ಡಾ.ರಾಜಕುಮಾರ್ ಅವರ ಕಂಚಿನ ಪುತ್ಥಳಿ ಕಳವು; ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

Dr Raj
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಿನಿಮಾ ನಟರ ಪುತ್ಥಳಿ ವಿಚಾರ ಆಗಾಗ ಮುನ್ನೆಲೆಗೆ ಬರುವುದುಂಟು. ಇದೀಗ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ ಪುತ್ಥಳಿ ವಿಷಯ ಕೂಡ ಸದ್ದು ಮಾಡುತ್ತಿದೆ. ಹಾಗಂತ ಇದೆಲ್ಲೋ ಪುತ್ಥಳಿ ಸ್ಥಾಪನೆ ಮಾಡುವ ಕುರಿತ ವಿಷಯವಲ್ಲ. ಬದಲಿಗೆ, ಇದ್ದ ಪುತ್ಥಳಿಯನ್ನು ಕದ್ದೊಯ್ದ ವಿಚಾರ.

ಹೌದು.. ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಕಂಚಿನ ಪುತ್ಥಳಿಯೊಂದು ಕಳವಾಗಿದೆ. ಬೆಂಗಳೂರಿನ ಲುಂಬಿನಿ ಗಾರ್ಡನ್​​ನಲ್ಲಿದ್ದ ಪುತ್ಥಳಿ ಎರಡು ದಿನಗಳಿಂದ ಕಾಣಿಸುತ್ತಿಲ್ಲ. ಈ ಪುತ್ಥಳಿಯನ್ನು ಯಾರೋ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಡಾ.ರಾಜಕುಮಾರ್ ಅವರ ಕಂಚಿನ ಪುತ್ಥಳಿ ಕಳವಾಗಿರುವ ಕುರಿತು ಅರಣ್ಯಾಧಿಕಾರಿ ಯೋಗೇಶ್ ಎಂಬವರು ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಪುತ್ಥಳಿಯನ್ನು ಕದ್ದು ಗುಜರಿ ಅಂಗಡಿಗೆ ಮಾರಿದ್ದಾರೆ ಎನ್ನಲಾಗುತ್ತಿದೆ. ಆರೋಪಿಗಳು ಹಾಗೂ ಪುತ್ಥಳಿಯ ಕುರಿತ ನಿಖರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net