ಮದುವೆಗಾಗಿ 1-10 ಲಕ್ಷ ರೂ.ಗೆ ವಧುಗಳ ಮಾರಾಟ; ಇದು ಇಲ್ಲಿನ ಉದ್ಯಮವಂತೆ! | Marriage

dk - 2025-05-07T191635.480
Published on

Marriage: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 14 ವರ್ಷದ ಬುಡಕಟ್ಟು ಬಾಲಕಿಯನ್ನು ಹಣ ಕೊಟ್ಟು ಮದುವೆಯಾದ ಆರೋಪದ ಮೇಲೆ 35 ವರ್ಷದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.

ಆರೋಪಿಯು ಬಾಲಕಿಯ ಪಾಲಕರಿಗೆ 1.20 ರೂ. ನೀಡಿದ್ದ. ಈ ಪ್ರಕರಣದಲ್ಲಿ ಇದೀಗ 11 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಹಿಂತೆ ಸೆಕ್ಷನ್ 143(ಕಳ್ಳಸಾಗಾಣಿಕೆ) ಮತ್ತು ಬಾಲ್ಯ ವಿವಾಹತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಇತರ ಭಾಗಗಳಿಂದ ಪುರುಷರು ಥಾಣೆ ಜಿಲ್ಲೆಯ ಬುಡಕಟ್ಟು ಪ್ರದೇಶಗಳಿಗೆ ಬಂತು ವಧುಗಳನ್ನು ಖರೀದಿಸುತ್ತಾರೆ. ಹೊರಗಿನ ಪ್ರಪಂಚಕ್ಕೆ ವಿಚಿತ್ರ ಪದ್ಧತಿ ಎನಿಸಿದರೂ ಇದು ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ಸಂತ್ರಸ್ತೆಯ ತಂದೆ ಮಹಾರಾಷ್ಟ್ರದ ಅಹ್ಮದ್‌ನಗರದ ನಿವಾಸಿ ಮಂಗೇಶ್ ಗಡೇಕರ್ (35) ಜೊತೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು. ಇದಕ್ಕಾಗಿ ಹಣವನ್ನೂ ತೆಗೆದುಕೊಂಡರು. ಈ ವಿವಾಹದ ಬಗ್ಗೆ ಪೊಲೀಸರಿಗೆ ಎನ್​ಜಿಒ ಒಂದರಿಂದ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 ರಿಂದ 10 ಲಕ್ಷ ರೂಪಾಯಿ ಮಾರಾಟ?

ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಇದೇ ರೀತಿಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಜನರು ಇಲ್ಲಿಂದ ಹುಡುಗಿಯರನ್ನು ಖರೀದಿಸಿ ಮದುವೆಯಾಗುತ್ತಾರೆ. ಅದರಲ್ಲೂ ಹರಿಯಾಣ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಕೊರತೆ ಇರುವುದರಿಂದ ಜನರು ಮದುವೆಗೆ 1 ರಿಂದ 10 ಲಕ್ಷ ರೂಪಾಯಿ ನೀಡಿ ಹೆಣ್ಣು ಮಕ್ಕಳನ್ನು ಖರೀದಿಸುತ್ತಾರೆ. ಅನೇಕ ಸ್ಥಳಗಳಲ್ಲಿ, ಒಬ್ಬ ಮಹಿಳೆಯನ್ನು ಹಲವಾರು ಬಾರಿ ಖರೀದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಇದು ಒಂದು ಉದ್ಯಮವಾಗಿ ಮಾರ್ಪಟ್ಟಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net