_1769688030899.webp?w=480&auto=format%2Ccompress&fit=max)
_1769688030899.webp?w=480&auto=format%2Ccompress&fit=max)
ಪೋಷಕರ ಆದಾಯ ಪರಿಗಣನೆಗೆ ಆಕ್ಷೇಪವಿಲ್ಲ
ಅಭ್ಯರ್ಥಿಯ ಪೋಷಕರ ಆದಾಯವನ್ನು ಮಾತ್ರವೇ ಆದಾಯ ಪ್ರಮಾಣ ಪತ್ರಕ್ಕೆ ಪರಿಗಣಿಸಬೇಕು ಎಂಬ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂಬ ಅಂಶವನ್ನು ಹೈಕೋರ್ಟ್ನಲ್ಲಿ ಸರ್ಕಾರವೇ ಒಪ್ಪಿಕೊಂಡಿದೆ. ಆದರೆ, ಅಧಿಕಾರಿಗಳಿಗೆ ದಂಡ ವಿಧಿಸಿದನ್ನು ಪ್ರಶ್ನಿಸಿತ್ತು. ಜಿಲ್ಲಾ ಸಮಿತಿಯ ಸದಸ್ಯರಿಗೆ ವೈಯಕ್ತಿಕವಾಗಿ ದಂಡ ವಿಧಿಸಿದ ಏಕಸದಸ್ಯ ನ್ಯಾಯಪೀಠದ ಕ್ರಮ ದೋಷಪೂರಿತವಾಗಿದೆ. ಸೇವಾ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಹೈಕೋರ್ಟ್ಗಿಂತ ಮೊದಲು ರಾಜ್ಯ ಆಡಳಿತ ನ್ಯಾಯಮಂಡಳಿಗೆ (ಕೆಎಸ್ಎಟಿ) ಸಲ್ಲಿಸಬೇಕಿದ್ದ ಕಾರಣ ಅರ್ಜಿದಾರರ ಹಿಂದಿನ ಮನವಿಯು ಊರ್ಜಿತವಲ್ಲ ಎಂದು ವಾದಿಸಿದ್ದರು.