

ಯುಜೀನ್: ಸೀನಿಯರ್ ರಾಷ್ಟ್ರೀಯ ದಾಖಲೆ ಹೊಂದಿರುವ ಪೂಜಾ ಸಿಂಗ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ (
World Athletics U20 Championship
) ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಮೂಡಿಸಿದ್ದಾರೆ. ಮಹಿಳೆಯರ 4/400 ಮೀ. ರಿಲೇ ಸ್ಪರ್ಧೆಯಲ್ಲೂ ಭಾರತ ತಂಡ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇದರೊಂದಿಗೆ ಭಾರತ ಕೂಟದಲ್ಲಿ 2 ಬೆಳ್ಳಿ, 1 ಕಂಚಿನ ಸಹಿತ ಒಟ್ಟು 3 ಪದಕಗಳೊಂದಿಗೆ ಅಭಿಯಾನ ಮುಕ್ತಾಯಗೊಳಿಸಿತು. ಅಮೆರಿಕ 12 ಚಿನ್ನ, 7 ಬೆಳ್ಳಿ, 5 ಕಂಚಿನ ಸಹಿತ 24 ಪದಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದರೆ, ಭಾರತ ಪದಕಪಟ್ಟಿಯಲ್ಲಿ 27ನೇ ಸ್ಥಾನ ಗಳಿಸಿತು. ಭಾರತ 2021, 2022ರ ಆವೃತ್ತಿಯಲ್ಲೂ ತಲಾ 3 ಪದಕ ಗೆದ್ದುಕೊಂಡಿತ್ತು.