ಯತ್ವ ರದ್ದುಪಡಿಸಲು ಕಾರಣವಾಗುತ್ತದೆ ಎಂದಿರುವ ಹೈಕೋರ್ಟ್, ವ್ಯಕ್ತಿಯೋರ್ವರ ಪಂಚಾಯತ್ ಸದಸ್ಯತ್ವ ರದ್ದುಪಡಿಸಲು ನಿರಾಕರಿಸಿದೆ.

ಬೀರುಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಕುಮಾರ್ 2018ರಿಂದ 2020ರ ಜು.3ರ ನಡುವೆ ಪಂಚಾಯಿತಿಯ ಗುತ್ತಿಗೆ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಗ್ರಾ.ಪಂ. ಸದಸ್ಯರ ಆಯ್ಕೆಗೆ 2020ರ ಜು.7ರಂದು ಚುನಾವಣಾ ಅಧಿಸೂಚನೆ ಹೊರಡಿಸಿತ್ತು.

ಅದರಂತೆ ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆಗೆ ಸ್ಪರ್ಧಿಸಿ ಬಿ.ಎನ್. ಕುಮಾರ್ ಆಯ್ಕೆಯಾಗಿದ್ದಾರೆ. ಕುಮಾರ್ ಆಯ್ಕೆ ಪ್ರಶ್ನಿಸಿ ಮಂಡ್ಯದ ಕೆ.ಆರ್. ಪೇಟೆಯ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ಅದೇ ಗ್ರಾಮದ ನಿವಾಸಿ ಬಿ.ಟಿ. ಕುಮಾರ್ ಎಂಬುವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net