

ಟೆಲ್ ಅವಿವ್: ಹಿಜ್ಬುಲ್ಲಾಗೆ (Hezbollah) ಸಂಬಂಧಿಸಿದ 220 ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವ ಇಸ್ರೇಲ್ (Israel) ಇದೀಗ ಹಿಜ್ಬುಲ್ಲಾದ ಉನ್ನತ ಕಮಾಂಡರ್ ಮುಹಮ್ಮದ್ ಹುಸೇನ್ ಸ್ರೋರ್ರನ್ನು ಹತ್ಯೆ ಮಾಡಿರುವುದಾಗಿ ಖಚಿತಪಡಿಸಿದೆ.
ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಡ್ರೋಣ್ ಕಮಾಂಡರ್ ಮುಹಮ್ಮದ್ ಹುಸೇನ್ ಸ್ರೋರ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ತನ್ನ ಅಧಿಕೃತ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದೆ. ಲೆಬನಾನ್ನ ಆರೋಗ್ಯ ಸಚಿವಾಲಯದ ಪ್ರಕಾರ ಬೈರುತ್‌ನ ದಹೀಹ್‌ನಲ್ಲಿ ನಡೆದ ಮುಷ್ಕರದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಿಜ್ಬುಲ್ಲಾ ಭಯೋತ್ಪಾದಕ ಸಾಮರ್ಥ್ಯ ಮತ್ತು ಆಡಳಿತವನ್ನು ಸಂಪೂರ್ಣವಾಗಿ ನಾಶಮಾಡಲು ಪಣತೊಟ್ಟಿರುವ ಇಸ್ರೇಲ್ ರಕ್ಷಣಾ ಪಡೆ, ಲೆಬನಾನ್ನಲ್ಲಿ ಹಿಜ್ಬುಲ್ಲಾಗೆ ಸಂಬಂಧಿಸಿರುವ ಶಸ್ತ್ರಾಸ್ತ್ರ ಪಡೆ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ವೇಳೆ ಡ್ರೋನ್ ಕಮಾಂಡರ್ನನ್ನು ಇಸ್ರೇಲ್ ಹತ್ಯೆಗೈದಿದ್ದು, ತಮ್ಮ ಕಮಾಂಡರ್ ಸಾವಿನ ಬಗ್ಗೆ ಹಿಜ್ಬುಲ್ಲಾ ಮಾತ್ರ ಇಲ್ಲಿಯವರೆಗೂ ಪ್ರತಿಕ್ರಿಯಿಸಿಲ್ಲ,(ಏಜೆನ್ಸೀಸ್).