

ತಮಿಳುನಾಡು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ 'ಮೈಚಾಂಗ್' ಚಂಡಮಾರುತವಾಗಿ ತೀವ್ರಗೊಂಡಿದ್ದು, ಡಿಸೆಂಬರ್ 5ರ ಮುಂಜಾನೆ ವೇಳೆಗೆ ದಕ್ಷಿಣ ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಬಿರುಸಿನ ಚಂಡಮಾರುತವಾಗಿ ತಲುಪುವ ಸಾಧ್ಯತೆ ಹೆಚ್ಚಿದೆ. ಇದು ಗಂಟೆಗೆ 90-100 ಕಿಮೀ ವೇಗದಿಂದ 110 ಕಿಮೀ ವೇಗದಲ್ಲಿ ಬೀಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಣೆಯಲ್ಲಿ ತಿಳಿಸಿದೆ.
ಮೈಚಾಂಗ್ ಚಂಡಮಾರುತದ ಹಿನ್ನೆಲೆ ಖಾಸಗಿ ಕಚೇರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡಲಾಗಿದ್ದು, ಅನಿವಾರ್ಯ ಕಾರಣ ಸೋಮವಾರ ಮನೆಯಿಂದಲೇ ಕೆಲಸ ಮಾಡಲು ಅಥವಾ ಅಗತ್ಯ ಉದ್ಯೋಗಿಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸಲು ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡುವಂತೆ ತಮಿಳುನಾಡು ಸರ್ಕಾರ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್‌ನಲ್ಲಿರುವ ಖಾಸಗಿ ಕಂಪನಿಗಳು ಮತ್ತು ಕಚೇರಿಗಳಿಗೆ ಸಲಹೆ ನೀಡಿದೆ.
ಸೆಕ್ಷನ್ 144ರ ಅಡಿಯಲ್ಲಿ ಹೊರಡಿಸಲಾದ ಆದೇಶದಲ್ಲಿ, ಪುದುಚೇರಿ ಸರ್ಕಾರವು ಸಮುದ್ರ ತೀರಕ್ಕೆ ಸಮೀಪವಿರುವ ಕರಾವಳಿ ಪ್ರದೇಶಗಳಲ್ಲಿ ಎಲ್ಲಾ ಜನರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ,(ಏಜೆನ್ಸೀಸ್).