ಶೀಘ್ರವೇ ಒಟಿಟಿಗೆ ನಾನಿ ನಟನೆಯ 'ಹಾಯ್ ನನ್ನಾ'! ಯಾವ ದಿನದಂದು ರಿಲೀಸ್​​? ಇಲ್ಲಿದೆ ಮಾಹಿತಿ

ವಿಜಯವಾಣಿ - 2023-12-29T103941.167
Published on

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್, ನಟ ನಾನಿ ಮತ್ತು ಸೌತ್​ ಬ್ಯೂಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಹಾಯ್​ ನನ್ನಾ' ಸಿನಿಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದು, ಸೂಪರ್​ ಹಿಟ್​ ಫ್ಯಾಮಿಲಿ ಎಂಟರ್​ಟೈನರ್​ ಚಿತ್ರವಾಗಿ ಹೊರಹೊಮ್ಮಿತು. ಇದೀಗ ಈ ಸಿನಿಮಾ ಶೀಘ್ರವೇ ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆಯಿಡಲು ಸಜ್ಜಾಗಿದೆ.

ನಿರ್ದೇಶಕ ಶೌರ್ಯುವ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ 'ಹಾಯ್​ ನನ್ನಾ' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಪ್ಲಾಟ್​ಫಾರ್ಮ್​ಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ಚಿತ್ರದಲ್ಲಿ ನಾನಿ, ಮೃಣಾಲ್ ಮತ್ತು ಬೇಬಿ ಕಿಯಾರಾ ಪಾತ್ರಗಳು ಪ್ರೇಕ್ಷಕರ ಮನವನ್ನು ಸೆಳೆದಿದೆ.

ಚಿತ್ರಮಂದಿರಗಳಲ್ಲಿ ನೋಡಲಾಗದ ಪ್ರೇಕ್ಷಕರು ಇದೀಗ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದಾಗಿದ್ದು, ಒಟಿಟಿ ರಿಲೀಸ್​ ದಿನಾಂಕ ಈ ರೀತಿ ಇದೆ. ಜನವರಿ 5, 2024 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಹಾಯ್​ ನನ್ನಾ ಲೈವ್​ ಸ್ಟ್ರೀಮಿಂಗ್ ಆಗಲಿದ್ದು, ಯಾವ ಭಾಷೆಗಳಲ್ಲಿ ರಿಲೀಸ್​ ಆಗಲಿದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದ್ರೆ. ಈ ಕುರಿತು ಚಿತ್ರತಂಡ ಇಲ್ಲಿಯವರೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಘೋಷಣೆ ಮಾಡಿಲ್ಲ ಎಂಬುದು ಗಮನಾರ್ಹ.

ಚಿತ್ರದಲ್ಲಿ ನಾನಿ, ಮೃಣಾಲ್ ಠಾಕೂರ್​, ಬೇಬಿ ಕಿಯಾರಾ ಖನ್ನಾ, ಜಯರಾಮ್, ಪ್ರಿಯದರ್ಶಿ, ರಿತಿಕಾ ನಾಯಕ್, ನಾಸರ್, ಅಂಗದ್ ಬೇಡಿ ಮುಂತಾದವರ ತಾರಾಗಣವಿದೆ. ವೈರಾ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಮೋಹನ್ ಚೆರುಕುರಿ ಮತ್ತು ಡಾ. ವಿಜೇಂದರ್ ರೆಡ್ಡಿ ಟೀಗಾಲ ನಿರ್ಮಿಸಿರುವ ಈ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net