ಸಿನಿಮಾ ಬಿಟ್ಟು ಇಸ್ಲಾಂ ಧರ್ಮ ಸ್ವೀಕರಿಸಿದ ಖ್ಯಾತ ನಟಿ

salman
Published on

ಬೆಂಗಳೂರು:  ಬಾಲಿವುಡ್‌ ನಟ ಸಲ್ಮಾನ್ ಖಾನ್ ಜತೆ ನಟಿಸಿದ್ದ ಸ್ಟಾರ್ ಹೀರೋಯಿನ್ ದಿಢೀರ್ ಧರ್ಮ ಬದಲಾಯಿಸಿ ಇಸ್ಲಾಂ ಸ್ವೀಕರಿಸಿದ್ದಳು. ಈ ನಟಿ ಯಾರು ಎಂದು ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ...

2000 ರಲ್ಲಿ 14 ನೇ ವಯಸ್ಸಿನಲ್ಲಿ ಫಲ್ಗುಣಿ ಪಾಠಕ್ ಅವರ ಮ್ಯೂಸಿಕ್ ವಿಡಿಯೋ ‘ಮೇರಿ ಚುನಾರ್ ಉಡ್ ಉಡ್ ಜಾಯೆ’ ನಲ್ಲಿ ಕಾಣಿಸಿದ್ದ ಆಯೇಷಾ ಟಾಕಿಯಾ ಮೊದಲ ಬಾರಿಗೆ ಮಾಡೆಲ್ ಆಗಿ ಗುರುತಿಸಿಕೊಂಡರು.   ಸಲ್ಮಾನ್ ಖಾನ್ ಜೊತೆ ‘ವಾಂಟೆಡ್’ ಚಿತ್ರದಲ್ಲಿ ನಟಿಸಿದಾಗ ಆಯೇಷಾಗೆ ದೊಡ್ಡ ಬ್ರೇಕ್ ಸಿಕ್ಕಿತು. ಈ ಸಿನಿಮಾ 2009 ರ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಯಿತು. ಜೊತೆಗೆ ಆಯೇಶಾ ಟಾಕಿಯಾ ಅವರ ಅಲ್ಲಿಯವರೆಗಿನ ಅತಿದೊಡ್ಡ ಕಮರ್ಷಿಯಲ್ ಹಿಟ್ ಆಗಿತ್ತು. ಆಯೇಷಾ ಕೊನೆಯದಾಗಿ ‘ಮೋಡ್’ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಫ್ಲಾಪ್ ಆಯಿತು.

ಆಯೇಶಾ ಟಾಕಿಯಾ ತನ್ನ ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಗಮನ ಕೇಂದ್ರೀಕರಿಸಲು ನಟನೆಯನ್ನು ತೊರೆದರು. ಆಯೇಷಾ  ತನ್ನ ಗೆಳೆಯ ಫರ್ಹಾನ್ ಅಜ್ಮಿಯನ್ನು ಮದುವೆಯಾರು. ಅವರು ರೆಸ್ಟೋರೆಂಟ್ ಮಾಲೀಕ ಮತ್ತು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿಯ ಮಗ. ಆಯೇಷಾ 2009 ರಲ್ಲಿ 23 ನೇ ವಯಸ್ಸಿನಲ್ಲಿ ಫರ್ಹಾನ್ ಅವರನ್ನು ವಿವಾಹವಾದರು.

ಮದುವೆಯ ನಂತರ ನಟಿ ತನ್ನ ಸರ್ ನೇಮ್​ನ್ನು ಟಕಿಯಾ ಅಜ್ಮಿ ಎಂದು ಬದಲಾಯಿಸಿದರು. ಇಸ್ಲಾಂಗೆ ಮತಾಂತರಗೊಂಡರು. ಆಯೇಶಾ ಟಾಕಿಯಾ ಪ್ರಸ್ತುತ ಗೋವಾದಲ್ಲಿ ವಾಸಿಸುತ್ತಿದ್ದಾರೆ. ವ್ಯವಹಾರದಲ್ಲಿ ಪತಿಗೆ ಸಹಾಯ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net