

ಪ್ರಮುಖ ಮುಖ್ಯಾಂಶಗಳು
ಅಧಿಸೂಚನೆಯೇ ಸರಿಯಿಲ್ಲ ಎಂದು ವಾದ
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಎನ್ಐಎ ಕಾಯ್ದೆಯ ಸೆಕ್ಷನ್ 22ರ ಅಡಿಯಲ್ಲಿ ರಾಜ್ಯ ಸರ್ಕಾರ ಅಧಿಕೃತವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಆದೇಶ ಹೊರಡಿಸಿಲ್ಲ. ಈ ಹಿಂದೆ ಸೆಕ್ಷನ್ 11ರ ಅಡಿಯಲ್ಲಿ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಯನ್ನೇ ಸೆಕ್ಷನ್ 22ಕ್ಕೆ ಅನ್ವಯಿಸುತ್ತದೆ ಎಂದು ವಿಭಾಗೀಯ ಪೀಠ ತಪ್ಪಾಗಿ ಪರಿಗಣಿಸಿದೆ. ಆದ್ದರಿಂದ ಈ ಪ್ರಕರಣದಲ್ಲಿ ಬಂಧನ ಆದೇಶ ಹೊರಡಿಸಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.