

ಮುಂಬೈ: ಇಂದಿಗೂ ನಮ್ಮ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಆಚರಣೆಗಳು ನಡೆಯುತ್ತಿರುವುದು ದುರ್ದೈವದ ಸಂಗತಿ. ನಮ್ಮ ದೇಶದಲ್ಲಿ ವಿವಿಧ ರೀತಿಯ ಸಮುದಾಯಗಳು ನೆಲೆಸಿದ್ದು, ತಮ್ಮದೇ ರೀತಿಯ ವಿಭಿನ್ನ ಆಚರಣೆಗಳನ್ನು ಹೊಂದಿವೆ. ಆದರೆ, ಶಿಕ್ಷಣದ ಕೊರತೆಯಿಂದಾಗಿ ಅನೇಕರು ಮೂಢನಂಬಿಕೆಗೆ ಕಟ್ಟುಬಿದ್ದಿದ್ದಾರೆ. ಅಂಥದ್ದೇ ಒಂದು ವಿಭಿನ್ನ, ವಿಚಿತ್ರ ಹಾಗೂ ಅಮಾನವೀಯ ಆಚರಣೆ ಇಲ್ಲಿದೆ ನೋಡಿ.
ಈ ವಿಚಿತ್ರ ಆಚರಣೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿರುವ ಸಮುದಾಯದಲ್ಲಿ ಇಂದಿಗೂ ಜೀವಂತವಿದೆ. ಒಮ್ಮೆ ಅದರ ಬಗ್ಗೆ ಕೇಳಿದರೆ ನಿಮಗೆ ಶಾಕ್ ಆದರೂ ಅಚ್ಚರಿಪಡಬೇಕಿಲ್ಲ. ಇಂದಿಗೂ ಮಹಿಳೆಯರ ಗುಣಗಳನ್ನು ತಿಳಿದುಕೊಳ್ಳಲು ಅನೇಕ ಪರೀಕ್ಷೆಗಳನ್ನು ನೀಡುವುದು ಕೆಲವೆಡೆ ಚಾಲ್ತಿಯಲ್ಲಿದೆ. ಆದರೆ, ಪುಣೆಯ ಸಮುದಾಯವೊಂದರಲ್ಲಿ ನಡೆಸುವ ಪರೀಕ್ಷೆ ತುಂಬಾ ವಿಚಿತ್ರ ಎನಿಸದೇ ಇರದು. ಈ ಆಚರಣೆಯನ್ನು ಕಂಜಾರ್ಭತ್ ಸಮುದಾಯದಲ್ಲಿ ಆಚರಿಸಲಾಗುತ್ತದೆ.
ಇನ್ನು ಯಾವುದಪ್ಪ ಆಚರಣೆ ಎಂದಾದರೆ, ಈ ಸಮುದಾಯದಲ್ಲಿ ಮದುವೆ ದಿನದ ರಾತ್ರಿ ವರ ಮತ್ತು ವಧುವನ್ನು ಕೋಣೆಯಲ್ಲಿ ಕೂಡಿ ಹಾಕಿ ಬಾಗಿಲ್ ಬಂದ್ ಮಾಡುತ್ತಾರೆ. ಅದಕ್ಕೂ ಮುನ್ನ ಬಿಳಿ ಬಣ್ಣದ ಬೆಡ್ಸೀಟ್ ಅನ್ನು ಮಲಗುವ ಬೆಡ್ ಮೇಲೆ ಹಾಕಿರಲಾಗುತ್ತದೆ. ಬಳಿಕ ಯಾರೂ ಒಳಗೆ ಅಥವಾ ಹೊರಗೆ ಬರಲು ಸಾಧ್ಯವಾಗದಂತೆ ಎಲ್ಲ ಜನರು ಕೋಣೆಯ ಹೊರಗೆ ಕುಳಿತುಕೊಳ್ಳುತ್ತಾರೆ. ವರ ಮತ್ತು ವಧುವಿನ ಮೊದಲ ರಾತ್ರಿ ಮುಗಿದ ಬಳಿಕ ಜನರು ಕೋಣೆಯೊಳಗೆ ಹೋಗಿ ಬೆಡ್ಶೀಟ್ ನೋಡುತ್ತಾರೆ. ಒಂದು ವೇಳೆ ಬೆಡ್ಶೀಟ್ನಲ್ಲಿ ರಕ್ತದ ಕಲೆ ಏನಾದರೂ ಇದ್ದರೆ ಜನರ ಪ್ರಕಾರ ವಧು ಕನ್ಯೆ ಎಂದರ್ಥ.
ಕೆಲವೊಂದು ಕಾರಣಗಳಿಂದ ವಧು ಮೊದಲೇ ಕನ್ಯತ್ವ ಕಳೆದುಕೊಂಡು, ಬೆಡ್ಶೀಟ್ನಲ್ಲಿ ಏನಾದರೂ ರಕ್ತದ ಕಲೆ ಇರದೇ ಹೋದರೆ, ವಧುವಿಗೆ ತುಂಬಾ ಕಿರುಕುಳ ನೀಡಲಾಗುತ್ತದೆ. ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿದ್ದರೂ ಇಂದಿಗೂ ಕೆಟ್ಟ ಆಚರಣೆಯಿರುವುದು ದುರ್ದೈವದ ಸಂಗತಿಯೇ. ಆದರೆ, ಸರ್ಕಾರಕ್ಕೂ ಸಹ ಈ ಬಗ್ಗೆ ಇಂದಿಗೂ ತಿಳಿದಿಲ್ಲ ಎಂಬುದು ನಂಬಲು ಸಾಧ್ಯವೇ? ಒಂದು ವೇಳೆ ಯಾಕೆ ಹೀಗೆ ಮಾಡುತ್ತೀರಾ ಎಂದು ಪ್ರಶ್ನಿಸಿದರೆ, ಬರುವ ಉತ್ತರ ಅದು ನಮ್ಮ ಆಚರಣೆ ಎನ್ನುತ್ತಾರೆ. ಮನುಷ್ಯು ಸಂಪೂರ್ಣ ಶಿಕ್ಷಿತನಾಗುವವರೆಗೂ ಇಂತಹ ಆಚರಣೆಗಳು ತಪ್ಪಿದ್ದಲ್ಲ. (ಏಜೆನ್ಸೀಸ್)