VIDEO| ಹುಲಿಯನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದ ಹಸುಗಳ ಹಿಂಡು

Cow Herd
Published on

ಭೋಪಾಲ್​: ಆಶ್ಚರ್ಯಕಾರಿ ಘಟನೆ ಒಂದರಲ್ಲಿ ಹಸುಗಳ ಹಿಂಡೊಂದು ಹುಲಿಯನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಭೋಪಾಲ್​​ನ ಕೆರ್ವಾ ಎಂಬ ಪ್ರದೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕೆರ್ವಾದಲ್ಲಿರುವ ಹಸುಗಳ ಫಾರಮ್​ ಒಂದರಲ್ಲಿ ನಡೆದಿದೆ.

ವಿಡಿಯೋ ವೈರಲ್​

ವೈರಲ್​ ಆಗಿರುವ ವಿಡಿಯೋದಲ್ಲಿ ಹಸು ಒಂದರ ಮೇಲೆ ಹುಲಿಯೊಂದು ದಾಳಿ ಮಾಡುತ್ತದೆ. ಇದನ್ನು ಕಂಡ ಗುಂಪಿನಲ್ಲಿದ್ದ ಇತರೆ ಹಸುಗಳು ಹುಲಿಯ ವಿರುದ್ಧ ತಿರುಗಿ ಬೀಳುತ್ತವೆ. ಸುಮಾರು ಮೂರು ಘಂಟೆಗಳ ಕಾಲ ಹುಲಿ ತನ್ನ ಬೇಟೆಗಾಗಿ ಹೊಂಚು ಹಾಕಿ ಕಾದರೂ ಯಾವುದೇ ಪ್ರಯೋಜನವಿಲ್ಲದೆ ವಾಪಸ್​ ಆಗಿರುವುದನ್ನು ನೋಡಬಹುದಾಗಿದೆ.

ಸ್ಥಿತಿ ಗಂಭೀರ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಫಾರಮ್​ನ ಮಾಲೀಕ ಕಳೆದ ಆರು ತಿಂಗಲ ಅವಧಿಯಲ್ಲಿ ಐದು ಬಾರಿ ಹುಲಿ ಕಾಣಿಸಿಕೊಂಡಿದ್ದು, ಜಮೀನಿನ ಸುತ್ತ ಅಳವಡಿಸಿರುವ 14 ಅಡಿ ಉದ್ದದ ತಂತಿ ಬೇಲಿಯನ್ನು ನಾಶ ಮಾಡಿದೆ. ಈ ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ಧಾರೆ.

76 ಎಕರೆ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿ ದಾಳಿಗೆ ತುತ್ತಾಗಿರುವ ಹಸುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಫಾರಮ್​ನ ಮಾಲೀಕ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net