

ಪ್ರಮುಖ ಮುಖ್ಯಾಂಶಗಳು
ಅರ್ಜಿದಾರನ ವಾದವೇನಿತ್ತು?
ಅರ್ಜಿದಾರನ ಪರ ವಾದ ಮಂಡಿಸಿದ ಹಿರಿಯ ವಕೀಲ ಅರಣ್ ಶ್ಯಾಮ್, ಪೆಹಲ್ಗಾಮ್ ದಾಳಿಯ ವೇಳೆ ಅಶ್ರಫ್ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರಿಂದ ಆಟಗಾರರು ಪ್ರಚೋದನೆಗೆ ಒಳಗಾಗಿದ್ದರು. ಇದು ಪೂರ್ವ ನಿರ್ಧರಿತ ಕೃತ್ಯವಲ್ಲ. ಈಗಾಗಲೇ ಇತರ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದರಿಂದ ಇವರಿಗೂ ಸಮಾನತೆಯ ಆಧಾರದ ಮೇಲೆ ಜಾಮೀನು ನೀಡಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನಲೆ
2025ರ ಏ.27ರಂದು ಕುಡುಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಕೇರಳ ಮೂಲದ ಮಹಮ್ಮದ್ ಅಶ್ರಫ್ ಪಾಕಿಸ್ತಾನ್ ಪಾಕಿಸ್ತಾನ್ ಎಂದು ಕೂಗುತ್ತಾ ಮೈದಾನಕ್ಕೆ ನುಗ್ಗಿದ್ದಾನೆ. ಇದರಿಂದ ಆಕ್ರೋಶಗೊಂಡ ಗುಂಪು ಆತನ ಮೇಲೆ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಮೃತಪಟ್ಟಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 21 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.