

ನವದೆಹಲಿ: ಗಾನಕೋಗಿಲೆ, ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದು, ಇದೀಗವಷ್ಟೇ ಅವರ ಅಂತ್ಯಸಂಸ್ಕಾರ ಕೂಡ ನೆರವೇರಿದೆ. ಅವರ ನಿಧನದ ಸುದ್ದಿ ಬಹಿರಂಗಗೊಂಡಾಗಿನಿಂದ ಜನರು ಅವರ ಜನಪ್ರಿಯ ಹಾಡುಗಳನ್ನು ಆರಿಸಿ ಆರಿಸಿ ಹಂಚಿಕೊಂಡು ದುಃಖ-ಪ್ರೀತಿ-ಅಭಿಮಾನ ಎಲ್ಲವನ್ನೂ ಒಟ್ಟೊಟ್ಟಿಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂತಹ ಬಹಳಷ್ಟು ಹಾಡುಗಳು, ವಿವಿಧ ಸಮಾರಂಭಗಳಲ್ಲಿ ಲತಾ ಮಂಗೇಶ್ಕರ್ ಅವರ ಹಾಡಿರುವ ದೃಶ್ಯಾವಳಿಯ ತುಣಕುಗಳು, ಲತಾ ಕುರಿತ ಆಸಕ್ತಿಕರ ಅಂಶಗಳಿರುವ ಮಾಹಿತಿಗಳು ಇಂದು ದೊಡ್ಡಪ್ರಮಾಣದಲ್ಲಿ ಹಂಚಿಕೆ ಆಗುತ್ತಿವೆ.
ಈ ನಡುವೆ ಲತಾ ಮಂಗೇಶ್ಕರ್ ಅವರು ಅನಾರೋಗ್ಯಗೊಂಡ ಬಳಿಕದ ಅಂದರೆ ಬಹುತೇಕ ಅವರ ಕೊನೆಯ ದಿನಗಳಲ್ಲಿನ ಫೋಟೋ-ವಿಡಿಯೋಗಳು ಕೂಡ ಸಾರ್ವಜನಿಕರ ನಡುವೆ ಹಂಚಿಕೆ ಆಗುತ್ತಿದ್ದು, ವೈರಲ್ ಆಗಲಾರಂಭಿಸಿವೆ.